ಪ್ರವಾಸಿತಾಣ ಮಾಂದಲಪಟ್ಟಿಗೆ 60 ಲಕ್ಷ ರೂ ವೆಚ್ಚದಲ್ಲಿ ಸುಸಜ್ಜಿತ ರಸ್ತೆ;ಶಾಸಕ ಡಾ ಮಂತರ್ ಗೌಡ ನಿರ್ದೇಶನದ ಮೇರೆಗೆ ರಸ್ತೆ ನಿರ್ಮಾಣ
admincoorgdaily

ಮಡಿಕೇರಿ:ರಾಜ್ಯದ ಅತ್ಯಂತ ಪ್ರಸಿದ್ದ ಮತ್ತು ಸುಂದರ ಪ್ರವಾಸಿ ತಾಣಗಳಲ್ಲಿ ಒಂದಾದ ಮಡಿಕೇರಿಯ ಮಾಂದಲಪಟ್ಟಿ(ಮುಗಿಲು ಪೇಟೆ) ಗಿರಿಧಾಮಕ್ಕೆ ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ ಮಂತರ್ ಗೌಡ ರವರ ನಿರ್ದೇಶನದ ಮೇರೆಗೆನಿರ್ಮಿಸಲಾದ 60 ಲಕ್ಷ ರೂ ವೆಚ್ಚದ 4 ಕಿ.ಮೀ ರಸ್ತೆಯನ್ನು ಹೊದ್ದೂರು ಪಂಚಾಯತ್ ಮಾಜಿ ಅಧ್ಯಕ್ಷರು ಹಾಗೂ ಮಡಿಕೇರಿ ಬ್ಲಾಕ್ ಅಧ್ಯಕ್ಷರಾದ ಹೆಚ್.ಎ.ಹಂಸ ರವರು ಸ್ಥಳೀಯ ಮುಖಂಡರೊಂದಿಗೆ ಡಾ.ಮಂತರ್ ಗೌಡ ರವರ ಅನುಪಸ್ಥಿತಿಯಲ್ಲಿ ಉದ್ಘಾಟನೆ ಮಾಡಿದರು.
ಸ್ಥಳೀಯ ನಿವಾಸಿಗಳು ,ಗ್ರಾಮಸ್ಥರು ಹಾಗೂ ಬಾಡಿಗೆ ಜೀಪ್ ಮಾಲಿಕ ಕೋರಿಕೆ ಮೇರೆಗೆ ಶಾಸಕರು ಈ ರಸ್ತೆಯನ್ನು ನಿರ್ಮಾಣ ಮಾಡಲು ಅವಕಾಶ ಮಾಡಿದ್ದು ನಿಯಮ ಬಾಹಿರ ಚಟುವಟಿಕೆಗಳು ಪ್ರವಾಸಿ ತಾಣದಲ್ಲಿ ನಡೆಯದಂತೆ ಎಚ್ಚರವಹಿಸಬೇಕು ಎಂದು ಸ್ಥಳಿಯರಿಗೆ ಹಂಸ ರವರು ಮನವಿ ಮಾಡಿದರು.
ಕಾಲೂರು ಗ್ರಾಮಕ್ಕೆ ಬಸ್ ಬರುವ ರಸ್ತೆ ಹದಗೆಟ್ಟಿದ್ದು ತಕ್ಷಣಕ್ಕೆ ತಾತ್ಕಾಲಿಕ ದುರಸ್ತಿ ಕಾರ್ಯಕ್ಕೆ ಡಾ ಮಂತರ್ ಗೌಡ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಮಾಹಿತಿ ನೀಡಿದರು.
ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷರಾದ ತೆನ್ನಿರ ಮೈನಾರವರು ಪ್ರಾಸ್ತವಿಕವಾಗಿ ಮಾತನಾಡಿಜಿಲ್ಲೆಯ ಪ್ರಸಿದ್ದ ಪ್ರವಾಸಿ ತಾಣಕ್ಕೆ ಬಾಡಿಗೆ ಜೀಪ್ ಚಾಲನೆ ಮಾಡಿ ಬದುಕು ಕಟ್ಟಿಕೊಂಡಿರುವ ನೂರಾರು ಕುಟುಂಬಗಳ ಹಿತ ದೃಷ್ಟಿಯಿಂದ ಮತ್ತು ಪ್ರವಾಸೋದ್ಯಮಕ್ಕೆ ಪೂರಕ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಶಾಸಕರಾದ ಡಾ ಮಂತರ್ ಗೌಡ ರವರು ಕೊಡಗು ಫಾರೆಸ್ಟ್ ಫೌಂಡೇಶನ್ ನಿಧಿಯಿಂದ 50 ಲಕ್ಷ ರೂ ರಾಜ್ಯ ಸರ್ಕಾರದ ವನ್ಯಜೀವಿ ವಿಭಾಗದ ಅನುದಾನದಲ್ಲಿ 10 ಲಕ್ಷ ರೂಗಳು ಸೇರಿದಂತೆ ಒಟ್ಟು 60 ಲಕ್ಷ ರೂಗಳನ್ನು ಒದಗಿಸಿದ ಮೇರೆಗೆ ಇಲಾಖೆ 4 ತಿಂಗಳುಗಳ ಕಾಲ ಕಾಮಗಾರಿ ನಡೆಸಿ ಈಗ ಲೋಕಾರ್ಪಣೆ ಮಾಡಲಾಗಿದೆ ಎಂದು ವಿವರಣೆ ನೀಡಿದರು.ಹದಿನೈದು ದಿನಗಳಲ್ಲಿ ಶಾಸಕರು ಕಾಲೂರು ಗ್ರಾಮಕ್ಕೆ ಬಂದು ಗ್ರಾಮಸ್ಥರೊಂದಿಗೆ ಸಭೆ ನಡೆಸಲಿದ್ದಾರೆ ಎಂದು ತಿಳಿಸಿದರು.
ಮಡಿಕೇರಿ ವಿಭಾಗದ ವಲಯ ಅರಣ್ಯ ಅಧಿಕಾರಿ ( RFO)ಹೆಚ್.ಎಸ್.ಶಿವಕುಮಾರ್, ಉಪ ವಲಯ ಅರಣ್ಯಾಧಿಕಾರಿ ಭರತ್ ಎಂ.ಕೆ.ಮುಖಂಡರಾದ ಕೊಂಬಾರನ ಗಣಪತಿ,ಜಾನ್ಸನ್ ಪಿಂಟೋ,ವಕೀಲ ರೋಷನ್ ಗಣಪತಿ,ಕವನ್ ಕೊತ್ತೋಳಿ,ಅರ್ಜುನ್,ಶರಣ್,ಸ್ಥಳೀಯ ಮುಖಂಡರಾದ ಸಿದ್ದಂಡ ಪವನ್,ಚಂಡಿರ ರಾಜ,ಚೆನ್ನಪಂಡ ನರೆನ್ ಸೋಮಯ್ಯ,ನಂದಿರ ಹರಿ,ಚೆನ್ನಪಂಡ ಗಿರೀಶ್, ಚೆನ್ನಪಂಡ ನಂದ,ಚೆನ್ನಪಂಡ ಗೋವಿಂದ,ತಂಬುಕುತ್ತಿರ ರಮೇಶ್,ವಿಜು,ಕುಂಞಣ್ಣಿಅರಣ್ಯ ಇಲಾಖೆ ಸಿಬ್ಬಂದಿಗಳಾದ ಚೇತನ್,ಹನುಮಂತ ರಾಯಪ್ಪ ಸೇರಿದಂತೆ ಗ್ರಾಮಸ್ಥರು, ಪ್ರವಾಸಿಗರು ಉಪಸ್ಥಿತರಿದ್ದರು.