ನಾಪೋಕ್ಲು: ಎಸ್.ಎನ್.ಡಿ.ಪಿ ವತಿಯಿಂದ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ,ಕೊಡೆ ವಿತರಣೆ

Jun 19, 2025 - 14:17
 0  66
ನಾಪೋಕ್ಲು: ಎಸ್.ಎನ್.ಡಿ.ಪಿ ವತಿಯಿಂದ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ,ಕೊಡೆ ವಿತರಣೆ

ವರದಿ:ಝಕರಿಯ ನಾಪೋಕ್ಲು

ನಾಪೋಕ್ಲು :ನಾಪೋಕ್ಲುವಿನ ಎಸ್ ಎನ್ ಡಿ ಪಿ ಶಾಖೆಯ ವತಿಯಿಂದ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಹಾಗೂ ಕೊಡೆಗಳನ್ನು ವಿತರಿಸಲಾಯಿತು.ನಾಪೋಕ್ಲುವಿನ ಶ್ರೀ ರಾಮ ಮಂದಿರದ ಶ್ರೀಗುರುಪೊನ್ನಪ್ಪ ಸಭಾಂಗಣದಲ್ಲಿ ಆಯೋಜಿಸಲಾದ ಕಾರ್ಯಕ್ರಮವನ್ನು ಎಸ್ ಎನ್ ಡಿ ಪಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾದ ರಿಷಾ ಸುರೇಂದ್ರನ್ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಎಲ್ ಕೆ ಜಿ ಯಿಂದ ಪದವಿಪೂರ್ವ ಕಾಲೇಜುವರೆಗೆ ವ್ಯಾಸಂಗ ಮಾಡುತ್ತಿರುವ ಎಸ್ ಎನ್ ಡಿ ಪಿ ನಾಪೋಕ್ಲು ಶಾಖೆಯ ಸದಸ್ಯರ ಮಕ್ಕಳಿಗೆ ನೋಟು ಪುಸ್ತಕ ಹಾಗೂ ಕೊಡೆಗಳನ್ನು ವಿತರಿಸಲಾಯಿತು.

 ಇದೇ ಸಂದರ್ಭ ಅನಾರೋಗ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂಘದ ಸದಸ್ಯೆ ವಿಲಾಸಿನಿ ಎಂಬುವವರ ಚಿಕಿತ್ಸೆಗಾಗಿ ಎಸ್ ಎನ್ ಡಿ ಪಿ ನಾಪೋಕ್ಲು ಶಾಖೆಯ ವತಿಯಿಂದ 58,ಸಾವಿರ ರೂಗಳ ಧನಸಹಾಯವನ್ನು ವಿಲಾಸಿನಿ ಅವರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.

 ಈ ಸಂದರ್ಭ ಎಸ್ ಎನ್ ಡಿ ಪಿ ಜಿಲ್ಲಾ ಮಹಿಳಾ ಘಟಕದ ನಿರ್ದೇಶಕಿ ಬಬಿತ, ಎಸ್ ಎನ್ ಡಿ ಪಿ ನಾಪೋಕ್ಲು ಶಾಖೆಯ ಅಧ್ಯಕ್ಷ ಟಿ.ಸಿ. ಲವ, ಕಾರ್ಯದರ್ಶಿ ಕಿಶೋರ್, ಎಸ್ ಎನ್ ಡಿ ಪಿ ಜಿಲ್ಲಾ ನಿರ್ದೇಶಕ ಟಿ.ಸಿ.ರಾಜೀವನ್, ನಾಪೋಕ್ಲು ಶ್ರೀ ಪೊನ್ನು ಮುತ್ತಪ್ಪ ದೇವಾಲಯದ ಅಧ್ಯಕ್ಷ ಎ.ಕೆ. ಚಂದ್ರನ್, ಎಸ್ ಎನ್ ಡಿ ಪಿ ನಾಪೋಕ್ಲು ಶಾಖೆಯ ಸಹಕಾರ್ಯದರ್ಶಿ ಅಜಿತ್, ಉಪಾಧ್ಯಕ್ಷ ತಂಗನ್, ಹರಿದಾಸ್, ಸಂಘಟನಾ ಕಾರ್ಯದರ್ಶಿ ರಿತೇಶ್ (ಚಿನ್ನ) ಮನೋಹರ, ಕೋಶಾಧಿಕಾರಿ ಸುದೀಶ್ ಸೇರಿದಂತೆ ಎಸ್ ಎನ್ ಡಿ ಪಿ ನಾಪೋಕ್ಲು ಶಾಖೆಯ ಸರ್ವ ಸದಸ್ಯರು ಪಾಲ್ಗೊಂಡಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0