ಅವಧಿ ಕಳೆದ ಮಾತ್ರೆ ವಿತರಣೆ! ರೋಗಿ ಅಸ್ವಸ್ಥ! ಎಲ್ಲಿ! ಏನಾಯಿತು! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ!

Jul 13, 2025 - 12:28
 0  274
ಅವಧಿ ಕಳೆದ ಮಾತ್ರೆ ವಿತರಣೆ! ರೋಗಿ ಅಸ್ವಸ್ಥ! ಎಲ್ಲಿ! ಏನಾಯಿತು! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ!

(ವಿಶೇಷ ವರದಿ: ಕೆ.ಬಿ.ಶಂಶುದ್ಧೀನ್)

ಕುಶಾಲನಗರ: ಅವಧಿ ಮುಗಿದ ಕಳೆದ ಮಾತ್ರೆ ಸೇವಿಸಿ ರೋಗಿ ಅಸ್ವಸ್ಥರಾದ ಘಟನೆ ಕುಶಾಲನಗರದ ಗೋಪಾಲ್ ಸರ್ಕಲ್ ನಲ್ಲಿ ನಡೆದಿದ್ದು, ಆಸ್ಪತ್ರೆಯ ವಿರುದ್ಧ ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ‌ದಿನಾಂಕ ಮುಗಿದ ಮಾತ್ರೆಯನ್ನು ನೀಡಿರುವ ವಿಷಯವನ್ನು ಅರಿತ ಸಾರ್ವಜನಿಕರು ಆತಂಕಕ್ಕೊಳಗಾಗಿದ್ದು, ಕೂಡಲೇ ಆಸ್ಪತ್ರೆ ವಿರುದ್ಧ ಕ್ರಮ‌ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಇಲ್ಲಿನ ಗೋಪಾಲ್ ಸರ್ಕಲ್ ನ ೫೫ ವರ್ಷ ಪ್ರಾಯದ ಮಹಿಳೆಯೋರ್ವರು ನಾಲ್ಕು ದಿನಗಳ ಹಿಂದೆ ಕಾಲು ನೋವಿನ ಕಾರಣವಾಗಿ ಕುಶಾಲನಗರದ ಸಾಯಿ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆದಿದ್ದಾರೆ. ನಂತರ ಕಾಲು ನೋವು ಕಡಿಮೆಯಾಗದ ಹಿನ್ನಲೆ ಕ್ರವಾರದಂದು ಮತ್ತೇ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.ನಂತರ ಶುಕ್ರವಾರ ರಾತ್ರಿ ಆಸ್ಪತ್ರೆಯಲ್ಲಿ ನೀಡಿದ ಮಾತ್ರೆಯನ್ನು ಸೇವಿಸಿದ ಮಹಿಳೆಯು ಅಸ್ವಸ್ಥಕ್ಕೊಳಗಾಗಿದ್ದಾರೆ. ನಂತರ ಮನೆಯವರು ಮಾತ್ರೆಯನ್ನು ಪರಿಶೀಲಿಸಿದಾಗ ದಿನಾಂಕ ಮುಗಿದ ಮಾತ್ರೆಯನ್ನು ಸೇವಿಸಿರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ. ನಂತರ ತಕ್ಷಣವೇ ಮಹಿಳೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಚಿಕಿತ್ಸೆಯ ನಂತರ ಮಹಿಳೆಯ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಸಾಮಾನ್ಯವಾಗಿ ಬೇರೆ ಆಸ್ಪತ್ರೆಗೆ ತೆರಳುವ ನಾವು, ಅಂದು ಸಾಯಿ ಆಸ್ಪತ್ರೆಗೆ ತೆರಳಿದವು. ದಿನಾಂಕ ಮುಗಿದ ಮಾತ್ರೆ ಸೇವಿಸಿ ಅನಾಹುತ ಸಂಭವಿಸಿದರೆ ಯಾರು ಹೊಣೆ. ಆಸ್ಪತ್ರೆಯವರು ನಮ್ಮಿಂದ ತಪ್ಪಾಗಿದೆ ಎಂದು ಕ್ಷಮೆ‌ ಕೇಳಿದ್ದಾರೆ. ಆದರೆ ಜೀವಕ್ಕೆ ಹಾನಿಯಾಗಿದ್ದರೆ, ಕ್ಷಮೆಯಿಂದ ಜೀವ ಹಿಂದಿರುಗುತ್ತದೆಯೇ ಎಂದು ಪ್ರಶ್ನಿಸಿದ್ದು, ಸಂಬಂಧಪಟ್ಟವರು ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮಹಿಳೆಯ ಕುಟುಂಬಸ್ಥರು ಆಗ್ರಹಿಸಿದ್ದಾರೆ.

ಕ್ರಮಕ್ಕೆ‌ ಆಗ್ರಹ: 

ಸಾರ್ವಜನಕರು ಆಸ್ಪತ್ರೆಗೆ ಉಳಿಸುವಂತೆ ತೆರಳುತ್ತಾರೆ. ಆದರೆ ಆಸ್ಪತ್ರೆ ‌ದಿನಾಂಕ ಮುಗಿದ ಮಾತ್ರೆಗಳನ್ನು ಸೇವಿಸಿ ಪ್ರಾಣ ಹೋದರೆ ಯಾರು ಹೊಣೆ ಎಂದು ಪ್ರಶ್ನಿಸುತ್ತಿರುವ ಸಾರ್ವಜನಿಕರು, ಇಂತಹ ಬೇಜವಾಬ್ದಾರಿತನಕ್ಕೆ ತಕ್ಕ ಕ್ರಮವಾಗಬೇಕು.‌ ಸಾರ್ವಜನಿಕರ ಜೀವನದೊಂದಿಗೆ ಚಲ್ಲಾಟವಾಡುವ ಇಂತಹ ಆಸ್ಪತ್ರೆಯ ಪರವಾನಗಿಯನ್ನು ರದ್ದು ಪಡಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಎಲ್ಲಾ ಆಸ್ಪತ್ರೆ ಹಾಗೂ‌ ಮೆಡಿಕಲ್ ಗಳನ್ನು ಪರಿಶೀಲಿಸಿ:

 ದಿನಾಂಕ ಮುಗಿದ ಮಾತ್ರೆಗಳನ್ನು ನೀಡಿ ಸಾರ್ವಜನಿಕರ ಜೀವನದೊಂದಿಗೆ ಚೆಲ್ಲಾಟವಾಡುವವರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಬೇಕು.‌ ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು ಇಲ್ಲಿನ ಎಲ್ಲಾ ಮೆಡಿಕಲ್ ಹಾಗೂ ಆಸ್ಪತ್ರೆಗಳನ್ನು ಪರಿಶೀಲನೆ ನಡೆಸಬೇಕು ಸಾರ್ವಜನಿಕರು ಎಂದು ಆಗ್ರಹಿಸಿದ್ದಾರೆ.

ದಿನಾಂಕ ಮುಗಿದ ಮಾತ್ರೆ ನೀಡುರುವ ಬಗ್ಗೆ ಆರೋಪಿಸುವವರಿಂದ ದೂರು ಪಡೆದುಕೊಂಡು ಪರಿಶೀಲನೆ ನಡೆಸಲಾಗುವುದು. ತಪ್ಪು ಕಂಡು ಬಂದಲ್ಲಿ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ಮಾತ್ರೆಗಳನ್ನು ಸೇವಿಸುವಾಗ ದಿನಾಂಕ ಮುಗಿದಿರುವ ಬಗ್ಗೆ ಪರಿಶೀಲಿಸಿ ಸೇವಿಸಬೇಕು. 

- ಡಾ.ಸತೀಶ್ ಕುಮಾರ್, ಡಿ.ಎಚ್.ಓ ಕೊಡಗು.

ಜೀವ ಉಳಿಸಿ ಎಂದು ಆಸ್ಪತ್ರೆಗೆ ತೆರಳಿದರೆ ದಿನಾಂಕ ಮುಗಿದ ಮಾತ್ರೆಗಳನ್ನು ನೀಡಿರುವ ಆಸ್ಪತ್ರೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಜೀವ ಅತ್ಯಮೂಲ್ಯವಾದದ್ದು, ಅವುಗಳನ್ನು ಕಳೆದುಕೊಂಡವರಿಗೆ ಮಾತ್ರ ಅದರ ಬೆಲೆ ಅರ್ಥವಾಗುವುದು. ಆದ್ದರಿಂದ ಮುನ್ನೆಚ್ಚರಿಕೆ ಕ್ರಮದಿಂದ ಹಾಗೂ ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ಕುಶಾಲನಗರದ ಎಲ್ಲಾ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳು, ಮೆಡಿಕಲ್ ಗಳ ಮೇಲೆ ಸಂಬಂಧಪಟ್ಟವರು ದಾಳಿ ನಡೆಸಿ ಪರಿಶೀಲನೆ ನಡೆಸಬೇಕು. ಜ಼ಂಜ಼ೀರ್, ಸಾಮಾಜಿಕ ಕಾರ್ಯಕರ್ತ.

-

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 1
Wow Wow 0