ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ರಾಯಭಾರಿ ಯಲ್ಲಿ ಪಾಲ್ಗೊಳ್ಳಲು ಮೂರ್ನಾಡುವಿನ ಯಶಸ್ ರೈ ಆಯ್ಕೆ
admincoorgdaily
ಮಡಿಕೇರಿ:ಈ ಬಾರಿ ದೆಹಲಿಯಲ್ಲಿ ನಡೆಯುವ ಸ್ವಾತಂತ್ರೋತ್ಸವ ಕಾರ್ಯಕ್ರಮ ದಲ್ಲಿ ಪಾಲ್ಗೊಳ್ಳಲು, ಕೊಡಗು ಜಿಲ್ಲೆಯ ಮೂರ್ನಾಡು ಕೊಡಂಬುರುವಿನ ಯಶಸ್ ರೈ ಕರ್ನಾಟಕವನ್ನು ಪ್ರತಿನಿದಿಸಲಿದ್ದಾರೆ.ದೇಶದ ಪ್ರತಿ ರಾಜ್ಯದಿಂದ 15 ವರ್ಷ ದಿಂದ 28 ವರ್ಷ ವಯೋಮಿತಿ ವರೆಗಿನ ಈ ಅವಕಾಶದಲ್ಲಿ ಕರ್ನಾಟಕ ರಾಜ್ಯ ದಿಂದ ಈ ಬಾರಿ ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆ ಈ ಸ್ಥಾನವನ್ನು ಪಡೆದುಕೊಂಡಿದೆ.ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ, ನೆಹರು ಯುವಕೇಂದ್ರದಮೈ ಭಾರತ್ ಪೋರ್ಟಲ್ ಮೂಲಕ ನೋಂದಣಿ ಗೊಂಡ ಯುವಕರಲ್ಲಿ ಇವರು ಆಯ್ಕೆ ಗೊಂಡಿರುತ್ತಾರೆ.ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ವಿಶೇಷ ರಾಯಭಾರಿಗಳಾಗಿ ಕರ್ನಾಟಕದಿಂದ ಪಾಲ್ಗೊಳ್ಳಲಿದ್ದಾರೆ. ಶ್ರೀ ಬಿ ಎನ್. ಲವಕುಮಾರ್ ಹಾಗೂ ಹಾಗೂ ಜಯಂತಿ ಬಿ. ಬಿ.ಅವರ ದ್ವಿತೀಯ ಪುತ್ರರಾಗಿರುವ ಯಶಸ್ ರೈ ಸುಳ್ಳ ಕೆ.ವಿ.ಜಿ. ಇಂಜಿಯರಿಂಗ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ವ್ಯಾಸಂಗ ಮಾಡುತ್ತಿದ್ದಾರೆ.ಸನ್ಮಾನ್ಯ ಪ್ರದಾನ ಮಂತ್ರಿಗಳ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದುಕೊಡಗು ಜಿಲ್ಲೆ ಕರ್ನಾಟಕವನ್ನು ಪ್ರತಿನಿಧಿಸಿರುವುದು ಕೊಡಗು ಜಿಲ್ಲೆಯ ಯುವ ಜನೆತೆಗೆ ಹೆಮ್ಮೆ ತಂದಿದೆ. ಅಲ್ಲದೆ ಇತ್ತೀಚಿನ ಈ ವಯಸ್ಸಿನ ಯುವ ಸಮೂಹ ಜಿಲ್ಲಾ ಯುವ ಒಕ್ಕೂಟ ಮುಖಾಂತರ ರಾಷ್ಟ್ರ ಯುವಜನೋತ್ಸವ ಸಾoಸ್ಕೃತಿಕ ದಂತಹ ಕಾರ್ಯಕ್ರಮ ದಲ್ಲಿ ಕೊಡಗನ್ನು ಪ್ರತಿನಿಧಿಸಿರುವುದು ಹೆಮ್ಮೆ ತಂದಿದೆ ಎಂದು ಕೊಡಗು ಜಿಲ್ಲಾ ಯುವ ಒಕ್ಕೂಟ ಅಧ್ಯಕ್ಷರಾದ ಪಿ. ಪಿ ಸುಕುಮಾರ್ ತಿಳಿಸಿದ್ದಾರೆ.