ಸಿದ್ದಾಪುರ: ಬೃಹತ್ ಗಾತ್ರದ ನಾಗರಹಾವಿನ ರಕ್ಷಣೆ
ಸಿದ್ದಾಪುರ:- ಗುಹ್ಯ ಗ್ರಾಮದಲ್ಲಿ ಕೋಳಿಗೂಡಿನ ಒಳಗೆ ಕಾಣಿಸಿಕೊಂಡಿದ್ದ ಬೃಹತ್ ಗಾತ್ರದ ನಾಗರಹಾವನ್ನು ಉರಗ ಪ್ರೇಮಿ ಸುರೇಶ್ ಪೂಜಾರಿ ರಕ್ಷಣೆ ಮಾಡಿ ಅರಣ್ಯಕ್ಕೆ ಬಿಟ್ಟಿದ್ದಾರೆ.ಗುಹ್ಯ ಗ್ರಾಮದ ವಿಜಯ ಎಂಬವರ ಮನೆಯ ಕೋಳಿ ಗೂಡಿನೊಳಗೆ ಕೋಳಿಯ ಮೊಟ್ಟೆಯನ್ನು ತೆಗೆಯುವ ಸಂದರ್ಭದಲ್ಲಿ ಹಾವು ಕಾಣಿಸಿಕೊಂಡಿದೆ.ಹಾವನ್ನ ಕಂಡು ಗಾಬರಿಗೊಂಡು ತಕ್ಷಣ,ಉರಗ ಪ್ರೇಮಿ ಸುರೇಶ್ ಪೂಜಾರಿಯವರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದರು.ಸ್ಥಳಕ್ಕೆ ಆಗಮಿಸಿದ ಸುರೇಶ್ ಗುಡಿನೊಳಗೆ ಪರಿಶೀಲಿಸಿದಾಗ ಹಾವು ಇರುವುದು ಕಂಡುಬಂದಿದೆ .ನಂತರ ಹಾವನ್ನು ಸುರಕ್ಷಿತವಾಗಿ ಸೆರೆ ಹಿಡಿದು ಮಾಲ್ದಾರೆ ಅರಣ್ಯಕ್ಕೆ ಬಿಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸುರೇಶ್ ಪೂಜಾರಿ ಜೂನ್ ಮತ್ತು ಜುಲೈ ತಿಂಗಳಲ್ಲಿ ನಾಗರ ಹಾವಿನ ಮರಿಗಳು ಹೊರ ಬರುವುದು ಸಹಜವಾಗಿದೆ.ನಾಗರಹಾವು ಮೊಟ್ಟೆ ಇಟ್ಟು ಎಪ್ಪತ್ತು ದಿನಗಳ ನಂತರ ಮರಿ ಬರುವುದು ಸಂದರ್ಭದಲ್ಲಿ ನೀರಿಗೋಸ್ಕರ ಹುಡುಕಿಕೊಂಡು ಹೋಗುತ್ತವೆ.ಹಾವಗಳು ಕಂಡ ಬಂದಲ್ಲಿಯಾರು ಕೂಡ ಕೊಲ್ಲಬೇಡಿ ಹಾವಿನ ಸಂರಕ್ಷಣೆ ಮಾಡಲು ಈ ಮೊಬೈಲ್ ಸಂಖ್ಯೆ 8277131863 ಕ್ಕೆ ಮಾಹಿತಿ ನೀಡಿ ಎಂದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0

