Kodagu

ವಯನಾಡು:ತಾಮರಶೇರಿ ಘಾಟ್ ಬಳಿ ಭೂಕಿತ, ಬದಲಿ ಮಾರ್ಗ ಬಳಸಲು‌ ಸೂಚನೆ

admincoorgdaily

ಮಡಿಕೇರಿ: ಕೊಡಗು ಜಿಲ್ಲೆಗೆ ಹೊಂದಿಕೊಂಡಿರುವ ನೆರೆಯ ಕೇರಳ ರಾಜ್ಯ ವಯನಾಡು ಜಿಲ್ಲೆಗೆ ಸಂಪರ್ಕಿಸುವ ತಾಮರಶೆರಿ ಘಾಟ್ ಬಳಿ ಭೂ ಕುಸಿತವಾಗಿರುವ ಹಿನ್ನಲೆ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ಈ ಸಂಬಂಧ ಈ ಜಿಲ್ಲೆ ಗಡಿಭಾಗವಾದ ಕುಟ್ಟ ಮೂಲಕ ವಯನಾಡು ಜಿಲ್ಲೆಗೆ ಗುಡಲ್ಲೂರು ಮಾರ್ಗವಾಗಿ ಸಂಚರಿಸುವ ವಾಹನಗಳನ್ನು ಬದಲೀ ಮಾರ್ಗವಾದ ಗೋಣಿಕೊಪ್ಪ ಕೂಟುಪುಳ - ಇರಿಟ್ಟಿ (ಕಣ್ಣೂರು ಜಿಲ್ಲೆ) ಮಾರ್ಗದ ಮೂಲಕ ಸಂಚರಿಸಲು ಅಗತ್ಯ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳು, ವಯನಾಡು ಜಿಲ್ಲೆ, ಕೇರಳ ರವರು ಕೋರಿದ್ದಾರೆ ಆದ್ದರಿಂದ, ಗುಡಲ್ಲೂರು ರಸ್ತೆಯಲ್ಲಿ ವಾಹನ ಸಂಚಾರ ಸುಗಮವಾಗುವ ವರೆಗೆ ಜಿಲ್ಲೆಯ ಕುಟ್ಟ ಮಾರ್ಗವಾಗಿ ಸಂಚರಿಸುವ ಸಾರ್ವಜನಿಕರು ಬದಲೀ ರಸ್ತೆ ಮಾಕುಟ್ಟ ಮುಖಾಂತರ ತಾಮರಶೇರಿ ಘಾಟ್, ಗುಡಲೂರು ಮಾರ್ಗವನ್ನು ಬಳಸಲು ಕೊಡಗು ಜಿಲ್ಲಾಡಳಿತ ಸಲಹೆ ನೀಡಿದೆ.