ನೀಟ್ ಮತ್ತು ಸಿಇಟಿ ಪರೀಕ್ಷೆಯಲ್ಲಿ ಸಾಧನೆ:ಎಚ್.ಎ ಹಂಸ ಅವರಿಂದ ನಗದು ಬಹುಮಾನ ನೀಡಿ ಪ್ರೋತ್ಸಾಹ

ಮಡಿಕೇರಿ:ಮಂಗಳೂರಿನ ಬೆಳ್ತಂಗಡಿ ತಾಲ್ಲೂಕಿನ ಗುರುವಾಯ ನಕೆರೆ ಎಕ್ಸಲ್ ಪದವಿ ಪೂರ್ವ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿರುವ ಜಿಲ್ಲೆಯ ಸಫ್ವಾನ್ ಜೆ.ಐ,ಜೆಇಇ ಮೈನ್ಸ್ ನಲ್ಲಿ 98.82% ಹಾಗೂ ನೀಟ್ ಪರೀಕ್ಷೆಯಲ್ಲಿ 700ಕ್ಕೆ 542 ಅಂಕ ಹಾಗೂ ಸಿಇಟಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 572 ಅಂಕಗಳನ್ನು ಪಡೆದುಕೊಂಡಿದ್ದು,ಸಫ್ವಾನ್ ಅವರ ಸಾಧನೆಯನ್ನು ಗುರುತಿಸಿ ಕುಶಾಲನಗರದ ಅವರ ಮನೆಯಲ್ಲಿ, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎ ಹಂಸ ರವರು ಸನ್ಮಾನಿಸಿ ನಗದು ಬಹುಮಾನವನ್ನು ನೀಡಿ ಉನ್ನತ ಶಿಕ್ಷಣ ಪಡೆದು ಕುಟುಂಬಕ್ಕೆ, ಸಮಾಜಕ್ಕೆ ಮಾದರಿಯಾಗುವ ಉತ್ತಮ ಹುದ್ದೆಗೆ ಆಯ್ಕೆಯಾಗಿ ಬರಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾದ ಹನೀಫ್, ಡಿಸಿಸಿ ಸದಸ್ಯ ಖಾಲಿದ್ ಹಾಕತ್ತೂರು,ಅಲ್ಪಸಂಖ್ಯಾತ ಮುಖಂಡರಾದ ಜುಬೇರ್,ಮೊಹಮ್ಮದ್ ಎಡಪಲ, ಪರವಂಡ ಸಿರಾಜ್, ಪ್ರಧಾನ ಮಂತ್ರಿಗಳ 15 ಅಂಶಗಳ ಕಾರ್ಯಕ್ರಮ ಅನುಷ್ಠಾನ ಜಿಲ್ಲಾ ಸಲಹಾ ಸಮಿತಿ ಸದಸ್ಯ ನಿಯಾಜ್,ಹೊದ್ದೂರು ಗ್ರಾಮ ಪಂಚಾಯಿತಿ ಪಿಡಿಓ ಅಬ್ದುಲ್ಲ ಇದ್ದರು.