ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದ ಪತಿಗೆ ಜೀವಾವಧಿ ಶಿಕ್ಷೆ ವಿಧಿಸಿದ ವಿರಾಜಪೇಟೆ ನ್ಯಾಯಾಲಯ: 14 ವರ್ಷಗಳ ನಂತರ ಆರೋಪಿಯ ಬಂಧನ| 2010ರಲ್ಲಿ ಹಾತೂರು ಗ್ರಾಮದಲ್ಲಿ ನಡೆದ ಘಟನೆ

Oct 9, 2025 - 20:39
Oct 9, 2025 - 22:35
 0  1.6k
ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದ ಪತಿಗೆ ಜೀವಾವಧಿ ಶಿಕ್ಷೆ ವಿಧಿಸಿದ ವಿರಾಜಪೇಟೆ  ನ್ಯಾಯಾಲಯ:   14 ವರ್ಷಗಳ ನಂತರ ಆರೋಪಿಯ ಬಂಧನ|  2010ರಲ್ಲಿ ಹಾತೂರು ಗ್ರಾಮದಲ್ಲಿ ನಡೆದ ಘಟನೆ
Photo credit: The Indian express

ವರದಿ: ಕಿಶೋರ್ ಕುಮಾರ್ ಶೆಟ್ಟಿ

ವಿರಾಜಪೇಟೆ: ಮಕ್ಕಳಿಗೆ ಹೊರಗೆ ಹೋಗಿ ಬರುತ್ತೇವೆ ಎಂದು ತಿಳಿಸಿ, ನಂತರ ಮನೆಗೆ ಬರುವ ವೇಳೆ ತಂದೆ ಒಬ್ಬನೇ ಮನೆಗೆ ಹಿಂತಿರುಗಿದ್ದಾನೆ. ಮಕ್ಕಳ ತಾಯಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದ ಘಟನೆಗೆ ಸಂಬಂಧಿಸಿದಂತೆ,ಕೊಲೆ ಆರೋಪಿಗೆ ಕಠಿಣ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. 

ಸಿದ್ದಾಪುರ ಹೊಳೆಕೆರೆ ಪೈಸಾರಿ ನಿವಾಸಿ,(ಮೂಲ ವಿಳಾಸ ಕೇರಳ ರಾಜ್ಯದ ಪಾಲಕಾಡ್ಡ್ ಜಿಲ್ಲೆಯ ಪಟ್ಟಾಂಬಿ ತಾಲೂಕು ಮುಂಞಳಿಂಙ ಗ್ರಾಮದ ನಿವಾಸಿ ಪೌತಿ ಉನ್ನಿಕೃಷ್ಣ ಎಂಬುವವರ ಪುತ್ರ ಮೂರೂ ಹೆಸರುಗಳಿಂದ ಗುರುತಿಸಿ ಕೊಂಡಿದ್ದ ಸುರೇಶ್, ವಿನೋದ್, ಅಶೋಕ ಪ್ರಾಯ (50) ವರ್ಷ, ಜೀವಾವಧಿ ಶಿಕ್ಷೆಗೆ ಗುರಿಯಾದ ವ್ಯಕ್ತಿ.

ಘಟನೆಯ ವಿವರ:

ಸುರೇಶ್ ,ಶಶಿಕಲಾ ಎಂಬುವವರೊಂದಿಗೆ ವಿವಾಹವಾಗಿ ಎರಡು ಮಕ್ಕಳನ್ನು ಹೊಂದಿದ್ದ. ದ.ಕೊಡಗಿನ ವಿವಿಧ ತೋಟದಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಮಾಚಯ್ಯ ಎಂಬುವವರ ಕಾಫಿ ತೋಟದಲ್ಲಿದ್ದ ಕೆಲಸವನ್ನು ತೊರೆದು, ಕುಟುಂಬ ಸಮೇತವಾಗಿ ಹಾತೂರು ಗ್ರಾಮದ ಕುಪ್ಪಂಡ ಎಂ. ಉತ್ತಪ್ಪ ಎಂಬುವವರ ಕಾಫಿ ತೋಟದಲ್ಲಿ ಕೆಲಸ ಅರಿಸಿಕೊಂಡು ಬಂದಿದ್ದನು.

ಮಾಲೀಕರು ತೊಟದ ಲೈನ್ ಮನೆಯಲ್ಲಿ ತಂಗಿಕೊಂಡು ಕೆಲಸ ನಿರ್ವಹಿಸಲು ತಿಳಿಸಿದ್ದರು. ತೋಟದಲ್ಲಿ ಕಾರ್ಮಿಕ ವೃತ್ತಿ ಆರಂಭಿಸಿದ್ದ ದಿನಗಳು ಉರುಳಿದವು. ಅಂದೂ ಒಂದು ದಿನ ನಡೆಯಬಾರದು ನಡೆದು ಹೋಗುತ್ತದೆ. ತಾ.23-05-2010 ರಂದು ರಾತ್ರಿ 10 ರ ವೇಳೆಯಲ್ಲಿ ಲೈನ್ ಮನೆಯಲ್ಲಿದ್ದ ಸುರೇಶ್ ದಂಪತಿಗಳ ಈರ್ವರು ಮಕ್ಕಳು ಗಾಬರಿಗೊಂಡು ಭಯಗೊಂಡು ತೋಟದ ಮಾಲೀಕರ ಮನೆ ಬಾಗಿಲು ತಟ್ಟಿದ್ದಾರೆ.

ಮಾಲೀಕರಾದ ಉತ್ತಪ್ಪ ಅವರು ಬಾಗಿಲು ತೆರೆದು ಮಕ್ಕಳನ್ನು ಸಂತೈಸಿ ಕೇಳುತ್ತಾರೆ. ಆ ಸಂದರ್ಭ ಮಕ್ಕಳು.... ತಂದೆಯವರು ತಮ್ಮ ತಾಯಿಗೆ " ನೀನು ಬೆರೆಯವರೊಂದಿಗೆ ಸಹವಾಸ ಮಾಡಿ ನನ್ನೊಂದಿಗೆ ಸಂಸಾರ ಮಾಡುತಿಲ್ಲ, ಎಂದು ಹೇಳಿಕೊಂಡು ಜಗಳ ಮಾಡುತಿದ್ದರು. ನಂತರ ನಡಿ ನಾವು ಹೊರಗೆ ಹೋಗಿ ಬರುವ ಎಂದು ತಿಳಿಸಿ ಮನೆಯಿಂದ ತೆರಳಿದ್ದಾರೆ. ನಂತರ 10 ಗಂಟೆಗೆ ತಂದೆ ಒಬ್ಬರೆ ಮನೆಗೆ ಹಿಂದಿರುಗಿದ್ದಾರೆ ಆದರೆ ತಾಯಿ ಜೊತೆಯಲ್ಲಿ ಇರಲಿಲ್ಲ ಎಂದು ಹೇಳುತ್ತಾರೆ. ಮಕ್ಕಳ ಮಾತನು ಕೇಳಿದ ಮಾಲೀಕರು ತಮ್ಮ ಅಣ್ಣ ಸುಬ್ಬಯ್ಯ ಅವರೊಂದಿಗೆ ಹುಡುಕಾಟ ನಡೆಸುತ್ತಾರೆ. ಮಕ್ಕಳ ತಾಯಿ ಪತ್ತೆಯಾಗುವುದಿಲ್ಲ .

 ಬಳಿಕ ಮಕ್ಕಳ ಮಾವ ಅಂದರೆ ಶಶಿಕಲಾ ಅವರ ಅಣ್ಣ ಅವರಿಗೆ ದೂರವಾಣಿ ಕರೆ ಮಾಡಿ ವಿಷಯ ತಿಳಿಸುತ್ತಾರೆ. ಕರೆ ಸ್ವೀಕರಿಸಿದ ಗಣೇಶ್ ಅವರು ಸುರೇಶ್ ನನಗೆ ಕರೆ ಮಾಡಿ ನಿನ್ನ ತಂಗಿ ಶಶಿಕಲಾಳನ್ನು ಕೊಲೆ ಮಾಡಿ ಬಿಸಾಕಿದ್ದೇನೆ ಮಕ್ಕಳನ್ನು ಕರೆದುಕೊಂಡು ಹೋಗು ಎಂದು ತಿಳಿಸುತ್ತಾರೆ. ತೋಟದ ಮಾಲೀಕರು ಮತ್ತು ಮಾಲಿಕರ ಅಣ್ಣ ಈರ್ವರು ಹಾತೂರು ಗ್ರಾಮದ ಎಲ್ಲಡೆ ಹುಡುಕಾಟ ನಡೆಸುತ್ತಾರೆ ಕೊನೆಗೆ ಚಂದ್ರಶೇಕರ್ ಎಂಬುವವರ ತೋಟದ ಬೇಲಿಯಲ್ಲಿ ಶಶಿಕಲಾ ರಕ್ತಸಿಕ್ತ ದೇಹವು ಶವವಾಗಿ ಪತ್ತೆಯಾಗುತ್ತದೆ.

ಪತ್ನಿಯನ್ನು ಕತ್ತಿಯಿಂದ ಬರ್ಬರವಾಗಿ ಕೊಲೆ ಮಾಡಿದ ನಂತರ ಆರೋಪಿಯು ಸ್ಥಳದಿಂದ ನಾಪತ್ತೆಯಾಗಿರುತ್ತಾನೆ. ತೋಟದ ಮಾಲೀಕರು ಗೋಣಿಕೊಪ್ಪಲು ಪೊಲೀಸ್ ಠಾಣೆಯಲ್ಲಿ ಆರೋಪಿ ಸುರೇಶ ಮೇಲೆ ದೂರು ದಾಖಲಿಸುತ್ತಾರೆ. ಪೊಲೀಸರು ಪತ್ನಿ ಶಶಿಕಲಾಳನ್ನು ಕೊಲೆ ಮಾಡಿದ ಆರೋಪದ ಮೇಲೆ 302 ಐ.ಪಿ.ಸಿ ಕಾಯ್ದೆ ಅನ್ವಯ ವ್ಯಕ್ತಿಯ ಕೊಲೆ ಎಂದು ಪ್ರಕರಣ ದಾಖಲಿಸುತ್ತಾರೆ . ಗೊಣಿಕೊಪ್ಪಲು ವೃತ್ತ ನಿರೀಕ್ಷಕರಾದ ಸಿ.ಪಿ.ಐ ವೆಂಕಟೇಶ್ ಅವರು ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡು. ತನಿಖೆಯನ್ನು ಪೂರ್ಣಗೊಳಿಸಿ 30-03-2011 ರಂದು ನ್ಯಾಯಾಲಯಕ್ಕೆ ದೋಷಾರೋಪಣ ಪತ್ರವನ್ನು ಸಲ್ಲಿಸುತ್ತಾರೆ.

ಪ್ರಕರಣದ ವಿಚಾರಣೆಯು 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಿರಾಜಪೇಟೆಯಲ್ಲಿ ನಡೆಯುತ್ತದೆ. ವಿಚಾರಣೆಯ ವೇಳೆ ಆರೋಪಿ ಸುರೆಶ್ ತಲೆಮರಿಸಿಕೊಂಡಿದ್ದು ನ್ಯಾಯಾಲಯಕ್ಕೆ ಹಾಜರಾಗದೆ ಪ್ರಕರಣವನ್ನು ನ್ಯಾಯಾಲಯವು ಎಲ್.ಪಿ.ಸಿ ಯಂತೆ ನೋಂದಾಯಿಸಿಕೊಂಡು ವಿಚಾರಣೆ ನಡೆಸುತ್ತದೆ.

 ನಾಪತ್ತೆಯಾಗಿದ್ದ ಕೊಲೆ ಆರೋಪಿ 2024 ರಲ್ಲಿ ಪತ್ತೆ:

23-05-2010 ರಲ್ಲಿ ತನ್ನ ಪತ್ನಿ ಶಶಿಕಲಾಳನ್ನು ಬರ್ಬರವಾಗಿ ಹತ್ಯೆಗೈದು ತಲೆಮರೆಸಿಕೊಂಡು ಊರಿನಿಂದ ಊರಿಗೆ ಸ್ಥಳ ಬದಲಾವಣೆ ಮಾಡಿಕೊಂಡು ಜೀವನ ಮಾಡುತ್ತಿದ್ದ ಕೊಲೆ ಆರೋಪಿ, ಗೋಣಿಕೊಪ್ಪಲು ಅಪರಾಧ ಪತ್ತೆ ದಳದ ಸಿಬ್ಬಂದಿಗಳು ವ್ಯಾಪಕವಾಗಿ ಶೋಧ ನಡೆಸುತಿದ್ದರು. 2024 ಆಗಸ್ಟ್ ತಿಂಗಳಲ್ಲಿ ಮಡಿಕೇರಿಯ ಬೇಕರಿಯೊಂದರಲ್ಲಿ ಆರೋಪಿಯು ಕಾಫಿ ಸೇವನೆ ಮಾಡುತ್ತಿದ್ದ ವೇಳೆ ಆರೋಪಿಯ ಚಹರೆ ಪಟ್ಟಿ ಮತ್ತು ಹಾವಭಾವಗಳನ್ನು ಪರಿಶೀಲನೆ ಮಾಡಿದ ಪೊಲೀಸರು ಸಂಶಯದ ಮೇಲೆ ಬಂಧಸುತ್ತಾರೆ ತನಿಖೆಗೆ ಒಳಪಡಿದ ವೇಳೆಯಲ್ಲಿ ಪ್ರಕರಣದ ಆರೋಪಿ ಎಂದು ಸಾಬೀತಾಗುತ್ತದೆ.

 ತೀರ್ಪು ಪ್ರಕಟಿಸಿದ ನ್ಯಾಯಾಲಯ:

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಅರೋಪಿ ಮೇಲೆ ಹೊರಸಿದ್ದ ಆರೋಪವು ಸಾಬೀತಾದ ಹಿನ್ನಲೆಯಲ್ಲಿ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಿರಾಜಪೇಟೆಯ ಗೌ. ನ್ಯಾಯಾಧೀಶರಾದ ಎಸ್. ನಟರಾಜು ಅವರು ಪ್ರಕರಣದ ಆರೋಪಿಯಾಗಿರುವ ಸುರೇಶ್ ಅಪರಾಧಿ ಎಂದು, ಕಲಂ 302 ಐ.ಪಿ.ಸಿ ಗೇ ಕಠಿಣ ಜೀವಾವಧಿ ಶಿಕ್ಷೆ ಹಾಗೂ 50,000 ರೂ ದಂಡ ವಿಧಿಸಿದ್ದು . ದಂಡ ಕಟ್ಟಲು ತಪ್ಪಿದಲ್ಲಿ 06 ತಿಂಗಳ ಕಠಿಣ ಶಿಕ್ಷೆಯನ್ನು ವಿಧಿಸಿ ತೀರ್ಪು ನೀಡಿರುತ್ತಾರೆ.ಸರ್ಕಾರದ ಪರವಾಗಿ ಸರಕಾರಿ ಅಭಿಯೋಜಕರಾದ ಯಾಸಿನ್ ಅಹಮ್ಮದ್ ಅವರು ವಾದ ಮಂಡಿಸಿದರು.

What's Your Reaction?

Like Like 0
Dislike Dislike 0
Love Love 1
Funny Funny 0
Angry Angry 0
Sad Sad 0
Wow Wow 1