ಬಿಜೆಪಿ ಆಡಳಿತ ವೈಫಲ್ಯ ಖಂಡಿಸಿ ನಗರಸಭೆ ಮುಂಭಾಗ ನಗರ ಕಾಂಗ್ರೆಸ್ ಪ್ರತಿಭಟನೆ
admincoorgdaily

ಮಡಿಕೇರಿ: ಬಿಜೆಪಿ ಆಡಳಿತ ವೈಫಲ್ಯ ಖಂಡಿಸಿ ಮಂಗಳವಾರ ನಗರಸಭೆ ಮುಂಭಾಗ ನಗರ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಈ ಸಂದರ್ಭ ಮಾತನಾಡಿದ ನಗರ ಕಾಂಗ್ರೆಸ್ ಅಧ್ಯಕ್ಷ ಎಸ್.ಪ್ರಕಾಶ್ ಆಚಾರ್ಯ, ೪ ವರ್ಷದಲ್ಲಿ ನಗರಸಭೆ ನರಕ ಸಭೆಯಾಗಿದೆ. ಸಾರ್ವಜನಿಕರಿಗೆ ಪ್ರಯೋಜನವಿಲ್ಲ. ಮಳೆಗಾಲಕ್ಕೆ ಚರಂಡಿ ಸ್ವಚ್ಛತೆ ಆಗಿಲ್ಲ. ರಸ್ತೆ ಗುಂಡಿ, ಕಸ ವಿಲೇವಾರಿ ವೈಫಲ್ಯ, ಬೀದಿ ನಾಯಿಗಳ ಹಾವಳಿ ನಿಯಂತ್ರಣವಾಗಿಲ್ಲ.
ಅಮೃತ್ ೨.೦ ಕಾಮಗಾರಿಯಿಂದ ರಸ್ತೆ ಗುಂಡಿಗಳಾಗಿವೆ. ಸದಸ್ಯರ ನಡುವೆ ಹೊಂದಾಣಿಕೆ ಕೊರತೆ ಅಭಿವೃದ್ಧಿಗೆ ಹಿನ್ನಡೆಯಾಗಿದೆ ದೂರಿದರು. ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ಟಿ.ಪಿ.ರಮೇಶ್, ನಗರ ಕಾಂಗ್ರೆಸ್ ಸಮಿತಿ ಪ್ರಮುಖರಾದ ಕೋಚನ ಚೇತನ್, ಮಿನಾಜ್ಹ್ ಪ್ರವೀಣ್, ಗೋಪಿನಾಥ್, ಮುನೀರ್ ಆಚಾರ್, ಸದಾಮುದ್ದಪ್ಪ ಸೇರಿದಂತೆ ೭೦ಕ್ಕೂ ಅಧಿಕ ಸಂಖ್ಯೆಯಲ್ಲಿ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.