ತಾಯಿ, ಅಕ್ಕನ ಕತ್ತು ಸೀಳಿ ಯುವಕ ಆತ್ಮಹತ್ಯೆಗೆ ಯತ್ನ: ಅಸಲಿಗೆ ಆಗಿದ್ದೇನು ಗೊತ್ತೇ!

Mar 29, 2026 - 19:56
 0  1.3k
ತಾಯಿ, ಅಕ್ಕನ ಕತ್ತು ಸೀಳಿ ಯುವಕ ಆತ್ಮಹತ್ಯೆಗೆ ಯತ್ನ: ಅಸಲಿಗೆ ಆಗಿದ್ದೇನು ಗೊತ್ತೇ!

ಬೆಂಗಳೂರು,(ಮಾರ್ಚ್ 29): ತಾಯಿ, ಅಕ್ಕ ಹಾಗೂ ಅಕ್ಕನ ಮಗನ ಕತ್ತು ಕೊಯ್ದು ಬಳಿಕ ಆರೋಪಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಂಗಳೂರು (Bengaluru) ಹೊರವಲಯದ ಆನೇಕಲ್ (Anekal) ತಾಲ್ಲೂಕಿನ ಮಲ್ಲೇನಹಳ್ಳಿಯಲ್ಲಿ ನಡೆದಿದೆ. ಮೋಹನ್ ಗೌಡ ಎನ್ನುವಾತ ತಾಯಿ ಆಶಾ(55), ಅಕ್ಕ ವರ್ಷಿತಾ(34) ಮತ್ತು ಅಕ್ಕನ ಮಗ ಮಯಾಂಕನ ಕತ್ತು ಕೊಯ್ದು ಕೊಯ್ದಿದ್ದಾನೆ.

ಬಳಿಕ ಮೋಹನ್ ಗೌಡ ಸಹ ತಾನು ಸಹ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಘಟನೆಯಲ್ಲಿ ತಾಯಿ ಆಶಾ ಹಾಗೂ ಅಕ್ಕ ವರ್ಷಿತಾ ಸಾವನ್ನಪ್ಪಿದ್ದು, ಅಕ್ಕನ ಮಗ ಮಯಾಂಕ ಹಾಗೂ ಆರೋಪಿ ಮೋಹನ್ ಗೌಡ ಸ್ಥಿತಿ ಗಂಭೀರವಾಗಿದೆ.

ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಮೋಹನ್ ವಿಡಿಯೋ ಒಂದನ್ನು ಚಿತ್ರೀಕರಿಸಿದ್ದ. ಸಾಲಗಾರರ ಕಾಟ ತಾಳಲಾರದೆ ನಾವು ಈ ನಿರ್ಧಾರ ತೆಗೆದುಕೊಳ್ಳುತ್ತಿದ್ದೇವೆ ಎಂದು ವಿಡಿಯೋದಲ್ಲಿ ಹೇಳಿ ಅದನ್ನು ತನ್ನ ಸಂಬಂಧಿಕರಿಗೆ ಕಳುಹಿಸಿದ್ದ. ವಿಡಿಯೋ ನೋಡಿ ಗಾಬರಿಗೊಂಡ ಸಂಬಂಧಿಕರು ತಕ್ಷಣ ಮನೆಗೆ ಧಾವಿಸಿದ್ದಾರೆ.

ಸಂಬಂಧಿಕರು ಸ್ಥಳಕ್ಕೆ ಬಂದಾಗ ಮನೆಯ ಮುಂಭಾಗದ ಬಾಗಿಲು ಲಾಕ್ ಆಗಿತ್ತು. ಒಳಗೆ ಕಿರುಚಾಟದ ಶಬ್ದ ಕೇಳಿ ಬಂದಿದೆ. ಕೂಡಲೇ ಹಿಂಬಾಗಿಲಿನ ಮೂಲಕ ಒಳಗೆ ಹೋದಾಗ ರಕ್ತದ ಮಡುವಿನಲ್ಲಿ ನಾಲ್ವರು ಬಿದ್ದಿರುವುದು ಕಂಡುಬಂದಿದೆ.

What's Your Reaction?

Like Like 0
Dislike Dislike 1
Love Love 0
Funny Funny 0
Angry Angry 0
Sad Sad 3
Wow Wow 0