ಆಲ್ ಸ್ಟಾರ್ ಕೊಡಗು ವರ್ಲ್ಡ್ ಕಪ್:ಮೂರನೇ ದಿನದ ಮೊದಲ ಪಂದ್ಯ ತಿರುಚ್ಚಿ ತಂಡಕ್ಕೆ ಗೆಲುವು

ಮಡಿಕೇರಿ:ಕೊಡಗು ಜಿಲ್ಲೆಯ ಫುಟ್ಬಾಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಗೋಣಿಕೊಪ್ಪಲಿನ ಆಲ್ ಸ್ಟಾರ್ ಯೂತ್ ಕ್ಲಬ್ ಗೋಣಿಕೊಪ್ಪಲಿನ ಜಿಎಂಪಿ ಶಾಲಾ ಮೈದಾನದಲ್ಲಿ ಹಮ್ಮಿಕೊಂಡಿರುವ ಕೊಡಗು ವರ್ಲ್ಡ್ ಕಪ್ ಆಲ್ ಇಂಡಿಯಾ ಸೂಪರ್ ಫೈವ್ಸ್ ಮೂರನೇ ದಿನದ ಮೊದಲ ಪಂದ್ಯದಲ್ಲಿ ಬಾಲು ಮೆಮೋರಿಯಲ್ ಎಫ್.ಸಿ ತಿರುಚ್ಚಿ ತಂಡವು 03-01 ಗೋಲುಗಳ ಅಂತರದಿಂದ ಮೆರಿಡಿಯನ್ ತಂಡವನ್ನು ಮಣಿಸಿದೆ.ತಿರುಚ್ಚಿ ತಂಡದ ಪರವಾಗಿ ವಿವೇಕ್, ಶ್ರೀಜಿನ್,ಅಜೀಶ್ ತಲಾ ಒಂದು ಗೋಲು ದಾಖಲಿಸಿದರು.ಮೆರಿಡಿಯನ್ ತಂಡದ ಪರವಾಗಿ ರೈ ಒಂದು ಗೋಲು ಬಾರಿಸಿದರು.ತಿರುಚ್ಚಿ ತಂಡದ ಶ್ರೀಜಿನ್ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
What's Your Reaction?






