ಮೃತಪಟ್ಟವರ ಮನೆಗೆ ಕೊಡಗು ಮೈಸೂರು ಲೋಕಸಭಾ ಅಭ್ಯರ್ಥಿ ಯದುವೀರ್ ಒಡೆಯರ್ ಭೇಟಿ
ಸಿದ್ದಾಪುರ :-ಇತ್ತೀಚೆಗೆ ಕಾಡಾನೆ ದಾಳಿಗೆ ತುತ್ತಾಗಿ ಮೃತಪಟ್ಟ ಸಿದ್ದಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಕರಡಿಗೋಡು ಗ್ರಾಮದ ಕಾಫಿ ಬೆಳೆಗಾರ ಕುಕ್ಕುನೂರು ಪುರಷೋತ್ತಮ ಹಾಗೂ ಬಸವನಹಳ್ಳಿ ಹಾಡಿಯ ಕಾಫಿ ಬೆಳೆಗಾರ ಸೊಳ್ಳೆಕೋಡಿ ಚಿಣ್ಣಪ್ಪ ನವರ ಮನೆಗೆ ಹಾಗೂ ಭಾರಿ ಗಾಳಿ ಮಳೆಗೆಮರ ಬಿದ್ದು ಸಾವಿಗೀಡಾದ ಸಿದ್ದಾಪುರ ಸಮೀಪದ ಮಾಲ್ದಾರೆಯ ಜನತಾ ಕಾಲೋನಿಯ ನಿವಾಸಿ ಬೆಳೆಗಾರ ಹಾಗೂ ಮಾಜಿ ಗ್ರಾಮ ಪಂಚಾಯತ್ ಸದಸ್ಯ ಪೊನ್ನಚಂಡ ಬೆಳ್ಳಿಯಪ್ಪ,ನವರ ಮನೆಗೆ
ಕೊಡಗು ಮೈಸೂರು ಲೋಕಸಭಾ ಅಭ್ಯರ್ಥಿ ಯದುವೀರ್ ಒಡೆಯರ್ ಮಂಗಳವಾರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಧೈರ್ಯ ತುಂಬಿದರು. ಇದೆ ಸಂದರ್ಭ ಕೊಡಗು ಜಿಲ್ಲಾ ಭಾರತೀಯ ಜನತಾ ಪಕ್ಷ ದ ಅಧ್ಯಕ್ಷ ನಾಪಂಡ ರವಿ ಕಾಳಪ್ಪ,ಮಂಡಲ ಅಧ್ಯಕ್ಷ ಗಣಪತಿ,ಮಂಡಲ ಪ್ರಧಾನ ಕಾರ್ಯದರ್ಶಿ ಅಜಿತ್ ಕರುಂಬಯ್ಯ,ಸಿದ್ದಾಪುರ ಮಾಜಿ ಗ್ರಾಮ ಪಂ.ಅಧ್ಯಕ್ಷೇ ರೀನಾ ತುಳಸಿ, ಮುಂತಾದವರು ಹಾಜರಿದ್ದರು
What's Your Reaction?
Like
0
Dislike
0
Love
0
Funny
0
Angry
0
Sad
0
Wow
0

