ಇಂಧನ ಬೆಲೆ‌ ಏರಿಕೆಯಿಂದ ಜನ ಸಾಮಾನ್ಯರಿಗೆ ಸಂಕಷ್ಟ; ಕಾಂಗ್ರೆಸ್ ಮುಖಂಡ ಎಂ.ಇ ಅಶ್ರಫ್

May 26, 2026 - 10:43
 0  326
ಇಂಧನ ಬೆಲೆ‌ ಏರಿಕೆಯಿಂದ ಜನ ಸಾಮಾನ್ಯರಿಗೆ ಸಂಕಷ್ಟ; ಕಾಂಗ್ರೆಸ್ ಮುಖಂಡ ಎಂ.ಇ ಅಶ್ರಫ್
ಅಶ್ರಫ್

ಮಡಿಕೇರಿ; ಕೇಂದ್ರ ಸರ್ಕಾರ ಹತ್ತು ದಿನಗಳಲ್ಲಿ ನಾಲ್ಕು ಬಾರಿ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಮಾಡಿದ್ದು,ಇದರಿಂದ ಜನ ಸಾಮಾನ್ಯರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಅಸಂಘಟಿತ ಕಾರ್ಮಿಕರ ರಾಜ್ಯ ಕಾರ್ಯದರ್ಶಿ ಅಶ್ರಫ್ ಎಂ.ಇ ಸೋಮವಾರಪೇಟೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ‌ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು,ಒಂದೆಡೆ ಅಗತ್ಯ ವಸ್ತುಗಳ ಬೆಲೆ ಏರಿಕೆ,ಅಡುಗೆ ಅನಿಲ ಬೆಲೆ ಏರಿಕೆ ಇದರ ನಡುವೆ ಇದೀಗ ನಾಲ್ಕು ಬಾರಿ ಇಂಧನ ಬೆಲೆ ಏರಿಕೆ ಮಾಡಿದ್ದಾರೆ.ಬಿಜೆಪಿ ಅಧಿಕಾರಕ್ಕೆ ಬಂದರೆ ಅಚ್ಚೇದಿನ್ ಆಗುತ್ತೆ ಎಂದಿದ್ದರು.ಬೆಲೆ ಏರಿಕೆ ಬಿಜೆಪಿ ಆಡಳಿತದ ಅಚ್ಚೇ ದಿನ್ ಎಂದು ಅಶ್ರಫ್ ಅವರು ಕೇಂದ್ರ ಸರ್ಕಾರದ ವಿರುದ್ಧ ಕುಟುಕಿದರು.

 ಇಂಧನ‌ ಬೆಲೆ ಏರಿಕೆಯಿಂದ ಸಾರ್ವಜನಿಕ ಜೀವನ ದುಬಾರಿಯಾಗಿದೆ. ದರ ಏರಿಕೆಯಿಂದ ಆಟೋ,ಬೈಕ್ ಸವಾರರು ,ವ್ಯಾಪಾರಿಗಳು ಫುಡ್ ಡೆಲಿವರು ಬಾಯ್ಸ್ ಸೇರಿ ಇನ್ನಿತರ ವ್ಯಾಪಾರಸ್ಥರು ಕಂಗಾಲಾಗಿದ್ದಾರೆ. ಮಧ್ಯಮ, ಬಡ ವರ್ಗದವರ ಪರವಾಗಿ ನಿಲ್ಲಬೇಕಿದ್ದ ಕೇಂದ್ರ ಸರ್ಕಾರ ಬೆಲೆ ಏರಿಕೆಯ ಗಿಫ್ಟ್ ನೀಡುವ ಮೂಲಕ ಜನರ ಬದುಕಿನ ಮೇಲೆ ಬರೆ ಎಳೆದಿದ್ದಾರೆ.

2014 ರಲ್ಲಿ ಎನ್.ಡಿ.ಎ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಪೆಟ್ರೋಲ್ ದರ 71ರೂ ಇತ್ತು. ಇದೀಗ 110 ರೂ ಗಡಿದಾಟಿದೆ. 2014ರಲ್ಲಿ ಗ್ಯಾಸ್ ಬೆಲೆ 412 ರೂ ಇತ್ತು.ಈಗ 915 ರೂ ಆಗಿದೆ. ಬೆಲೆ ಏರಿಕೆ ಮಾಡುತ್ತಿರುವ ಕೇಂದ್ರ ಸರ್ಕಾರದ ಬಗ್ಗೆ ಬಿಜೆಪಿ ನಾಯಕರು ಈಗ ಏಕೆ ಮಾತನಾಡುತ್ತಿಲ್ಲ‌ ಎಂದು ಎಂ.ಇ ಅಶ್ರಫ್ ಅವರು ಪ್ರಶ್ನಿಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 1
Wow Wow 1