ಗೊಂದಿ‌ಬಸವನಳ್ಳಿಯ ಗುಂಡಿ ಬಿದ್ದ ರಸ್ತೆಗೆ ಕೊನೆಗೂ ಸಿಕ್ತು ಕಾಂಕ್ರೀಟ್ ಭಾಗ್ಯ! ಶಾಸಕ ಮಂತರ್ ಗೌಡ ಅವರ ಒಂದು ಕೋಟಿ ರೂ ಅನುದಾನದಲ್ಲಿ ರಸ್ತೆ ಕಾಮಗಾರಿಗೆ ಚಾಲನೆ

ಗೊಂದಿ‌ಬಸವನಳ್ಳಿಯ ಗುಂಡಿ ಬಿದ್ದ ರಸ್ತೆಗೆ ಕೊನೆಗೂ ಸಿಕ್ತು ಕಾಂಕ್ರೀಟ್ ಭಾಗ್ಯ!   ಶಾಸಕ ಮಂತರ್ ಗೌಡ ಅವರ ಒಂದು ಕೋಟಿ ರೂ ಅನುದಾನದಲ್ಲಿ ರಸ್ತೆ ಕಾಮಗಾರಿಗೆ ಚಾಲನೆ
ಗೊಂದಿ‌ಬಸವನಳ್ಳಿಯ ಗುಂಡಿ ಬಿದ್ದ ರಸ್ತೆಗೆ ಕೊನೆಗೂ ಸಿಕ್ತು ಕಾಂಕ್ರೀಟ್ ಭಾಗ್ಯ!   ಶಾಸಕ ಮಂತರ್ ಗೌಡ ಅವರ ಒಂದು ಕೋಟಿ ರೂ ಅನುದಾನದಲ್ಲಿ ರಸ್ತೆ ಕಾಮಗಾರಿಗೆ ಚಾಲನೆ

ವರದಿ:ಕೆ.ಆರ್ ಗಣೇಶ್ ಕೂಡಿಗೆ

ಕೂಡಿಗೆ:ಕುಶಾಲನಗರದಿಂದ ಗೊಂದಿಬಸವನಹಳ್ಳಿ ಮಾರ್ಗವಾಗಿ ತೆರಳುವ ರಸ್ತೆ ಹಲವು ವರ್ಷಗಳಿಂದ ಸಂಚಾರಕ್ಕೆ ಯೋಗ್ಯವಲ್ಲದ ಸ್ಥಿತಿಯಲ್ಲಿ ಇತ್ತು.ರಸ್ತೆಗಳ ಮಧ್ಯೆ ಬೃಹತ್ ಗುಂಡಿಗಳು ಅಪಾಯಕ್ಕೆ ಆಹ್ವಾನ ಮಾಡುತ್ತಿತ್ತು. ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಈ ರಸ್ತೆಯಲ್ಲಿ ತಿರುಗಾಡಲು ಅರಸಹಾಸ ಪಡುವಂತಹ ಸ್ಥಿತಿ ನಿರ್ಮಾಣಗೊಂಡಿತ್ತು. ಆದರೆ ಇದೀಗ ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ. ಮಂತರ್ ಗೌಡ ಅವರ ಶ್ರಮದಿಂದ ಗೊಂದಿಬಸವನಹಳ್ಳಿಯ ಮುಖ್ಯ ರಸ್ತೆಗೆ ಕಾಂಕ್ರೀಟ್ ಹಾಗೂ ಚರಂಡಿ ಮತ್ತು ಡಾಂಬರ್ ಕೆಲಸ ಪ್ರಗತಿಯಲ್ಲಿದೆ.ಇತ್ತೀಚಿಗೆ 

ಗೊಂದಿ ಬಸವನಹಳ್ಳಿಯ ರಸ್ತೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಶಾಸಕರಾದ ಡಾ ಮಂತರ್ ಗೌಡ, ಗೊಂದಿಬಸವನಹಳ್ಳಿ ವ್ಯಾಪ್ತಿಯ ರಸ್ತೆಗೆ ಒಂದು ಕೋಟಿಗೂ ಹೆಚ್ಚು ಮೊತ್ತದ ಚರಂಡಿ ಕಾಂಕ್ರೀಟ್ ಹಾಗೂ ಡಾಂಬರೀಕರಣ ಕೆಲಸ ಪ್ರಾರಂಭಗೊಂಡಿದ್ದು, ಗುತ್ತಿಗೆದಾರರು ಉತ್ತಮ ಗುಣಮಟ್ಟದಲ್ಲಿ ಕೆಲಸ ಮಾಡಬೇಕು ಎಂದು ಸೂಚಿಸಿದರು. 

 ಮಾಧ್ಯಮಗಳೊಂದಿಗೆ ಮಾತನಾಡಿದ ಸ್ಥಳೀಯ ನಿವಾಸಿ ಹಾಗೂ ಪುರಸಭೆ ನಾಮನಿರ್ದೇಶಕ ಸದಸ್ಯ ಎಂ.ಎಂ ಪ್ರಕಾಶ್, ಕಳೆದ ಹಲವು ವರ್ಷಗಳಿಂದ ನಮ್ಮ ಗೊಂದಿಬಸವನಹಳ್ಳಿಯ ರಸ್ತೆಗಳು ಹದಗೆಟ್ಟ ಬಗ್ಗೆ ಶಾಸಕರಾದ ಡಾ. ಮಂತರ್ ಗೌಡ ಅವರ ಬಳಿ ಗ್ರಾಮಸ್ಥರು ಹಾಗೂ ನಾವುಗಳು ಮನವಿ ಮಾಡಿದ ಮೇರೆಗೆ ನಮ್ಮ ಶಾಸಕರು ಈ ರಸ್ತೆಗೆ ಅನುದಾನವನ್ನು ತಂದು ರಸ್ತೆ ಕಾಮಗಾರಿ ಕೆಲಸ ನಡೆಯುತ್ತಿದ್ದು, ಗುತ್ತಿಗೆದಾರರು ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಕ್ಷೇತ್ರದ ಶಾಸಕರಿಗೆ ಇದೇ ಸಂದರ್ಭದಲ್ಲಿ ಧನ್ಯವಾದಗಳು ಸಲ್ಲಿಸಿದರು. 

 ಪುರಸಭೆ ನಾಮನಿರ್ದೇಶಕ ಸದಸ್ಯ ಹಾಗೂ ಸ್ಥಳೀಯ ನಿವಾಸಿಯಾದ ಜಗದೀಶ್ ಮಾತನಾಡಿ ನಮ್ಮ ಗೊಂದಿಬಸವನಹಳ್ಳಿಯ ರಸ್ತೆ ಗುಂಡಿ ಬಿದ್ದ ಕಾರಣ ಯಾವುದೇ ಆಟೋ ಬಾಡಿಗೆಗೆ ಬರುತ್ತಿರಲಿಲ್ಲ. ಹಲವಾರು ವರ್ಷಗಳಿಂದ ಮಳೆಗಾಲ ಬಂತು ಎಂದರೆ ನಮ್ಮ ಪಾಡು ದೇವರೇ ಬಲ್ಲ. ಕುಶಾಲನಗರಕ್ಕೆ ತೆರಳಲು ವಿದ್ಯಾರ್ಥಿಗಳಿಗೂ ಹಾಗೂ ಸಾರ್ವಜನಿಕರು‌ ತೊಂದರೆ ಅನುಭವಿಸುತ್ತಿದ್ದರು. ಶಾಸಕರಾದ ಮಂತರ್ ಗೌಡ ಅವರ ಶ್ರಮದಿಂದ ನಮ್ಮ ಊರಿಗೆ ಉತ್ತಮ ರಸ್ತೆ ಕೆಲಸ ಕಾಮಗಾರಿ ನಡೆಯುತ್ತಿದೆ . ಗೊಂದಿಬಸವನಹಳ್ಳಿ ವ್ಯಾಪ್ತಿಯ ರಸ್ತೆಗಳಿಗೂ ಒಂದು ಕೋಟಿಗೂ ಹೆಚ್ಚು ಮೊತ್ತದ ಕಾಮಗಾರಿ ಕೆಲಸ ಪ್ರಾರಂಭಗೊಂಡಿದೆ‌‌ ಎಂದರು.