ವಿರಾಜಪೇಟೆ; ಬೀದಿಬದಿ ವ್ಯಾಪಾರಗಳನ್ನು ನಡೆಸುತ್ತಿರುವವರ ಬಳಿ ಹೆಚ್ಚಿನ ಸುಂಕ ವಸೂಲಾತಿ ಕೈ ಬಿಡಬೇಕು: ಜೆಡಿಎಸ್ ತಾಲೂಕು ಅಧ್ಯಕ್ಷ ಪಿ.ಎ. ಮಂಜುನಾಥ್

Mar 12, 2026 - 19:20
 0  284
ವಿರಾಜಪೇಟೆ;  ಬೀದಿಬದಿ ವ್ಯಾಪಾರಗಳನ್ನು ನಡೆಸುತ್ತಿರುವವರ  ಬಳಿ ಹೆಚ್ಚಿನ ಸುಂಕ ವಸೂಲಾತಿ ಕೈ ಬಿಡಬೇಕು: ಜೆಡಿಎಸ್ ತಾಲೂಕು ಅಧ್ಯಕ್ಷ ಪಿ.ಎ. ಮಂಜುನಾಥ್
ಮಂಜುನಾಥ್

ವಿರಾಜಪೇಟೆ: ವಿರಾಜಪೇಟೆ ಪುರಸಭೆ ವ್ಯಾಪ್ತಿಯಲ್ಲಿ ಬೀದಿಬದಿ ವ್ಯಾಪಾರಗಳನ್ನು ನಡೆಸುತ್ತಿರುವ ವ್ಯಾಪಾರಸ್ಥರ ಬಳಿ ಹೆಚ್ಚಿಗೆ ಸುಂಕ ವಸೂಲಾತಿಯನ್ನು ಮಾಡುತ್ತಿರುವುದನ್ನು ಪುರಸಭೆ ಅಧಿಕಾರಿಗಳು ಕೈ ಬಿಡಬೇಕು ಎಂದು ಜೆಡಿಎಸ್ ತಾಲೂಕು ಅಧ್ಯಕ್ಷ ಪಿ.ಎ. ಮಂಜುನಾಥ್ ಹೇಳಿದರು ಈ ಕುರಿತು ವಿರಾಜಪೇಟೆ ಪುರಸಭೆ ಎದುರು ಪುರಸಭೆಯ ಆಡಳಿತ ವೈಖರಿ ಬಗ್ಗೆ ಕಿಡಿಕಾರಿದ ಮಂಜುನಾಥ್ ಅವರು, ವಿರಾಜಪೇಟೆ ಪಟ್ಟಣ ಪಂಚಾಯಿತಿ ಇತ್ತೀಚಿಗೆ ಪುರಸಭೆಯಾಗಿ ಮೇಲ್ದರ್ಜೆಗೆ ಏರಿಸಲಾಗಿದೆ. ಪುರಸಭೆಯಲ್ಲಿ ಆಡಳಿತ ನಡೆಸಿದ ಪಟ್ಟಭದ್ರ ಹಿತಾಶಕ್ತಿಗಳು, ಆತೃಪ್ತ ಆತ್ಮಗಳು ಈಗಲೂ ಪುರಸಭೆ ಆವರಣದಲ್ಲಿ ಮತ್ತು ಕಛೇರಿಯ ಸಭಾಂಗಣದಲ್ಲಿ ಕುಳಿತು ವೈಯುಕ್ತಿಕ ದಂದೆಯಲ್ಲಿ ತೊಡಗಿದ್ದಾರೆ.

ಅವಧಿ ಮುಗಿದ ಕಾರಣ ಮಾಜಿ ಸದಸ್ಯರು ಮತ್ತೆ ಮತ್ತೆ ಪುರಸಭೆಗೆ ಬಂದು ಮುಖ್ಯಾಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳುವುದು ನಡೆಯುತ್ತಿದೆ. ಆದುದರಿಂದ ಆಡಳಿತ ಅಧಿಕಾರಿ ಕಛೇರಿ ಹೊರತು ಪಡಿಸಿ ಉಳಿದ ಕೊಠಡಿಗಳನ್ನು ಮುಂದಿನ ಪುರಸಭೆ ಚುನಾವಣೆಯವರೆಗೆ ಬಂದ್ ಮಾಡುವಂತೆ ತಿಳಿಸಿದ್ದಾರೆ. ಮಾಜಿ ಸದಸ್ಯರಿಗೆ ಮಣೆ ಹಾಕುವ ಪದ್ಧತಿ ನಿಲ್ಲಬೇಕು. ಇದಕ್ಕೆಲ್ಲ ಪುರಸಭೆ ಮುಖ್ಯಾಧಿಕಾರಗಳೇ ಹೊಣೆ. ಇಲ್ಲದಿದ್ದರೆ ಆಡಳಿತ ಅಧಿಕಾರಿಗಳ ವಿರುದ್ಧ ಪುರಸಭೆ ಕಛೇರಿ ಮುಂದೆ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಮಂಜುನಾಥ್ ತಿಳಿಸಿದ್ದಾರೆ. ಅಲ್ಲದೆ ವಿರಾಜಪೇಟೆ ಎನ್ನುವುದು ಪುಟ್ಟ ಪಟ್ಟಣವಾಗಿದ್ದು ಇಲ್ಲಿಗೆ ಗ್ರಾಮಂತರ ಪ್ರದೆಶಗಳಿಂದ ಬರುವ ಜನರೇ ಹೆಚ್ಚಾಗಿದ್ದಾರೆ.

 ಹೀಗಿರುವಾಗ ದಿನನಿತ್ಯ ವಾಹನ ಪಾರ್ಕಿಂಗ್‌ಗೆ ಸುಂಕ ತೆಗೆದುಕೊಳ್ಳುವುದನ್ನು ನಿಲ್ಲಿಸಬೇಕು. ಇದು ಜನಸಾಮಾನ್ಯರಿಗೆ ನಿತ್ಯ ಹೊರೆಯಾಗುತ್ತದೆ ಎಂದರಲ್ಲದೆ ಪುರಸಭೆ ಮುಖ್ಯಾಧಿಕಾರಿಗಳು ಪಟ್ಟಭದ್ರ ಹಿತಾಶಕ್ತಿಗಳನ್ನು ದೂರವಿಡಬೇಕು. ಪುರಸಭೆಯ ಸಭಾಂಗಣದಲ್ಲಿ ವೈಯುಕ್ತಿಕ ಲಾಭಕ್ಕಾಗಿ ಕುಳಿತುಕೊಳ್ಳುವ ಸದಸ್ಯರುಗಳನ್ನು ನಿಯಂತ್ರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಸಾರ್ವಜನಿಕರೊಡಗೂಡಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 1
Angry Angry 0
Sad Sad 0
Wow Wow 0