ವಿರಾಜಪೇಟೆ: ಪುರಸಭೆ ವ್ಯಾಪ್ತಿಯ ಗಾಂಧಿನಗರದಲ್ಲಿ 12 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ಕಾಂಕ್ರೀಟ್ ರಸ್ತೆ ಉದ್ಘಾಟಿಸಿದ ಶಾಸಕ‌ ಎಎಸ್ ಪೊನ್ನಣ್ಣ

ವಿರಾಜಪೇಟೆ: ಪುರಸಭೆ ವ್ಯಾಪ್ತಿಯ ಗಾಂಧಿನಗರದಲ್ಲಿ 12 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ಕಾಂಕ್ರೀಟ್ ರಸ್ತೆ ಉದ್ಘಾಟಿಸಿದ ಶಾಸಕ‌ ಎಎಸ್ ಪೊನ್ನಣ್ಣ

ವಿರಾಜಪೇಟೆ:ಪುರಸಭೆ ವ್ಯಾಪ್ತಿಯ ಗಾಂಧಿನಗರದಲ್ಲಿ ನೂತನವಾಗಿ 12 ಲಕ್ಷಗಳಲ್ಲಿ ನಿರ್ಮಾಣಗೊಂಡಿರುವ ಕಾಂಕ್ರೀಟ್ ರಸ್ತೆಯ ಲೋಕಾರ್ಪಣೆಯನ್ನು ಇಂದು ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್ ಪೊನ್ನಣ್ಣ ರವರು ನೆರವೇರಿಸಿದರು. ಸ್ವತಹ ನೂತನ ರಸ್ತೆಯಲ್ಲಿ ಸ್ಕೂಟರ್ ಚಲಾಯಿಸುವ ಮೂಲಕ ಶಾಸಕರು ಸಾರ್ವಜನಿಕರ ಗಮನ ಹೇಳಿದರು.

ಈ ಹಿಂದೆ ಈ ಭಾಗದ ಜನರ ಮನವಿಗೆ ಸ್ಪಂದಿಸಿ ರಸ್ತೆ ಅಭಿವೃದ್ಧಿಗೆ ಮಾನ್ಯ ಶಾಸಕರು ಅನುದಾನವನ್ನು ಒದಗಿಸಿದ್ದರು. ಉದ್ಘಾಟನೆಯ ಬಳಿಕ ರಸ್ತೆಯ ಗುಣಮಟ್ಟವನ್ನು ಸ್ವತಹ ಪರೀಕ್ಷಿಸಿದ ಮಾನ್ಯ ಶಾಸಕರು, ಸಾರ್ವಜನಿಕರು  ಸದುಪಯೋಗ ಪಡೆದುಕೊಳ್ಳಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ವಿರಾಜಪೇಟೆ ಬ್ಲಾಕ್ ಅಧ್ಯಕ್ಷರು ಪಟ್ಟಡ ರಂಜಿ ಪೂಣಚ್ಚ, ಕೊಳತಂಡ ಬೋಪಯ್ಯ ,ಕರ್ತಮಾಡ ಪೊನ್ನು, ಮಣಿ ,ಕುತಂಡ ರಂಜನ್ ,ವಾಟೆರೀರ ತಿಲಕ್ ,ಕಲಿಯಂಡ ಗಿರೀಶ್ , ಜೇರಿ ಲೋಬೊ , ಪೊನ್ನಣ್ಣ, ಪುರಾಸಭೆ ಮಾಜಿಸದಸ್ಯರು,ಪಕ್ಷದ ಮುಖಂಡರು ,ಕಾರ್ಯಕರ್ತರು, ಸ್ಥಳೀಯ ಪ್ರಮುಖರುಉಪಸ್ಥಿತರಿದ್ದರು.