ಐಪಿಎಲ್ ಬೆಟ್ಟಿಂಗ್ ಲಕ್ಷಾಂತರ ರೂ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ!!

ಮಡಿಕೇರಿ: ಮೇ 30 ರಂದು ಪೊನ್ನಂಪೇಟೆ ಸಮೀಪದ ಹಳ್ಳಿಗಟ್ಟುವಿನಲ್ಲಿರುವ ಸಿ.ಐ.ಟಿ ಇಂಜಿನಿಯರ್ ಕಾಲೇಜಿನ ಪಿರಿಯಾಪಟ್ಟಣ ಮೂಲದ ವಿದ್ಯಾರ್ಥಿ ಯಶ್ವಂತ್(20) ಆತನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದನು.ಇದೀಗ ಆತನ ಆತ್ಮಹತ್ಯೆಗೆ ಬೆಟ್ಟಿಂಗ್ ನಲ್ಲಿ ಲಕ್ಷಾಂತರ ರೂ ಕಳೆದುಕೊಂಡಿದ್ದೇ ಕಾರಣ ಎಂಬ ಅಧಿಕೃತ ಮಾಹಿತಿ ಕೂರ್ಗ್ ಡೈಲಿಗೆ ಲಭ್ಯವಾಗಿದೆ.ಯಶ್ವಂತ್ ಸಿ.ಐ.ಟಿ ಕಾಲೇಜಿನ ಪ್ರಥಮ ವರ್ಷದ ಬಿ.ಇ.ಐ&ಡಿಎಸ್ ವಿಭಾಗದ ವಿದ್ಯಾರ್ಥಿಯಾಗಿದ್ದನು.ಮನೆಯವರು ಕೂಡ ಶ್ರೀಮಂತರಾಗಿದ್ದರು.ಆದರೆ ಯಶ್ವಂತ್ ಐಪಿಎಲ್ ಬೆಟ್ಟಿಂಗ್ ನಲ್ಲಿ ಲಕ್ಷಾಂತರ ರೂ ಕಳೆದುಕೊಂಡಿದ್ದನು.ಕಾಲೇಜಿನ ಸುತ್ತಮುತ್ತಲಿನ ಸ್ನೇಹಿತರೊಂದಿಗೂ ಕೂಡ ಯಶ್ವಂತ್ ಬೆಟ್ಟಿಂಗ್ ನಲ್ಲಿ ತೊಡಗಿಕೊಂಡಿದ್ದನು.ಬೆಟ್ಟಿಂಗ್ ನಿಂದಾಗಿ ಲಕ್ಷಾಂತರ ರೂ ಕಳೆದುಕೊಂಡು ಬೇರೆ ಮಾರ್ಗವಿಲ್ಲದೆ ಯಶ್ವಂತ್ ಆತ್ಮಹತ್ಯೆ ಮಾಡಿಕೊಂಡಿರುವುದು ಎಂಬ ಮಾಹಿತಿ ಕೂರ್ಗ್ ಡೈಲಿಗೆ ಲಭ್ಯವಾಗಿದೆ.
What's Your Reaction?






