ಕಾಡಾನೆ- ಮಾನವ ಸಂಘರ್ಷ, ಏಪ್ರಿಲ್ ತಿಂಗಳಲ್ಲಿ ಬೃಹತ್ ಹೋರಾಟಕ್ಕೆ ರೈತ ಸಂಘ ನಿರ್ಧಾರ
ವಿರಾಜಪೇಟೆ: ಜಿಲ್ಲೆಯಲ್ಲಿ ದಶಕಗಳಿಂದ ಕಾಡನೆ ಮಾನವ ಸಂಘರ್ಷ, ವನ್ಯ ಮೃಗಗಳ ಉಪಟಳಗಳನ್ನು ರೈತರು ಮತ್ತು ಕಾರ್ಮಿಕರು ಎದುರಿಸುತ್ತಿದ್ದು,ಶಾಶ್ವತ ಪರಿಹಾರಕ್ಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮುಂದಾಗಲಿಲ್ಲ. ರೈತರ ಸಮಸ್ಯೆಗಳು ಮತ್ತು ಪರಿಹಾರಕ್ಕೆ ಬೃಹತ್ ಹೋರಾಟಕ್ಕೆ ಸಜ್ಜುಗೊಳ್ಳುವಂತೆ ರೈತ ಸಂಘದ ಸಭೆಯಲ್ಲಿ ನಿರ್ಣಯವಾಯಿತು.
ಕರ್ನಾಟಕ ರಾಜ್ಯ ರೈತ ಸಂಘ ಕೊಡಗು ಜಿಲ್ಲಾ ಘಟಕ ಮತ್ತು ಅಮ್ಮತಿ ಹೋಬಳಿ ಘಟಕ ಜಂಟಿಯಾಗಿ ರೈತ ಸಮಸ್ಯೆಗಳ ಸಾರ್ವಜನಿಕ ಸಭೆ ಗುಹ್ಯ ಅಗಸ್ಥೇಶ್ವರ ಸಹಕಾರ ಭವನದಲ್ಲಿ ಆಯೋಜಿಸಿತು.
ಕಾರ್ಯಕ್ರಮದ ಅಧ್ಯಕ್ಷತೆ ಮತ್ತ ಪ್ರಾಸ್ತಾವಿಕ ಭಾಷಣ ಮಾಡಿದ ಕ.ರಾ.ರೈತ ಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಅವರು, ತಿಂಗಳ ಒಂದರಲ್ಲಿ ಕಾಡಾನೆ ದಾಳಿಯಿಂದಾಗಿ ಐವರು ಮೃತಪಟ್ಟಿದ್ದಾರೆ. ಅರಣ್ಯ ಇಲಾಖೆಯು ಶಾಶ್ವತ ಪರಿಹಾರಕ್ಕೆ ಯೋಜನೆ ರೂಪಿಸದೆ ಸಂತ್ರಸ್ಥ ಕುಟುಂಬಕ್ಕೆ ಪರಿಹಾರ ನೀಡಿ ತೆರಳುತ್ತಿದೆ ಎಂದು ಆರೋಪಿಸಿದರು. ಕಾಡಾನೆಗಳ ಉಪಟಳ ಒಂದೆಡೆಯಾದರೆ ವನ್ಯಮೃಗಳ ಉಪಟಳದಿಂದ ರೈತರು ಕಂಗಾಲಾಗಿದ್ದಾರೆ. ಯಾವುದೇ ಪಕ್ಷ ಅದಿಕಾರಕ್ಕೆ ಬಂದರು ಕೂಡ ಕಾಡಾನೆ ಮಾನವ ಸಂಘರ್ಷಕ್ಕೆ ಇತಿಶ್ರೀ ಹಾಡಲು ಮುಂದಾಗದಿರುವುದು ವಿಷಾದನೀಯ. ರೈತರು ಸಂಘಟಿತವಾಗಬೇಕು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಬೆಳೆ ಪರಿಹಾರ ನೀಡುವಲ್ಲಿ ತಾರತಮ್ಯ ಮಾಡುತ್ತಿದೆ. ರಾಜ್ಯದಲ್ಲಿ ವಿವಿಧ ಭಾಗಗಳಲ್ಲಿ ಬೆಳೆ ಪರಿಹಾರ ನೀಡುತಿದ್ದರು. ಕೊಡಗು ಜಿಲ್ಲೆಯಲ್ಲಿ ಪರಿಹಾರ ವಿಳಂಬದೋರಣೆ ಮಾಡುತ್ತಿದೆ.ಸಮಸ್ಯೆಗಳ ವಿರುದ್ದ ಸಂಘಟಿತ ಹೋರಾಟಕ್ಕೆ ಸಜ್ಜುಗೊಳ್ಳಬೇಕು.
ರೈತರು ಎದುರಿಸುತ್ತಿರುವ ಸಮಸ್ಯೆಗಳಾದ ಬ್ಯಾಂಕ್ ಸಾಲ, ಆಸ್ತಿ ಮುಟ್ಟುಗೋಲು, ವಿದ್ಯುತ್ ಸಮಸ್ಯೆ, ಬೆಳೆ ಪರಿಹಾರ, ವನ್ಯಮೃಗಗಳಿಂದ ಉಪಟಳದಂತಹಾ ಗಂಭೀರ ಸಮಸ್ಯೆಗಳಿಗೆ ಪರಿಹಾರಕ್ಕಾಗಿ ಹೋರಾಟ ಒಂದೇ ಮಾರ್ಗ. ಆದುದರಿಂದ ಏಪ್ರಿಲ್ ತಿಂಗಳಲ್ಲಿ ಜಿಲ್ಲಾ ಅರಣ್ಯ ಭವನದ ಮುಂದೆ ಕಾರ್ಮಿಕ ಸಂಘಟನೆಗಳೊಙದಿಗೆ ರೈತ ಸಂಘವು ಬೃಹತ್ ಪ್ರತಿಭಟನೆಗೆ ಮುಂದಾಗಿದೆ ರೈತ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಸಭೆಯಲ್ಲಿ ಹೇಳಿದರು.
ಕಾರ್ಮಿಕ ಸಂಘಟನೆಯ ಮುಖಂಡರಾದ ಪಿ.ಆರ್ ಭರತ್ ಅವರು ಮಾತನಾಡಿ,ಅರಣ್ಯ ಇಲಾಖೆಯು ಕಾಡಾನೆ ಹಿಡಿಯುವ ನೆಪದಲ್ಲಿ ಅಖಂಡ ಭ್ರಷ್ಟಚಾರ ಮಾಡುತ್ತಿದೆ. ಸಾವು-ನೋವುಗಳು ಸಂಭವಿಸಿದರು ಕಾರ್ಮಿಕರು ರೈತರು, ಎದುರಿಸುತ್ತಿರುವ ಸಮಸ್ಯೆಗಳು ಶಾಶ್ವತ ಪರಿಹಾರಕ್ಕೆ ಮುಂದಾಗಲಿಲ್ಲ ಎಂದು ಆರೋಪಿದರು. ರಾಜ್ಯ ಮತ್ತು ಕೇಂದ್ರ ಸರ್ಕಾರದಲ್ಲಿ ಪಕ್ಷ ಶಾಸಕರು, ಸಂಸದರು ಬದಲಾವಣೆಯಾದರು ಕಾಡಾನೆ ಮಾನವ ಸಂಘರ್ಷ ಎಂದಿನಂತೆ ನಡೆಯುತ್ತಿದೆ. ಕಾಡಾನೆಗಳ ದಾಳಿಯಿಂದ ಬೆಳೆ ನಾಶ ಸಾವು-ನೋವುಗಳು ಸಂಭವಿಸಿದರು ರೈತರ ಮತ್ತು ಕಾರ್ಮಿಕ ಬದುಕು ಹಸನಾಗಲು ಸರ್ಕಾರಗಳಿಗೆ ಇಚ್ಚಾಶಕ್ತಿಯ ಕೊರತೆ ಕಾಣಿಸಿಕೊಂಡಿದೆ. ಕಾರ್ಮಿಕ ಸಂಘಟನೆಗಳೊಂದಿಗೆ ಮತ್ತೊಮ್ಮೆ ಸಭೆ ನಡೆಸಿ ರೈತಾಪಿ ಸಂಘಟನೆಯೊಂದಿಗೆ ಹೋರಾಟಕ್ಕೆ ಸಜ್ಜಾಗಬೇಕು ಎಂದು ಹೇಳಿದರು.
ಸಭೆಯಲ್ಲಿ ಸಿದ್ದಾಪುರ ಮತ್ತು ಅಮ್ಮತ್ತಿ ಹೋಬಳಿಯ ವಿವಿಧ ಸ್ಥಳಗಳೀಂದ ಆಗಮಿಸಿದ ರೈತ ಸಂಘದ ಸದಸ್ಯರು ಮತ್ತು ಸಾರ್ವಜನಿಕರು ತಮ್ಮ ಅಭಿಪ್ರಾಯಗಳನ್ನು ಅವಹಾಲುಗಳನ್ನು ಮಂಡಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾ ಪ್ರಧಾನ ಕಾರ್ಯಧರ್ಶಿ ಸುಜಯ್ ಬೋಪ್ಪಯ್ಯ, ಜಿಲ್ಲಾ ಸಂಚಾಲಕ ಸುಭಾಷ್ ಸುಬ್ಬಯ್ಯ, ಖಾಜಾಂಚಿ ಸಭೀತ ಭೀಮಯ್ಯ, ಕಾನೂನು ಸಲಹೆಗಾರರಾದ ಕೆ.ಬಿ.ಹೇಮಚಂದ್ರ ಅಮ್ಮತ್ತಿ ಹೋಬಳಿ ಅದ್ಯಕ್ಷರಾದ ಚನಂಡ ಅಜೀತ್ ಪೂಣಚ್ಚ, ಉಪದ್ಯಕ್ಷರಾದ ನಡಿಕೇರಿಯಂಡ ವಿಕ್ರಂ, ಖಾಜಾಂಚಿ ಸಜೀವ, ಸಿದ್ದಾಪುರ ರೈತ ಸಂಘದ ಅಧ್ಯಕ್ಷರಾದ ದೇವಣಿರ ಬೋಪಣ್ಣ ಉಪಸ್ಥಿತಿತರಿದ್ದರು.
ಅಮ್ಮತ್ತಿ ಹೋಬಳಿಯ ರೈತರ ಸಂಘದ ಅಧ್ಯಕ್ಷರಾದ ಚೆನಂಡ ಅಜಿತ್ ಪೂಣಚ್ಚ ಅವರು ಸ್ವಾಗತಿಸಿದರು ಕಾರ್ಯದರ್ಶಿ ಕುಮ್ಮಂಡ ದರ್ಶನ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಸಭೆಯಲ್ಲಿ ಅಮ್ಮತ್ತಿ ಹೋಬಳಿ ಮತ್ತು ಸಿದ್ದಾಪುರ ವಿಭಾಗದ ವಿವಿಧ ಸ್ಥಳಗಳಿಂದ ರೈತ ಸಂಘದ ಸದಸ್ಯರು ಸಾರ್ವಜನಿಕರು ಹಾಜರಿದ್ದರು.
ವರದಿ;ಕಿಶೋರ್ ಕುಮಾರ್ ಶೆಟ್ಟಿ