ಸಿದ್ದಾಪುರ: ಈಸ್ಟರ್ ಕಪ್ ಎಸ್ .ಜೆ. ಸಿ. ಕ್ಯಾಪಿಟಲ್ಸ್ ತಂಡ ಚಾಂಪಿಯನ್
ಸಿದ್ದಾಪುರ :-ಈಸ್ಟರ್ ಹಬ್ಬದ ಪ್ರಯುಕ್ತ ಸಿದ್ದಾಪುರ ಸಂತ ಜೋಸೆಫ್ ದೇವಾಲಯದ ಎಸ್. ಜೆ. ಸಿ. ಕ್ರಿಕೆಟ್ ಸಂಘದ ವತಿಯಿಂದ ಸ್ಟೈಕರ್ಸ್ ಎಡ್ಜ್ ಟರ್ಫ್ ಮೈದಾನದಲ್ಲಿ ಐಪಿಎಲ್ ಮಾದರಿಯ ಈಸ್ಟರ್ ಕಪ್ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು .
ಮಾಲ್ದಾರೆ ಫ್ರೆಂಡ್ಸ್ 11 ತಂಡದ ಮಹಿಳಾ ಆಟಗಾರ್ತಿ ಪ್ರಮೀಳಾ ಕ್ರೀಡಾಕೂಟವನ್ನು ಉದ್ಘಾಟಿಸಿ ನಂತರ ಮಾತನಾಡಿ ಇಂತಹ ಕ್ರೀಡಾಕೂಟಗಳನ್ನು ಆಯೋಜನೆ ಮಾಡುವುದರಿಂದ ಪ್ರತಿಭಾವಂತ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲು ಸಹಕಾರಿಯಾಗಿದ್ದು. ಕ್ರೀಡಾಕೂಟಗಳಿಂದ ಸೌಹಾರ್ದ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗಲಿದೆ.ಮುಂದಿನ ವರ್ಷ ಮಹಿಳೆಯರು ಮಕ್ಕಳು ಸೇರಿದಂತೆ ಪುರುಷರಿಗೆ ವಿವಿಧ ಕ್ರೀಡಾಕೂಟಗಳನ್ನು ಆಯೋಜಿಸಲಾಗುವುದು ಎಂದರು .
ಕ್ರೀಡಾಕೂಟದಲ್ಲಿ ಐದು ತಂಡಗಳು ಭಾಗಿಯಾಗಿದ್ದವು ರದೀಶ್ ನಾಯಕತ್ವ ಎಸ್.ಜೆ. ಸಿ. ಕ್ಯಾಪಿಟಲ್ಸ್ ತಂಡ ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿ ಕೊಂಡಿತ್ತು ದ್ವಿತೀಯ ಸ್ಥಾನವನ್ನು ಎಸ್.ಜೆ. ಸಿ. ನೈಟ್ ರೈಡರ್ಸ್ ತಂಡ ಪಡೆದುಕೊಂಡಿದ್ದಾರೆ.ಸರಣಿ ಶ್ರೇಷ್ಠ ಪ್ರಶಸ್ತಿ ಹಾಗೂ ಫೈನಲ್ ಪಂದ್ಯಾದಲ್ಲಿ ಉತ್ತಮ ಆಟಕ್ಕಾಗಿ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ರದೀಶ್ ಪಡೆದುಕೊಂಡರು.ಉತ್ತಮ ಹೊಡೆತಗಾರ ಆಲ್ಬರ್ಟ್,ಕ್ರೀಡಾಕೂಟದಲ್ಲಿ ಮಹಿಳಾ ಆಟಗಾರ್ತಿ ಟೀನೀ,ಜೋಯ್, ವಿಜು,ಜೋಸಿ, ವಿನ್ಸಿ, ತೋಮಸ್,ಸಾನಿಲ್ ಇತರರು ಹಾಜರಿದ್ದರು.
What's Your Reaction?






