ಶಿಷ್ಟಾಚಾರ ಉಲ್ಲಂಘನೆ: ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಪಿಡಿಓ ಅಮಾನತು : ತಡೆಗೋಡೆ ಉದ್ಘಾಟನೆ ಕಾರ್ಯಕ್ರಮಕ್ಕೆ ಎಂ.ಎಲ್.ಸಿ ಸುಜಾ ಕುಶಾಲಪ್ಪ ಅವರನ್ನು ಆಹ್ವಾನಿಸದ ಪಿಡಿಓ

Jun 14, 2025 - 11:15
 0  245
ಶಿಷ್ಟಾಚಾರ ಉಲ್ಲಂಘನೆ: ಗೋಣಿಕೊಪ್ಪ ಗ್ರಾಮ ಪಂಚಾಯಿತಿ  ಪಿಡಿಓ ಅಮಾನತು : ತಡೆಗೋಡೆ ಉದ್ಘಾಟನೆ ಕಾರ್ಯಕ್ರಮಕ್ಕೆ ಎಂ.ಎಲ್.ಸಿ ಸುಜಾ ಕುಶಾಲಪ್ಪ ಅವರನ್ನು ಆಹ್ವಾನಿಸದ ಪಿಡಿಓ

ಗೋಣಿಕೊಪ್ಪ: ಶಿಷ್ಟಾಚಾರ ಉಲ್ಲಂಘನೆ ಮಾಡಿದ ಹಿನ್ನೆಲೆ ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೆ.ಎಂ. ತಿಮ್ಮಯ್ಯ ಅವರನ್ನು ಅಮಾನತುಗೊಳಿಸಿ ಪಂಚಾಯತ್ ರಾಜ್ ಆಯುಕ್ತಾಲಯ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.

16-06-2024 ರಂದು ಗೋಣಿಕೊಪ್ಪದಲ್ಲಿ ತಡೆಗೋಡೆ ಉದ್ಘಾಟನೆ ಕಾರ್ಯಕ್ರಮಕ್ಕೆ ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ ಅವರನ್ನು ಆಹ್ವಾನಿಸದ ಹಿನ್ನೆಲೆ ಅಧಿಕಾರಿ ಶಿಷ್ಟಾಚಾರ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಸುಜಾ ಅವರು ವಿಧಾನ ಪರಿಷತ್ತಿನ ಹಕ್ಕು ಬಾಧ್ಯತಾ ಸಮಿತಿ ಸಭೆಯಲ್ಲಿ ಪ್ರಸ್ತಾಪಿಸಿದ್ದರು.ಈ ಹಿನ್ನೆಲೆ ಕರ್ನಾಟಕ ಸಿವಿಲ್ ಸೇವೆಗಳ ನಿಯಮಗಳ ಅಡಿಯಲ್ಲಿ ತಕ್ಷಣ ಜಾರಿಗೆ ಬರುವಂತೆ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0