ಯುವಕರು ಸೋಲನ್ನು ಸ್ವೀಕರಿಸುವ ಮನೋಭಾವವನ್ನು ಕಳೆದುಕೊಳ್ಳುತ್ತಿದ್ದಾರೆ: ಡಿವೈಎಸ್ಪಿ ಮಹೇಶ್ ಕುಮಾರ್
ವಿರಾಜಪೇಟೆ: ಪ್ರಸ್ತುತ ಕಾಲದಲ್ಲಿ ಯುವಕರು ಅತೀಹೆಚ್ಚು ಕ್ರೀಡೆಗಳಲ್ಲಿ ಭಾಗವಹಿಸಿದ್ದರೂ ಸೋಲನ್ನು ಸ್ವೀಕರಿಸುವ ಮನೋಭಾವ ಕಳೆದುಕೊಂಡು ಆತ್ಮಹತ್ಯೆಯಂತಹ ಕಾರ್ಯಕ್ಕೆ ಮುಂದಾಗುವುತ್ತಿರುವುದು ಕಳವಳಕಾರಿ ಸಂಗತಿ ಎಂದು ವಿರಾಜಪೇಟೆ ಉಪ ವಿಭಾಗ ಡಿವೈಎಸ್ಪಿ ಮಹೇಶ್ ಕುಮಾರ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಬಿಲ್ಲವ ಸೇವಾ ಸಂಘ (ರಿ) ವಿರಾಜಪೇಟೆ ಕೊಡಗು ಜಿಲ್ಲೆ ವತಿಯಿಂದ 20ನೇ ವರ್ಷದ ವಾರ್ಷಿಕ ಕ್ರೀಡಾಕೂಟ ಸಮಾರಂಭ ವಿರಾಜಪೇಟೆ ಜೂನಿಯರ್ ಕಾಲೇಜು ಮೈದಾನದಲ್ಲಿ ಚಾಲನೆ ನೀಡಲಾಯಿತು.
ಕಾರ್ಯಕ್ರಮಕ್ಕೆ ಆಗಮಮಿಸಿ ದೀಪ ಬೆಳಗಿಸಿ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಮಹೇಶ್ ಕುಮಾರ್ ಅವರು, ಶ್ರೀ ನಾರಾಯಣ ಗುರು ಅವರ ತತ್ವ ಮತ್ತು ಸಿದ್ದಾಂತಗಳ ಆಧಾರದ ಮೇಲೆ ಶಿಕ್ಷಣ ಮತ್ತು ಸಂಘಟನೆಗೆ ಪೂರಕವಾಗಿ ಸಂಘಟನೆಯೊಂದಿಗೆ ಸಮಾಜದ ಬಾಂಧವರಿಗಾಗಿ ಕ್ರೀಡಾಕೂಟವನ್ನು ಆಯೋಜಿಸಿರುವುದು ಸಂತೋಷದಾಯಕವಾದ ವಿಚಾರ. ಕ್ರೀಡಾಕೂಟಗಳಲ್ಲಿ ಭಾಗವಹಿಸುವ ಯುವ ಸಮುದಾಯವು ಸೋಲನ್ನು ಸ್ವೀಕರ ಮಾಡಲು ಆಶಕ್ತರಾಗಿದ್ದಾರೆ. ಕಾರಣ ಒತ್ತಡದ ಜೀವನ, ಜೀವನ ಶೈಲಿ, ಮತ್ತು ಮಾದಕ ವಸ್ತುಗಳ ಉಪಯೋಗದಿಂದ ಆತ್ಮಹತ್ಯೆಯಂತಹಾ ಘೋರ ಕಾರ್ಯಕ್ಕೆ ಮುಂದಾಗುತ್ತಿರುವುದು ಕಳವಳಕಾರಿ ಸಂಗತಿ.ಕ್ರೀಡೆಗಳಲ್ಲಿ ಭಾಗವಹಿಸುವದರೊಂದಿಗೆ ಶಾರೀರಿಕವಾಗಿ ಶಕ್ತರಾಗುತ್ತಾರೆ. ಮಾನಸಿಕವಾಗಿ ಸದೃಢರಾಗುತ್ತಾರೆ ಎಂಬುದು ತಿಳಿಯಬೇಕು. ಶಿಕ್ಷಣಕ್ಕೆ ಮಹ್ವತ ನೀಡಿ ಸಮಾಜದ ಪ್ರತಿಯೋಬ್ಬ ವ್ಯಕ್ತಿಗಳು ಶಿಕ್ಷಿತರಾಗಬೇಕು. ಸಂಘಟನೆಯು ಬಲವಾಗಿದ್ದಲ್ಲಿ ಸರ್ಕಾರದ ಸೌಲಭ್ಯಗಳು ಬೇಡಿಕೆಗಳನ್ನು ಪಡೆದುಕೊಳ್ಳಲು ಸಹಕಾರವಾಗುತ್ತದೆ.
ಸಂಘಟನೆಯು ಹಲವು ವರ್ಷಗಳಿಂದ ಸಮಾಜದ ಬಾಂಧವರಿಗಾಗಿ ಹಲವು ಸಮಾಜಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದೆ. ಸಂಘಟಣೆಯನ್ನು ಬಲಪಡಿಸಲು ಸರ್ವರ ಸಹಕಾರ ಅಗತ್ಯ ಎಂದು ಹೇಳಿದರು.
ನಾರಾಯಣ ಗುರು ಯುವ ವೇದಿಕೆ ರಾಜ್ಯ ಅಧ್ಯಕ್ಷರಾದ ಸತ್ಯಜಿತ್ ಸುರತ್ಕಲ್ ಅವರು ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಸುಮಾರು 20 ವರ್ಷಗಳ ಹಿಂದೆ ಕೊಡವ ಸಮಾಜ ಬಾಂಧವರು ವಿವಿಧ ಮನೆತನದ ನಡುವೆ ಹಾಕಿ ಪಂದ್ಯಾವಳಿಯನ್ನು ಆಯೋಜಿಸಿ ಇಂದಿಗೂ ಯಶಸ್ವಿಯಾಗಿದೆ. ಅದೇ ರೀತಿ ಜಿಲ್ಲೆ ವಿವಿಧ ಸಮದಾಯ ಬಾಂಧವರು ಕ್ರೀಡೆಗಳ ಮೂಲಕ ಸಮಾಜವನ್ನು ಒಂದೂಗೂಡಿಸುವ ಪ್ರಯತ್ನ ಸಾಗುತ್ತಿದೆ. ಜಿಲ್ಲೆಯಲ್ಲಿ ಬಿಲ್ಲವ ಸಮುದಾಯ ಬಾಂಧವರು ಅತಿ ವಿರಳವಾಗಿದ್ದಾರೆ. ಆದುದರಿಂದ ಯಾವುದೇ ಕ್ರೀಡೆಗಳನ್ನು ಅಯೋಜಿಸುವದಾದಲ್ಲಿ ಮುಂದಿನ ಸಾಲಿನಿಂದ ಬಿಲ್ಲವ ಸಮಾಜ ಬಾಂಧವರು ಹೋಬಾಳಿ, ಗ್ರಾಮಂತರ ಮಟ್ಟದಿಂದ ಅಯಾಯ ಗ್ರಾಮಗಳಿಗೆ ಸಿಮೀತವಾಗಿ ತಂಡಗಳನ್ನು ನೋಂದಾಣಿ ಮಾಡಿಕೊಂಡು ಕ್ರೀಡಾಕೂಟಗಳಲ್ಲಿ ಭಾಗವಹಿಸುವಂತಾಗಬೇಕು ಎಂದು ಹೇಳಿದರು.
ಕೊಡಗು ಜಿಲ್ಲಾ ಬಿಲ್ಲವ ಸೇವಾ ಸಂಘ ಅಧ್ಯಕ್ಷರಾದ ಬಿ.ಆರ್. ಲಿಂಗಪ್ಪ ಅವರು ಮಾತನಾಡಿ ಕೊಡಗು ಜಿಲ್ಲೆಯಲ್ಲಿ ಬಿಲ್ಲವ ಸಮೂದಾಯ ಬಾಂಧವರು ವಿರಳವಾಗಿದ್ದರೆ. ಕ್ರೀಡಾಕೂಟಗಳ ಅಯೋಜನೆಯೊಂದಿಗೆ ಸಂಘಟನೆಯ ಬೆಳವಣಿಗೆಗೆ ಸಹಕಾರ ದೊರಕುವಂತಗಾಬೇಕು. ಜಿಲ್ಲಾ ಸಂಘವು ಸದಸ್ಯತ್ವ ಜಿಲ್ಲೆಯಾದ್ಯಂತ ಸದಸ್ಯತ್ವ ಅಭಿಯಾನ ಆರಂಭಿಸಿದ್ದು ತಾಲೂಕು ಸಂಘದಲ್ಲಿ ನೊಂದಾಣಿಯಾದಂತೆ. ಜಿಲ್ಲಾ ಸಂಘದಲ್ಲಿಯು ನೋಂದಾಣಿ ಮಾಡಿಕೊಂಡು ಸಂಘಟನೆಯ ಬಲವರ್ದನೆಗೆ ಸಹಕಾರ ನೀಡಿ ಎಂದು ಶುಭಹಾರೈಸಿದರು.
ಬಿಲ್ಲವ ಸೇವಾ ಸಂಘ (ರಿ) ವಿರಾಜಪೇಟೆ ಕೊಡಗು ಜಿಲ್ಲೆ ಅದ್ಯಕ್ಷರಾದ ಬಿ.ಎಂ, ಗಣೇಶ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಜನಾಂಗ ಬಾಂಧವರು ಕ್ರೀಡಾಕೂಟಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಹೆಚ್ಚಿನ ಸಹಕಾರ ನೀಡುತ್ತಾ ಬಂದಿದ್ದಾರೆ. ಮುಂದಿನ ವರ್ಷದಿಂದ ಜಿಲ್ಲೆಯ ವಿವಿಧ ಭಾಗಗಳಲ್ಲಿ ನೆಲೆಸಿರುವ ಸಮುದಾಯ ಬಾಂಧವರು ಗ್ರಾಮಗಳಿಗೆ ಸೀಮಿತವಾದಂತೆ ಅಥಾವ ಹೋಬಳಿಗೆ ಸೀಮಿತವಾಗಿ ತಂಡಗಳನ್ನು ರಚಿಸಿ ಆಯೋಜಿಸುವ ಪ್ರತಿಯೊಂದು ಕ್ರೀಡೆಗಳಲ್ಲಿ ಭಾಗವಹಿಸಿಲು ತೀರ್ಮಾನ ಮಾಡಲಾಗಿದೆ. ಸಮಾರೋಪ ಸಮಾರಂಭ 19ರ ಭಾನುವಾರ ನಡೆಯಲಿದ್ದು ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಂಘಟನೆಯ ಕಾರ್ಯಕ್ರಮ ಯಶಸ್ವಿಗೊಳಿಸಲು ಸಹಕಾರ ನೀಡುವಂತೆ ಮನವಿ ಮಾಡಿದರು.
ಕಾರ್ಯಕ್ರಮದ ಆರಂಭದಲ್ಲಿ ಶ್ರೀ ನಾರಾಯಣ ಗುರು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು, ಬಳಿಕ ಕ್ರೀಡಾ ಪಟುಗಳ ಪರಿಚಯ ಮಾಡಿಕೊಳ್ಳಲಾಯಿತು. ಬ್ಯಾಟ್ ಬೀಸುವ ಮೂಲಕ ಕ್ರೀಡಾಕೂಟಕ್ಕೆ ವಿದ್ಯುಕ್ತ ಚಾಲನೆ ನೀಡಲಾಯಿತು.
ಕಾರ್ಯಕ್ರಮದ ವೇದಿಕೆಯಲ್ಲಿ ಕ್ರೀಡಾಕೂಟದ ಅದ್ಯಕ್ಷರಾದ ಬಿ.ಜೆ. ಅಶೋಕ್, ಎನ್.ಕೆ ಮೋಹನ್ ಕುಮಾರ್, ಉದ್ಯಮಿಗಳಾದ ಬಿ.ಆರ್. ಬೋಜಪ್ಪ ಪೂಜಾರಿ, ಮಾಜಿ ಜಿಲ್ಲಾ ಅದ್ಯಕ್ಷರಾದ ಅರಘು ಆನಂದ, ಮಾಜಿ ತಾಲೂಕು ಅದ್ಯಕ್ಷರಾದ ಸುಬ್ಬಪ್ಪ ಪೂಜಾರ, ಬಿ.ಎಸ್. ಚಂದ್ರಶೇಕರ್ ಮಾಜಿ ಪಟ್ಟಣ ಪಂಚಾಯಿತಿ ಸದಸ್ಯರಾದ, ಅನಿತ ಕುಮಾರ್, ಬಿ.ಡಿ. ಸುನೀತ, ಗೌ.ಆದ್ಯಕ್ಷರಾದ ಬಿ.ಆರ್. ರಾಜ, ಗ್ರಾಮಾಂತರ ಠಾಣೆಯ ಪಿ.ಎಸ್.ಐ. ವಾಣಿಶ್ರೀ, ಮತ್ತು ಬಿ.ಎ. ಗಣೇಶ ಉಪಸ್ಥಿತರಿದ್ದರು.
ಬಿಲ್ಲವ ಸೇವಾ ಸಂಘ ವಿರಾಜಪೇಟೆ ಖಾಜಂಚಿಗಳಾದ ಬಿ.ಎಸ್, ಸತೀಶ್ ಅವರು ಸರ್ವರನು ಸ್ವಾಗತಿಸಿದರು ಕಿಶೋರ್ ರೈ ಕತ್ತಲೆಕಾಡು ನಿರೂಪಿಸಿ ವಂದಿಸಿದರು.
ವರದಿ; ಕಿಶೋರ್ ಕುಮಾರ್ ಶೆಟ್ಟಿ
