ಜಲ ಜೀವನ್ ಮಿಷನ್ ಯೋಜನೆಯ ಅನುಷ್ಠಾನದ ಕುರಿತು 15 ದಿನಗಳ "ಕ್ಷೇತ್ರ ಭೇಟಿ ಪರಿಶೀಲನಾ ಆಂದೋಲನ ಕಾರ್ಯಕ್ರಮ: ವಿರಾಜಪೇಟೆ ಹಾಗೂ ಪೊನ್ನಂಪೇಟೆ ತಾಲ್ಲೂಕಿನ ವಿವಿಧ ಭಾಗಗಳಿಗೆ ಜಿಲ್ಲಾ ಪಂಚಾಯತ್ ಸಿ.ಇ.ಓ ಭೇಟಿ
ಮಡಿಕೇರಿ:ಕೊಡಗು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಆನಂದ ಪ್ರಕಾಶ್ ಜಲ ಜೀವನ್ ಮಿಷನ್ ಯೋಜನೆಯ ಅನುಷ್ಠಾನದ ಕುರಿತು 15 ದಿನಗಳ "ಕ್ಷೇತ್ರ ಭೇಟಿ ಪರಿಶೀಲನಾ ಆಂದೋಲನ ಅಂಗವಾಗಿ ವಿರಾಜಪೇಟೆ ಮತ್ತು ತ ಪೊನ್ನಂಪೇಟೆ ತಾಲೂಕಿನ, ಕಾವಾಡಿ ಕಾರ್ಮಾಡು,ಅರಕೇರಿ ಫಾರೆಸ್ಟ್, ಬಾಳೆಲೆ,ತಟ್ಟೆಕೆರೆ ಹಾಡಿ, ನಾಗರಹೊಳೆ ಹಾಡಿ, ನಾನಚಿ,ಗ್ರಾಮಗಳಿಗೆ ಭೇಟಿ ನೀಡಿ ಜೆಜೆಎಂ ಕಾಮಗಾರಿಯಡಿ ಅಳವಡಿಸಿರುವ ಗೃಹನಳ ಸಂಪರ್ಕದ ಗುಣಮಟ್ಟ, ಮೀಟರ್ ಅಳವಡಿಕೆ, ಕುಡಿಯುವ ನೀರಿನ ಪೂರೈಕೆ, ರಸ್ತೆ ಪುನಶ್ಚೇತನ ಹಾಗೂ , ಗ್ರಾಮ ಪಂಚಾಯಿತಿಗಳಲ್ಲಿ FTK - ನೀರಿನ ಗುಣಮಟ್ಟ, VWSC ಸಭೆ, VWSC-ಬ್ಯಾಂಕ್ ಖಾತೆಯ ವಿವರ & O&M policy adoption ಕುರಿತು ವರದಿಗಳನ್ನು ಪರಿಶೀಲಿಸಿದರು. ಗ್ರಾಮಗಳಲ್ಲಿನ ಶಾಲೆ, ಗ್ರಂಥಾಲಯ ಮತ್ತು ಅಂಗನವಾಡಿಗಳಿಗೆ ಭೇಟಿ ನೀಡಿದರು.
ನಂತರ ಗ್ರಾಮಗಳಲ್ಲಿರುವ ಕುಡಿಯುವ ನೀರಿನ ಯೋಜನೆಯ ನೀರು ಶುದ್ದಿಕರಣ ಘಟಕಗಳು, ಹಾಗೂ ನೀರು ಶೇಖರಣ ತೊಟ್ಟಿಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಕಾರ್ಯಪಾಲಕ ಅಭಿಯಂತರರು, ಗ್ರಾ.ಕು.ನೀ.ನೈ ವಿಭಾಗ, ಸಹಾಯಕ ಕಾರ್ಯಪಾಲಕ ಅಭಿಯಂತರರು, ತಾಲೂಕು ಪಂಚಾಯಿತಿ , ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ/ ಕಿರಿಯ ಅಭಿಯಂತರರು,DPM, Geolagist,TPIA ಸಪೋರ್ಟ್ ಇಂಜಿನಿಯರ್ ಗಳು,ಗುತ್ತಿಗೆದಾರರು ಹಾಗೂ ಗ್ರಾಮ ಪಂಚಾಯತಿ ಪಿಡಿಒ ಗಳು, ಅಧ್ಯಕ್ಷರು, ಸದಸ್ಯರು, ನೀರುಗಂಟಿಗಳು ಹಾಜರಿದ್ದರು.