ವಿರಾಜಪೇಟೆ ಸ್ನೇಹಿತರ ಒಕ್ಕೂಟ ವಿರಾಜಪೇಟೆ ವತಿಯಿಂದ 79ನೇ ಸ್ವಾತಂತ್ರ್ಯ ದಿನಾಚರಣೆ
ವಿರಾಜಪೇಟೆ: ನಗರದ ಮಲ್ಮ ಕಾಂಪ್ಲೆಕ್ಸ್ ಆವರಣದಲ್ಲಿ ಸ್ನೇಹಿತರ ಒಕ್ಕೂಟ ವಿರಾಜಪೇಟೆ ವತಿಯಿಂದ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಧ್ವಜಾರೋಹಣವನ್ನು ನಿವೃತ್ತ ಯೋಧರಾದ ಪ್ರಕಾಶ್ ಅಪ್ಪಯ್ಯ, ಖ್ಯಾತ ವಕೀಲರಾದ ವಿಶ್ವನಾಥ್, ಡಾಕ್ಟರ್ ಬೊಪಣ್ಣ, ಕೋಲತಂಡ ಬೊಪ್ಪಯ್ಯ, ಎಂ ಸಿ ಕಾವೇರಮ್ಮ, ಸುದರ್ಶನ್ ರೈ ಅವರು ನೆರವೇರಿಸಿದರು.
ಅತಿಥಿಗಳಾಗಿ ಪುರಸಭೆ ಹಿರಿಯ ಸದಸ್ಯರಾದ ಮತೀನ್ ಎಸ್ ಹೆಚ್, ಮೊಹಮ್ಮದ್ ರಾಫಿ, ಕೂರ್ಗ್ ದಿ ಕಾಶ್ಮೀರ್ ಸಂಸ್ಥಾಪಕರಾದ ಫೈಸಲ್ , ಹಾಗೂ ಸ್ನೇಹಿತರ ಒಕ್ಕೂಟ ಗೌರವ ಅಧ್ಯಕ್ಷರಾದ ಶಫಿ ಅಹ್ಮದ್, ಅಧ್ಯಕ್ಷರಾದ ಹಬೀಬ್ ಉಲ್ಲಾ ಶರೀಫ್, ಸಂಸ್ಥಾಪಕರಾದ ಮೊಹಮ್ಮದ್ ನಯಾಜ್, ಸೈಯದ್ ಇಮ್ರಾನ್, ಮೆಲ್ರೋಯ್ ಲೋಬೊ, ಇಮ್ರಾನ್ ಖಾನ್, ಜಬಿವುಲ್ಲಾ, ಜಿಶಾನ, ಮೊಹ್ಸೀನ್, ಉಪಸ್ಥಿತರಿದ್ದರು.