ಸಿದ್ದಾಪುರ ಶ್ರೀರಾಮ ಮಂದಿರದಲ್ಲಿ 86ನೇ ಗೌರಿ ಗಣೇಶ ಪ್ರತಿಷ್ಠಾಪನೆ

ಸಿದ್ದಾಪುರ ಶ್ರೀರಾಮ ಮಂದಿರದಲ್ಲಿ 86ನೇ ಗೌರಿ ಗಣೇಶ  ಪ್ರತಿಷ್ಠಾಪನೆ

ಸಿದ್ದಾಪುರ :- ಕಳೆದ 86 ವರ್ಷಗಳಿಂದ ದಿ- ಶಿವನಂಜಪ್ಪ ಅವರ ಕುಟುಂಬಸ್ಥರು ಗೌರಿ ಗಣೇಶ ಉತ್ಸವವನ್ನ ಎಲ್ಲಾ ಬಾಂಧವರನ್ನ ಒಗ್ಗೂಡಿಸಿ ಸೌಹಾರ್ದತವಾಗಿ ಆಚರಿಸಿಕೊಂಡು ಬರುವ ಮೂಲಕ ಜಿಲ್ಲೆಗೆ ಮಾದರಿಯಾಗಿರುವ ಸಿದ್ದಾಪುರದ ಶ್ರೀರಾಮ ಮಂದಿರದಲ್ಲಿ ಶ್ರೀ ಗೌರಿ ಗಣೇಶ ಮೂರ್ತಿಗಳನ್ನ ಪ್ರತಿಷ್ಠಾಪನೆ ಮಾಡಲಾಯಿತು. ವಿಶೇಷ ಪೂಜಾ ಕಾರ್ಯಗಳೊಂದಿಗೆ ಅಲಂಕೃತ ಬೆಳ್ಳಿರಥದ ಮಂಟಪದಲ್ಲಿ ಮೂರ್ತಿಗಳನ್ನು ಕುಳ್ಳಿರಿಸಿ ಮೈಸೂರಿನ ಪ್ರಖ್ಯಾತ ಬ್ಯಾಂಡ್ ಸೆಟ್ ವಾದ್ಯಗೋಷ್ಠಿಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಸಾಗಿ ಶ್ರೀರಾಮ ಮಂದಿರದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು. ಮೆರವಣಿಗೆಯ ಉದ್ದಕ್ಕೂ ಭಕ್ತರು ಕುಣಿದು ಕುಪ್ಪಳಿಸಿ ಸಂಭ್ರಮಿಸಿ ಗೌರಿ ಗಣೇಶ ಉತ್ಸವಕ್ಕೆ ಜೈಕಾರ ಕೂಗಿದರು. ಈ ಸಂದರ್ಭ ಶ್ರೀರಾಮ ಮಂದಿರ ಸಮಿತಿಯ ಪ್ರಮುಖರು,ಸ್ಥಳೀಯರು,ಕಾರ್ಯಕರ್ತರು,ಭಕ್ತಾದಿಗಳು ಹಾಜರಿದ್ದರು.