ಆಲ್ ಸ್ಟಾರ್ ಕೊಡಗು ವರ್ಲ್ ಕಪ್: ಎರಡನೇ ಕ್ವಾಟರ್ ಫೈನಲ್ ಪಂದ್ಯ: ಪೆನಾಲ್ಟಿ ಶೂಟೌಟ್ ನಲ್ಲಿ ರೋಚಕ ಗೆಲುವು ಪಡೆದ ಫ್ರೆಂಡ್ಸ್ ಎಫ್.ಸಿ ಸಿದ್ದಾಪುರ

May 4, 2025 - 22:52
 0  114
ಆಲ್ ಸ್ಟಾರ್ ಕೊಡಗು ವರ್ಲ್ ಕಪ್: ಎರಡನೇ ಕ್ವಾಟರ್ ಫೈನಲ್ ಪಂದ್ಯ: ಪೆನಾಲ್ಟಿ ಶೂಟೌಟ್ ನಲ್ಲಿ ರೋಚಕ ಗೆಲುವು ಪಡೆದ ಫ್ರೆಂಡ್ಸ್ ಎಫ್.ಸಿ ಸಿದ್ದಾಪುರ

ಮಡಿಕೇರಿ:ಕೊಡಗು ಜಿಲ್ಲೆಯ ಫುಟ್ಬಾಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಗೋಣಿಕೊಪ್ಪಲಿನ ಆಲ್ ಸ್ಟಾರ್ ಯೂತ್ ಕ್ಲಬ್ ಗೋಣಿಕೊಪ್ಪಲಿನ ಜಿಎಂಪಿ ಶಾಲಾ ಮೈದಾನದಲ್ಲಿ ಹಮ್ಮಿಕೊಂಡಿರುವ ಕೊಡಗು ವರ್ಲ್ಡ್ ಕಪ್ ಆಲ್ ಇಂಡಿಯಾ ಸೂಪರ್ ಫೈವ್ಸ್ ದ್ವಿತೀಯ ಕ್ವಾಟರ್ ಫೈನಲ್ ಪಂದ್ಯದಲ್ಲಿ ಆತಿಥೇಯ ಆಲ್ ಸ್ಟಾರ್ ಗೋಣಿಕೊಪ್ಪ ತಂಡವನ್ನು ಫ್ರೆಂಡ್ಸ್ ಎಫ್.ಸಿ ಸಿದ್ದಾಪುರ ತಂಡವು ಪೆನಾಲ್ಟಿ ಶೂಟೌಟ್ ನಲ್ಲಿ ರೋಚಕ ಗೆಲುವು ಸಾಧಿಸಿ ಸೆಮಿಫೈನಲ್ ಹಂತಕ್ಕೆ ಅರ್ಹತೆ ಪಡೆದಿದೆ.ಜಿದ್ದಾಜಿದ್ದಿನಿಂದ ಕೂಡಿದ್ದ ಎರಡನೇ ಕ್ವಾಟರ್ ಫೈನಲ್ ಪಂದ್ಯದಲ್ಲಿ ಪಂದ್ಯಾಟದ ಮೊದಲ ನಿಮಿಷದಲ್ಲಿ ಆಲ್ ಸ್ಟಾರ್ ತಂಡದ ಸುಹೈಲ್ ಗೋಲು ಬಾರಿಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ದ್ವಿತೀಯಾರ್ಧದಲ್ಲಿ ಫ್ರೆಂಡ್ಸ್ ಎಫ್.ಸಿ ಸಿದ್ದಾಪುರ ತಂಡವು ಕಮ್ ಬ್ಯಾಕ್ ಮಾಡಿ ಗೋಲು ಬಾರಿಸಿ ಸಮಬಲ ಸಾಧಿಸಿತು.ಅಂತಿಮವಾಗಿ ಪೆನಾಲ್ಟಿ ಶೂಟೌಟ್ ನಲ್ಲಿ 03-02 ಗೋಲುಗಳ ಅಂತರದಿಂದ ಗೆಲುವು ಪಡೆದು ಸಿದ್ದಾಪುರ ತಂಡವು ಸೆಮಿಫೈನಲ್ ಹಂತಕ್ಕೆ ಅರ್ಹತೆ ಪಡೆದರು.ಸಿದ್ದಾಪುರ ತಂಡದ ಹಾದಿಲ್ ಪಡೆದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 1