ಕೊಡಗು ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಶುಕ್ರವಾರದವರೆಗೆ ರಜೆ ವಿಸ್ತರಣೆ

ಕೊಡಗು: ಜಿಲ್ಲೆಯಲ್ಲಿ, ಹೆಚ್ಚಿನ ಗಾಳಿ-ಮಳೆ ಮುಂದುವರೆದಿರುವುದರಿಂದ ಅಂಗನವಾಡಿ ಮಕ್ಕಳ ಸುರಕ್ಷತೆಯ ಹಿತದೃಷ್ಟಿಯಿಂದ, ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಮುಂಜಾಗೃತಾ ಕ್ರಮವಾಗಿ ದಿನಾಂಕ 29.05.2025 & 30.05.2025 ರ ಎರಡು ದಿನಗಳಿಗೆ ಸೀಮಿತವಾಗಿ ಅಂಗನವಾಡಿ ಕೇಂದ್ರಗಳಿಗೆ ರಜೆ ವಿಸ್ತರಿಸಿದೆ.
ರಜೆ ದಿನಗಳ ಪೂರಕ ಪೌಷ್ಟಿಕ ಆಹಾರವನ್ನು THR ರೂಪದಲ್ಲಿ ಫಲಾನುಭವಿಗಳಿಗೆ ಮನೆಗೆ ವಿತರಿಸಲು ಕ್ರಮ ವಹಿಸುವುದು ಮತ್ತು ಅದನ್ನ ಪೋಷಣ್ ಟ್ರಾಕರ್ ನಲ್ಲಿ ನಮೂದಿಸುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.