ನೀರಿನ ರಭಸಕ್ಕೆ ಬೈಕ್ ಸಮೇತ ಕೊಚ್ಚಿ ಹೋಗಿ ಗಾಯಗೊಂಡಿದ್ದ ಅನುಪಮ್ ಅವರ ಆರೋಗ್ಯ ವಿಚಾರಿಸಿದ ಅಧಿಕಾರಿಗಳ ತಂಡ
admincoorgdaily
ಮಡಿಕೇರಿ:ಚೆಂಬು ಗ್ರಾಮದ ಡಬ್ಬಡ್ಕ ಹೊಸೂರು ನಿರೂಪಮ ರವರ ಮನೆಗೆ ಭೇಟಿ ನೀಡಿದ ಕೊಡಗು ಜಿಲ್ಲೆ ಉಪ ವಿಭಾಗಾಧಿಕಾರಿಗಳು, ಮಡಿಕೇರಿ ತಹಶೀಲ್ದಾರರು ಹಾಗೂ ಅಧಿಕಾರಿಗಳ ತಂಡ ಆರೋಗ್ಯ ವಿಚಾರಿಸಿದ್ದಾರೆ.
ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರ ಸೂಚನೆ ಮೇರೆಗೆ, ದಿನಾಂಕ 21-10-2025 ವಿಭಾಗಧಿಕಾರಿಗಳು ಹಾಗೂ ಮಡಿಕೇರಿ ತಹಶೀಲ್ದಾರ್ ಮತ್ತು ಕಂದಾಯ ಪರಿವೀಕ್ಷಕರು ಹಾಗೂ ಸಿಬ್ಬಂದಿಗಳು ಮತ್ತು ಗ್ರಾಮದ ಪ್ರಮುಖರು, ಇತ್ತೀಚೆಗೆ ನೀರಿನ ರಭಸಕ್ಕೆ ಬೈಕ್ ಸಮೇತ ಕೊಚ್ಚಿ ಹೋಗಿ ಅದೃಷ್ಟವಶಾತ್ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ, ಡಬ್ಬಡ್ಕ ಭಾಗದ ಹೊಸೂರು ಜಯರಾಮ ರವರ ಪುತ್ರ ಅನುಪಮ್ ರವರನ್ನು ಭೇಟಿಯಾದರು.
ಮೊದಲಿಗೆ, ಅವಘಡ ಸಂಭವಿಸಿದ ಹೊದ್ದೆಟ್ಟಿ ಹೊಳೆ ಜಾಗವನ್ನು ಪರಿಶೀಲಿಸಿದ ಬಳಿಕ ನಿರೂಪಮ ಮನೆಗೆ ಭೇಟಿ ನೀಡಿ ಕುಟುಂಬದವರೊಂದಿಗೆ ಮಾತನಾಡಿ ಧೈರ್ಯ ತುಂಬಿದರು . ಈ ಎಲ್ಲಾ ಘಟನೆಯ ವಿವರವನ್ನು ಶಾಸಕರ ಮೂಲಕ ರಾಜ್ಯ ಸರ್ಕಾರಕ್ಕೆ ಹಾಗೂ ಸಂಬಂಧ ಪಟ್ಟ ಇಲಾಖೆಗಳಿಗೆ ತಲುಪಿಸಿ ಶೀಘ್ರದಲ್ಲೇ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಮಾನ್ಯ ಉಪ ವಿಭಾಗಾಧಿಕಾರಿಗಳು ತಿಳಿಸಿದ್ದಾರೆ.