ಸಿದ್ದಾಪುರ ಸಂತ ಅನ್ನಮ್ಮ ಶಾಲೆಯ ಎಲ್. ಕೆ. ಜಿ. ಹಾಗೂ ಯುಕೆಜಿ ತರಗತಿ ಪ್ರಾರಂಭೋತ್ಸವ

ಸಿದ್ದಾಪುರ:- ಸಂತ ಅನ್ನಮ
ಶಾಲೆಯ ಪ್ರಸಕ್ತ ಸಾಲಿನ ಎಲ್ . ಕೆ. ಜಿ. ಹಾಗೂ ಯುಕೆಜಿ (ಸಿ.ಬಿ ಎಸ್.ಇ) ತರಗತಿಯ ಶೈಕ್ಷಣಿಕ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ಶಾಲಾ ಆವರಣದಲ್ಲಿ ಸೋಮವಾರ ನಡೆಯಿತು.
ಶಾಲಾ ಪ್ರಾರಂಭೋತ್ಸವ ಅಂಗವಾಗಿ ನರ್ಸರಿ ಶಾಲಾ ಕೊಠಡಿಗಳನ್ನು ಪರಿಸರ, ಶುಚಿತ್ವ, ಶೈಕ್ಷಣಿಕ ಚಟುವಟಿಕೆಗಳ ಕುರಿತು ಚಿತ್ರ ಅಲಂಕಾರದ ಮೂಲಕ ರಚಿಸಲಾಗಿತ್ತು. ಪೋಷಕರೊಂದಿಗೆ ಆಗಮಿಸಿದ ಪುಟಾಣಿಗಳು ಶಿಕ್ಷಕರುಗಳಿಗೆ ನಮಸ್ಕರಿಸಿ ಶಾಲಾ ಕೊಠಡಿ ಪ್ರವೇಶ ಮಾಡಿದರು.
ಮೊದಲ ದಿನವೇ ಶಾಲಾ ಮಕ್ಕಳಿಗೆ ಅಕ್ಕಿಯ ಮೇಲೆ ಅಕ್ಷರ ಬರೆದು ಅಕ್ಷರ ಅಭ್ಯಾಸ ಮಾಡಲಾಯಿತು ಹಾಗೂ ಶಿಕ್ಷಕರುಗಳು ಶಿಸ್ತು, ಸಮಯ ಪಾಲನೆ, ಗೌರವ, ಪರಿಸರ ಕಾಳಜಿ, ಸುಚಿತ್ವ, ಆರೋಗ್ಯ, ಕ್ರೀಡಾ ಚಟುವಟಿಕೆಗಳ ಕುರಿತು ನೀತಿ ಪಾಠಗಳನ್ನು ಹೇಳಿದರು.
ಸಂತ ನಮ್ಮ ಶಾಲೆಯ ವ್ಯವಸ್ಥಾಪಕರಾದ ಸಿಟ್ಟರ್ ಮಾರ್ಜರಿ ಮಾತನಾಡಿ ಶಿಕ್ಷಣದ ಮೂಲಕ ಮಕ್ಕಳನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಮುಂದಾಗುತ್ತೇವೆ.ಪೋಷಕರು ತಮ್ಮ ಮಕ್ಕಳ ಭವಿಷ್ಯವನ್ನು ರೂಪಿಸಲು ಮುಂದಾಗಬೇಕು.
ಶಿಕ್ಷಣ ಬೆಳವಣಿಗೆಗೆ ಪೂರಕವಾಗಿ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಶಿಕ್ಷಣದಿಂದ ವಂಚಿತರಾಗದೆ ಶಾಲೆಯ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆಂದರು.
ಈ ಸಂದರ್ಭ ಫಾದರ್ ಜೋಜಿ, ಪ್ರಾಂಶುಪಾಲೆ ಸಿಟ್ಟರ್ ಲ್ಯೆನಿಟ್,ಸಂಚಾಲಕರಾದ ಸಿಸ್ಟರ್ ಅರ್ಪಿತಾ ,ಗ್ರೇಸ್ ಲಿಮಾ ನಿರ್ವಾಣ ಸಮಿತಿಯ ಸದಸ್ಯರಾದ ಸಿಟ್ಟರ್ ಗ್ರೇಸ್ ಲಿಮಾಶಿಕ್ಷಕಿರಾದ ಲೆನಿ,ಸುನಿತಾ, ತೆರೇಸಾ
ಸೇರಿದಂತೆ ಪೋಷಕರು ಮತ್ತಿತರರು ಇದ್ದರು.
What's Your Reaction?






