ಕ್ಯಾನ್ಸರ್ ರೋಗಿಗೆ ತಲೆಕೂದಲು ಕೊಡುಗೆ

ಕ್ಯಾನ್ಸರ್ ರೋಗಿಗೆ ತಲೆಕೂದಲು ಕೊಡುಗೆ

ಮಡಿಕೇರಿ:ಕ್ಯಾನ್ಸರ್ ಪೀಡಿತ ರೋಗಿಯ ನೆರವಿಗಾಗಿ ಮಡಿಕೇರಿಯ ವಿನುತಾ ವಸಂತ್ ಅವರು ರೋಟರಿ ವುಡ್ಸ್ ಮೂಲಕ ತಲೆಕೂದಲನ್ನು ನೀಡಿದರು.ರೋಟರಿ ಮಡಿಕೇರಿ ವುಡ್ಸ್ ಅಧ್ಯಕ್ಷ ಹರೀಶ್ ಕಿಗ್ಗಾಲು, ಕಾಯ೯ದಶಿ೯ ಕಿರಣ್ ಕುಂದರ್ ಅವರುಗಳು ದಾನವಾಗಿ ನೀಡಲ್ಪಟ್ಟ ಕೂದಲನ್ನು ಪಡೆದು ಮಂಗಳೂರಿನ ರೋಗಿಗೆ ರವಾನಿಸಿದರು. ಸ್ವಾಥ೯ ರಹಿತ ಸೇವೆಗೆ ವಿನುತಾವಸಂತ್ ನಿದಶ೯ನವಾಗಿದ್ದಾರೆ. ಇವರ ಸೇವೆ ಆದಶ೯ಪ್ರಾಯವಾಗಿದೆ ಎಂದೂ ಹರೀಶ್ ಕಿಗ್ಗಾಲು ಶ್ಲಾಘಿಸಿದರು.