ಎ.ಕೆ. ಸುಬ್ಬಯ್ಯ - ಪೊನ್ನಮ್ಮ ದತ್ತಿನಿಧಿ: ಕೊಡಗಿನ ವಿದ್ಯಾರ್ಥಿನಿಯರಿಂದ ಅರ್ಜಿ ಆಹ್ವಾನ
ಮಡಿಕೇರಿ: ಆರ್ಥಿಕವಾಗಿ ಹಿಂದುಳಿದ ಕೊಡಗು ಜಿಲ್ಲೆಯ ವಿದ್ಯಾರ್ಥಿನಿಯರಿಗೆ ಪದವಿ ಶಿಕ್ಷಣಕ್ಕಾಗಿ ವಿದ್ಯಾರ್ಥಿವೇತನ ನೀಡಲು ಎ.ಕೆ. ಸುಬ್ಬಯ್ಯ - ಪೊನ್ನಮ್ಮ ಶೈಕ್ಷಣಿಕ ದತ್ತಿನಿಧಿಯಿಂದ ಅರ್ಜಿ ಆಹ್ವಾನಿಸಲಾಗಿದೆ.
ದತ್ತಿನಿಧಿಯ ವ್ಯವಸ್ಥಾಪಕ ಟ್ರಸ್ಟಿ ಹಾಗೂ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಅವರ ಸಹಕಾರದಲ್ಲಿ ಕಳೆದ 5 ವರ್ಷಗಳಿಂದ ಈ ವಿದ್ಯಾರ್ಥಿವೇತನ ನೀಡಲಾಗುತ್ತಿದೆ. ಪದವಿಪೂರ್ವ ಕಾಲೇಜಿನಲ್ಲಿ ಉತ್ತಮ ಅಂಕಗಳಿಸಿ, ಆರ್ಥಿಕವಾಗಿ ಹಿಂದುಳಿದು ಕೊಡಗಿನಲ್ಲಿಯೇ ಪದವಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿನಿಯರಿಗೆ ಪ್ರತಿ ವರ್ಷ ರೂ. 10,000 ವಿದ್ಯಾರ್ಥಿವೇತನ ನೀಡಲಾಗುತ್ತದೆ.
2021ರಿಂದ ಇದುವರೆಗೆ ಒಟ್ಟು 159 ವಿದ್ಯಾರ್ಥಿನಿಯರು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ. ಈ ಬಾರಿಯೂ ಕೊಡಗು ಜಿಲ್ಲೆಯಲ್ಲಿ ಮೊದಲ ವರ್ಷದ ಪದವಿ ಶಿಕ್ಷಣ ಓದುತ್ತಿರುವ ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸಬಹುದು. http://evidhya.com ವತಿಯಿಂದಲೂ ಈ ವಿದ್ಯಾರ್ಥಿವೇತನಕ್ಕೆ ಸಹಕಾರ ನೀಡಲಾಗುತ್ತಿದೆ.
ಸಲ್ಲಿಸಬೇಕಾದ ದಾಖಲೆಗಳು: 1. ವಿದ್ಯಾರ್ಥಿವೇತನ ಕೋರಿ ಲಿಖಿತ ಅರ್ಜಿ - ವಿದ್ಯಾರ್ಥಿನಿಯ ಹೆಸರು, ಪೋಷಕರ ಹೆಸರು, ವಿಳಾಸ, ಫೋನ್ ಸಂಖ್ಯೆ, ದಾಖಲಾಗಿರುವ ಕಾಲೇಜಿನ ಹೆಸರು, ಪ್ರವೇಶ ಶುಲ್ಕ ರಸೀದಿ 2. ಪೋಷಕರ ಆದಾಯ ದೃಢೀಕರಣ ಪತ್ರ 3. ದ್ವಿತೀಯ ಪಿ.ಯು.ಸಿ ಅಂಕಪಟ್ಟಿ 4. http://evidhya.com ನಲ್ಲಿ ಆ್ಯಪ್ಟಿಟ್ಯೂಡ್ ಟೆಸ್ಟ್ ತೆಗೆದುಕೊಂಡ ಫಲಿತಾಂಶ 5. "ಭವಿಷ್ಯದಲ್ಲಿ ಕೊಡಗಿಗೆ ನನ್ನ ಕೊಡುಗೆ" ವಿಷಯದ 150 ಪದಗಳ ಸಂಕ್ಷಿಪ್ತ ಲೇಖನ
ಅರ್ಜಿ ಸಲ್ಲಿಸುವ ವಿಧಾನ: ಅರ್ಜಿ ಹಾಗೂ ದಾಖಲೆಗಳನ್ನು shakthidaily@gmail.com ಗೆ ಇ-ಮೇಲ್ ಮೂಲಕ ಅಥವಾ ಆಡಳಿತಾಧಿಕಾರಿ, ಶಕ್ತಿ ದಿನಪತ್ರಿಕೆ, ಕೈಗಾರಿಕಾ ಬಡಾವಣೆ, ಮಡಿಕೇರಿ-571201 ವಿಳಾಸಕ್ಕೆ ಅಂಚೆ ಮೂಲಕ ಕಳುಹಿಸಬೇಕು. ಆಯ್ದ ವಿದ್ಯಾರ್ಥಿನಿಯರಿಗೆ ಕರೆ ಮಾಡಿ ಮಾಹಿತಿ ನೀಡಲಾಗುವುದು.
ಶಕ್ತಿ ಪತ್ರಿಕೆ ರಾಜಕೀಯ, ಧರ್ಮ, ಜಾತಿ ರಹಿತವಾಗಿ ಅರ್ಹ ವಿದ್ಯಾರ್ಥಿನಿಯರನ್ನು ಆಯ್ಕೆ ಮಾಡಲಿದೆ.
ಕೊನೆಯ ದಿನ ಜುಲೈ 25.
ವಿವರ: shakthidaily@gmail.com" ಯಾರು ಅರ್ಜಿ ಸಲ್ಲಿಸಬಹುದು? 1. ಕೊಡಗು ಜಿಲ್ಲೆಯ ವಿದ್ಯಾರ್ಥಿನಿಯರು 2. 2ನೇ ಪಿ.ಯು.ಸಿ ಉತ್ತಮ ಅಂಕ 3. ಆರ್ಥಿಕವಾಗಿ ಹಿಂದುಳಿದ ಕುಟುಂಬ 4. ಕೊಡಗಿನಲ್ಲಿಯೇ 1ನೇ ವರ್ಷ ಪದವಿ ಓದುತ್ತಿರುವವರು

