ಆಲ್ ಸ್ಟಾರ್ ಕೊಡಗು ವರ್ಲ್ಡ್ ಕಪ್: ಐದನೇ ಪ್ರಿ-ಕ್ವಾಟರ್ ಫೈನಲ್ ಪಂದ್ಯ:ಕಲ್ಲುಬಾಯ್ಸ್ ತಂಡಕ್ಕೆ ಪೆನಾಲ್ಟಿ ಶೂಟೌಟ್ ನಲ್ಲಿ ಅಮೋಘ ಗೆಲುವು

ಮಡಿಕೇರಿ:ಕೊಡಗು ಜಿಲ್ಲೆಯ ಫುಟ್ಬಾಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಗೋಣಿಕೊಪ್ಪಲಿನ ಆಲ್ ಸ್ಟಾರ್ ಯೂತ್ ಕ್ಲಬ್ ಗೋಣಿಕೊಪ್ಪಲಿನ ಜಿಎಂಪಿ ಶಾಲಾ ಮೈದಾನದಲ್ಲಿ ಹಮ್ಮಿಕೊಂಡಿರುವ ಕೊಡಗು ವರ್ಲ್ಡ್ ಕಪ್ ಆಲ್ ಇಂಡಿಯಾ ಸೂಪರ್ ಫೈವ್ಸ್ ಮೂರನೇ ದಿನದ ಐದನೇ ಪ್ರಿ-ಕ್ವಾಟರ್ ಫೈನಲ್ ಪಂದ್ಯದಲ್ಲಿ ಕಲ್ಲುಬಾಯ್ಸ್ ತಂಡವು ಪೆನಾಲ್ಟಿ ಶೂಟೌಟ್ ನಲ್ಲಿ 5-4 ಗೋಲುಗಳ ಅಂತರದಿಂದ ರೋಚಕ ಗೆಲುವು ಸಾಧಿಸಿದೆ.
ರೆಡ್ಸ್ ಯುನೈಟೆಡ್ ಹಾಗೂ ಕಲ್ಲುಬಾಣೆ ತಂಡಗಳ ನಡುವಿನ ಪಂದ್ಯದಲ್ಲಿ 2-2 ಗೋಲುಗಳ ಸಮಬಲ ಸಾಧಿಸಿತು.ಅಂತಿಮವಾಗಿ ಪೆನಾಲ್ಟಿ ಶೂಟೌಟ್ ನಲ್ಲಿ ಕಲ್ಲುಬಾಯ್ಸ್ ಗೆಲುವು ಸಾಧಿಸಿತು.ಕಲ್ಲುಬಾಯ್ಸ್ ತಂಡದ ಪರವಾಗಿ ಇಭಿ ಹಾಗೂ ರಚ್ಚು ತಲಾ ಒಂದು ಗೋಲು ಬಾರಿಸಿದರು.ರೆಡ್ಸ್ ಯುನೈಟೆಡ್ ತಂಡದ ಪರವಾಗಿ ಶಾರೂನ್ ಹಾಗೂ ಅಜೀಶ್ ಗೋಲುಗಳಿಸಿದರು.
What's Your Reaction?






