ನೆಲಜಿ ಗ್ರಾಮದಲ್ಲಿ ಕಾಡಾನೆಗಳ ಹಿಂಡು ಪ್ರತ್ಯಕ್ಷ : ಗ್ರಾಮಸ್ಥರಲ್ಲಿ ಆತಂಕ- ಆನೆಗಳನ್ನು ಕಾಡಿಗಟ್ಟಿದ ಅರಣ್ಯ ಇಲಾಖೆ

ವರದಿ:ಝಕರಿಯ ನಾಪೋಕ್ಲು
ನಾಪೋಕ್ಲು :ನಾಪೋಕ್ಲು ಬಳಿಯ ನೆಲಜಿ ಗ್ರಾಮದಲ್ಲಿ ಕಾಡಾನೆಗಳ ಹಿಂಡು ಪ್ರತ್ಯಕ್ಷವಾಗಿದ್ದು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ.ಸೋಮವಾರ ನೆಲಜಿ ಗ್ರಾಮದಿಂದ ಕಕ್ಕಬ್ಬೆಗ್ರಾಮಕ್ಕೆ ತೆರಳುವ ಮುಖ್ಯ ರಸ್ತೆಯಲ್ಲಿ ಕಾಡಾನೆಗಳ ಹಿಂಡು ರಸ್ತೆ ದಾಟುವ ದೃಶ್ಯ ಕಂಡು ಬಂದಿದೆ. ಕಾಡಾನೆಗಳು ರಸ್ತೆ ದಾಟುವ ದೃಶ್ಯವನ್ನು ಸ್ಥಳೀಯರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಹಾಡು ಹಗಲೇ ಕಾಡಾನೆಗಳನ್ನು ಕಂಡು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಯಾಗಿದೆ.ನೆಲಜಿ ಗ್ರಾಮದ ನಿವಾಸಿ ಚಿಯಕಪೂವಂಡ ಉಮೇಶ್, ಅಚ್ಚಾಂಡಿರ ಕುಟುಂಬ ಮತ್ತು ಮಣವಟ್ಟಿರ ಕುಟುಂಬಸ್ಥರ ತೋಟಗಳಿಗೆ ಕಾಡಾನೆಗಳು ಲಗ್ಗೆಯಿಟ್ಟಿದ್ದು ಇದರಿಂದ ಕಾಫಿ ಇನ್ನಿತರ ಗಿಡಗಳಿಗೆ ಹಾನಿಯಾಗಿದೆ. ಕಾಡಾನೆಗಳನ್ನು ಕಂಡ ಗ್ರಾಮಸ್ಥರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಭಾಗಮಂಡಲ ಕಕ್ಕಬ್ಬೆ ಉಪವಲಯ ಅರಣ್ಯಾಧಿಕಾರಿ ಕಾಳೆ ಗೌಡ, ಗಸ್ತುಅರಣ್ಯ ಪಾಲಕ ಶರತ್, ಅರಣ್ಯ ವೀಕ್ಷಕ ಸಚಿನ್ ಹಾಗೂ ಆರ್ ಆರ್ ಟಿ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಆನೆಗಳನ್ನು ಕಾಡಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
What's Your Reaction?






