ಅಂಗನವಾಡಿ ಕಾರ್ಯಕರ್ತೆಯರಿಂದ ಸರ್ಕಾರಕ್ಕೆ ಮನವಿ ಸಲ್ಲಿಕೆ

Jul 10, 2025 - 13:43
Jul 10, 2025 - 13:43
 0  232
ಅಂಗನವಾಡಿ ಕಾರ್ಯಕರ್ತೆಯರಿಂದ ಸರ್ಕಾರಕ್ಕೆ ಮನವಿ ಸಲ್ಲಿಕೆ

ವರದಿ:ಝಕರಿಯ ನಾಪೋಕ್ಲು

ನಾಪೋಕ್ಲು :ಕಾರ್ಮಿಕ ಸಂಘಟನೆಗಳ ಅಖಿಲ ಭಾರತ ಸಾರ್ವರ್ತಿಕ ಮುಷ್ಕರದ ಹಿನ್ನಲೆಯಲ್ಲಿ ಮಡಿಕೇರಿ ಹಾಗೂ ಸೋಮವಾರಪೇಟೆಯ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಸಂಘಟನೆಯಿಂದ ಮಡಿಕೇರಿಯಲ್ಲಿ ಶಿರಸ್ತೇದಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಿಗೆ ಸರ್ಕಾರಕ್ಕೆ ಸಲ್ಲಿಸಲು ವಿವಿಧ ಬೇಡಿಕೆಗಳನ್ನೊಳಗೊಂಡ ಮನವಿ ಸಲ್ಲಿಸಿದರು.

ಈ ಸಂದರ್ಭ ಮಡಿಕೇರಿ ತಾಲೂಕು ಅಧ್ಯಕ್ಷರಾದ ಪವಿತ್ರ ಸಿ ಯು,ಕಾರ್ಯದರ್ಶಿ ಆಶಾಲತಾ ಎಂ, ಉಪಾಧ್ಯಕ್ಷೆ ವನಜ,ಕ್ಷೇಮ ನಿಧಿ ಅಧ್ಯಕ್ಷೆ ಸುಮತಿ, ಸೋಮಾರಪೇಟೆಯ ಅಧ್ಯಕ್ಷರಾದ ಧನಲಕ್ಷ್ಮಿ,ಕಾರ್ಯದರ್ಶಿ ತಾರಲೋಬೋ ಹಾಗೂ ಮಡಿಕೇರಿ ತಾಲೂಕು ಮತ್ತು ಸೋಮವಾರಪೇಟೆ ತಾಲೂಕಿನ ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0