ಪೋಸ್ಟ್ ಕಾರ್ಡಿನಲ್ಲಿ ವಚನಗಳನ್ನು ಬರೆಯುವ ಸ್ಪರ್ಧೆ

Jul 5, 2025 - 15:58
Jul 5, 2025 - 15:59
 0  30
ಪೋಸ್ಟ್ ಕಾರ್ಡಿನಲ್ಲಿ ವಚನಗಳನ್ನು ಬರೆಯುವ ಸ್ಪರ್ಧೆ

ಕುಶಾಲನಗರ : ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಕೊಡಗು ಜಿಲ್ಲಾ ಘಟಕದ ವತಿಯಿಂದ (ಪೋಸ್ಟ್ ಕಾರ್ಡ್) ವಚನಗಳನ್ನು ಬರೆಯುವ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

ಹನ್ನೆರಡನೇ ಶತಮಾನದ ಬಸವಾದಿ ಶರಣ - ಶರಣೆಯರು ಬರೆದಂತಹ ವಚನಗಳನ್ನು ಅಂಚೆ ಕಾರ್ಡಿನಲ್ಲಿ ಸ್ವ ಹಸ್ತಾಕ್ಷರಗಳಿಂದ ಬರೆದು ಕೆಳಕಂಡ ವಿಳಾಸಕ್ಕೆ ಬರೆದು ಜುಲೈ 20 ರ ಒಳಗೆ ತಲುಪುವಂತೆ ಪೋಸ್ಟ್ ಮಾಡುವುದು. ಅಂಚೆ ಚೀಟಿಯಲ್ಲಿ ಬರೆದು ಕಳಿಸುವವರ ವಿಳಾಸ ಹಾಗೂ ಮೊಬೈಲ್ ನಂಬರ್ ನಮೂದಿಸಬೇಕು.ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಸಾರ್ವಜನಿಕರು, ಮಹಿಳೆಯರು ಮಕ್ಕಳು ಎಲ್ಲರಿಗೂ ಮುಕ್ತ ಅವಕಾಶ ಇದೆ.ಅಂಚೆ ಚೀಟಿಗಳಲ್ಲಿ ಅತೀ ಹೆಚ್ಚು ವಚನಗಳನ್ನು ಬರೆದು ಕಳಿಸಿದವರಿಗೆ ಸೂಕ್ತ ನಗದು ಬಹುಮಾನಗಳನ್ನು ನೀಡಲಾಗುವುದು.

ಅಂಚೆ ಚೀಟಿಗಳನ್ನು ಪೋಸ್ಟ್ ಮಾಡುವ ವಿಳಾಸ

ಕೆ.ಎಸ್.ಮೂರ್ತಿ,ಜಿಲ್ಲಾ ಅಧ್ಯಕ್ಷರು,ಶರಣ ಸಾಹಿತ್ಯ ಪರಿಷತ್ತು

ಶ್ರೀ ಅನ್ನಪೂರ್ಣೇಶ್ವರಿ ನಿವಾಸ,ಸೋಮೇಶ್ವರ ದೇವಾಲಯದ ಬಳಿ ಕುಶಾಲನಗರ, ಕೊಡಗು ಜಿಲ್ಲೆ ಇಲ್ಲಿಗೆ ಕಳಿಸಬೇಕೆಂದು ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಬಿ.ನಟರಾಜು ತಿಳಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0