ವಿರಾಜಪೇಟೆ; ನಿಯಂತ್ರಣ ತಪ್ಪಿದ ವಾಹನ: ಸ್ಥಳದಲ್ಲೇ ಮೃತಪಟ್ಟ ಚಾಲಕ

May 17, 2026 - 09:55
 0  2k
ವಿರಾಜಪೇಟೆ; ನಿಯಂತ್ರಣ ತಪ್ಪಿದ ವಾಹನ: ಸ್ಥಳದಲ್ಲೇ ಮೃತಪಟ್ಟ ಚಾಲಕ

ವಿರಾಜಪೇಟೆ:ಮನೆಗೆ ಸಮಯಕ್ಕೆ ತೆರಳುವ ತವಕ,ವಾಹನ ಚಾಲನೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ ಕಮರಿ ಸ್ಥಳದಲ್ಲೇ ಮೃತರಾದ ಘಟನೆ ಕುಕ್ಲೂರು ಚೆಂಬೆಬೆಳ್ಳೂರು ಮುಖ್ಯ ರಸ್ತೆಯಲ್ಲಿ ನಡೆದಿದೆ.

ವಿರಾಜಪೇಟೆ ತಾಲ್ಲೂಕಿನ ಚೆಂಬೆಬೆಳ್ಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ನಿವಾಸಿ ದೇವಯ್ಯ ಎಂಬುವವರ ಲೈನ್ ಮನೆಯಲ್ಲಿ ಪ್ರಸ್ತುತ ವಾಸವಿದ್ದು ಪಾಲಿಬೆಟ್ಟ ನಿವಾಸಿಯಾಗಿರುವ ವಸಂತ ಪ್ರಾಯ 59 ವರ್ಷ ವಾಹನ ನಿಯಂತ್ರಣ ಕಳೆದುಕೊಂಡು ಅಪಘಾತ ವಾಗಿ ಸಾವುನೊಪ್ಪಿದ ವ್ಯಕ್ತಿ.

ಘಟನೆ ವಿವರ: ಮೃತ ವ್ಯಕ್ತಿ ಮೂಲತಃ ಪಾಲಿಬೆಟ್ಟ ನಿವಾಸಿಯಾಗಿದ್ದು. ಸುಮಾರು ನಾಲ್ಕು ವರ್ಷಗಳ ಹಿಂದೆ ಚೆಂಬೆಬೆಳ್ಳೂರು ಗ್ರಾಮ ನಿವಾಸಿ ದೇವಯ್ಯ ಎಂಬುವವರ ತೋಟದ ಕೆಲಸಕ್ಕೆ ಆಗಮಿಸಿ ವಾಹನ ಚಾಲಕನಾಗಿ ಕರ್ತವ್ಯ ನಿರ್ವಹಿಸುತಿದ್ದರು.ಶನಿವಾರ ಮಾಲೀಕರ ಅದೇಶದ ಮೇರೆಗೆ ಸಂಜೆ 4 ಗಂಟೆಗೆ ಮಾಲೀಕರು ಹೊಂದಿರುವ ವಾಹನ ಮಹೇಂದ್ರ ಜೀಪು ಸಂಖ್ಯೆ ಕೆಎ 12ಎಂ3384 ರಲ್ಲಿ ಚಾಲನೆಯೋಂದಿಗೆ ವಿರಾಜಪೇಟೆ ನಗರಕ್ಕೆ ಆಗಮಿಸಿದ್ದು ನಂತರ ಮನೆಗೆ ತೆರಳಿದ್ದಾರೆ. ಮನೆಗೆ ತೆರಳುವ ವೇಳೆ ಕುಕ್ಲೂರು ಚೆಂಬೆಬೆಳ್ಳೂರು ಮುಖ್ಯ ರಸ್ತೆಯಲ್ಲಿ ಚಾಲನೆಯಲ್ಲಿದ್ದ ವಾಹನ ಚಾಲಕನ ನಿಯಂತ್ರಣ ತಪ್ಪಿ ಗದ್ದೆ ಭಾಗಕ್ಕೆ ಕಮರಿದೆ.

 ಪರಿಣಾಮ ಚಾಲಕನ ದೇಹದ ಮೇಲೆ ವಾಹನ ಬಿದ್ದು ತಲೆ ಭಾಗ ಹಾಗೂ ಕಾಲು ಭಾಗಕ್ಕೆ ಗಂಭೀರವಾದ ಗಾಯಗಳು ಸಂಭವಿಸಿ ಅಧಿಕವಾಗಿ ರಕ್ತ ಶ್ರವವಾಗಿ ಸ್ಥಳದಲ್ಲೇ ಮರಣಹೊಂದಿದ್ದಾರೆ. ದಾರಿ ಹೋಕರು ನೀಡಿದ ಮಾಹಿತಿ ಮೇರೆಗೆ ಗ್ರಾಮಾಂತರ ಪೊಲೀಸ್ ಠಾಣೆ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿ.

ಮೃತ ಶರೀರವನ್ನು ವಿರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ತೋಟದ ಮಾಲೀಕರು ದೇವಯ್ಯ ಅವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 106(1) ಬಿ.ಎನ್.ಎಸ್ ಆಕಸ್ಮಿಕ ಅಪಘಾತ ಮರಣ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.

ವರದಿ;ಕಿಶೋರ್ ಕುಮಾರ್ ಶೆಟ್ಟಿ

What's Your Reaction?

Like Like 0
Dislike Dislike 0
Love Love 1
Funny Funny 0
Angry Angry 0
Sad Sad 5
Wow Wow 0