ಶನಿವಾರಸಂತೆ ಎಪಿಸಿಎಂಎಸ್ ಗೆ 21.32 ಲಕ್ಷ ನಿವ್ವಳ ಲಾಭ
ಶನಿವಾರಸಂತೆ:-ಸಂಘದ ಸದಸ್ಯರ ಸಹಕಾರ ಮತ್ತು ಸಂಘದ ಸಿಬ್ಬಂದಿಗಳ ಉತ್ತಮ ಕಾರ್ಯನಿರ್ವಹಣೆಯಿಂದ ಸಂಘವು ಅಭಿವೃದ್ದಿ ಹೊಂದಲು ಸಹಕಾರಿಯಾಗುತ್ತದೆ ಎಂದು ಶನಿವಾರಸಂತೆ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಡಿ.ಬಿ.ಧರ್ಮಪ್ಪ ಅಭಿಪ್ರಾಯ ಪಟ್ಟರು. ಅವರು ಸ್ಥಳೀಯ ಭಾರತಿ ವಿದ್ಯಾಸಂಸ್ಥೆ ಸಭಾಂಗಣದಲ್ಲಿ ನಡೆದ ಸಂಘದ 2024-25ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಮ್ಮ ಸಂಘವು ಪ್ರಸಕ್ತ ಸಾಲಿನಲ್ಲಿ 21 ಲಕ್ಷದ 32 ಸಾವಿರಗಳಷ್ಟು ನಿವ್ವಳ ಲಾಭಗಳಿಸಿದೆ. ಸಂಘದ ಸದಸ್ಯರ ಸಹಕಾರ ಮತ್ತು ಸಂಘದ ಸಿಬ್ಬಂದಿ, ನೌಕರರ ಉತ್ತಮ ಕಾರ್ಯನಿರ್ವಣೆಯಿಂದ ಲಾಭಗಳಿಸಲು ಸಾಧ್ಯವಾಗಿದೆ. ಈ ನಿಟ್ಟಿನಲ್ಲಿ ಸಹಕಾರಿಗಳು ಇದೆ ರೀತಿ ಸಹಕಾರ ನೀಡಿದರೆ ಮುಂದಿನ ಸಾಲಿನಲ್ಲಿ ಮತ್ತಷ್ಟು ಸಂಘಕ್ಕೆ ಮತ್ತಷ್ಟು ಲಾಭ ತಂದುಕೊಡಲು ಪ್ರಯತ್ನಿಸಲಾಗುವುದು ಮತ್ತು ಸಂಘದ ಮೂಲಕ ರೈತರಿಗೆ ಉಪಯೋಗುವಂತಹ ಸೇವೆ ನೀಡಲಾಗುವುದು ಈ ನಿಟ್ಟಿನಲ್ಲಿ ಸಹಕಾರಿಗಳು ನಮ್ಮ ಸಂಘದಲ್ಲಿ ವ್ಯಾಪಾರ ವ್ಯವಹಾರ ನಡೆಸುವ ಮೂಲಕ ಸಂಘದ ಪ್ರಗತಿಗೆ ಸಹಕರಿಸುವಂತೆ ಮನವಿ ಮಾಡಿದರು.
ಸಂಘದ ಆಡಳಿತ ಮಂಡಳಿ ನಿರ್ದೇಶಕ ಮತ್ತು ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಎಸ್.ಸಿ.ಶರತ್‌ಶೇಖರ್ ಮಾತನಾಡಿ,ಸಹಕಾರಿ ಸಂಘ-ಸಂಸ್ಥೆಗಳು ರೈತರಿಗೆ ಉಪಯೋಗವಾಗುವ ರೀತಿಯಲ್ಲಿ ಸಾಲ ಸೌಲಭ್ಯಗಳನ್ನು ನೀಡುತ್ತಿದ್ದು ಈ ನಿಟ್ಟಿನಲ್ಲಿ ಸಹಕಾರಿಗಳು ಸಂಘದ ಬೆಳವಣಿಗೆಗೆ ಸಹಕರಿಸುವಂತೆ ಮನವಿ ಮಾಡಿದರು.
ಮಹಾಸಭೆಯಲ್ಲಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್.ಪಿ.ಶಿವರಾಜು ವಾರ್ಷಿವರದಿ ಮತ್ತು ಲೆಕ್ಕಪರಿಶೋಧ ವರದಿ ಮಂಡಿಸುತ್ತಾ-ಸಂಘದಲ್ಲಿ 609 ಜನ ಸದಸ್ಯರಿದ್ದು ಈ ಮೂಲಕ ಸಂಘವು 2024-25ನೇ ಸಾಲಿಗೆ ಅನ್ವಯವಾಗುವಂತೆ ಶೇ9 ರಷ್ಟು ಪ್ರಗತಿ ಹೊಂದಿದೆ ಎಂದು ಹೇಳಿದ ಅವರು ಸಂಘವು 2024-25ನೇ ಸಾಲಿನಲ್ಲಿ ಗೊಬ್ಬರ, ಕ್ರಿಮಿನಾಶಕ ಮಾರಾಟ, ಹತ್ತಾರು ಮಾರಟ ಸೇರಿದಂತೆ ವಿವಿಧ ವ್ಯಪಾರ ವ್ಯವಹಾರ ಮೂಲಕ 9 ಕೋಟಿ 53 ಲಕ್ಷದ 86 ಸಾವಿರದ 118 ರೂಗಳಷ್ಟು ವ್ಯಾಪಾರ ವಹಿವಾಟು ನಡೆಸಿ ಈ ಮೂಲಕ ಸಂಘವು 2024-25ನೇ ಸಾಲಿನಲ್ಲಿ 21 ಲಕ್ಷದ 32 ಸಾವಿರದ 50 ರೂಗಳಷ್ಟು ನಿವ್ವಳ ಲಾಭಗಳಿಸಿದೆ ಎಂದು ಅವರದಿಯಲ್ಲಿ ವರದಿಯಲ್ಲಿ ಮಂಡಿಸಿದರು.
ಮಹಾಸಭೆಯಲ್ಲಿ ಸಹಕಾರಿಗಳಾದ ಸುಬ್ಬಪ್ಪ, ಎಸ್.ಎಂ.ಉಮಾಶಂಕರ್, ಮೋಹನ್ ಮುಂತಾದವರು ಸಂಘದ ಬೆಳವಣಿಗೆ ಕುರಿತು ಸಲಹೆ ನೀಡಿದರು. ಮಹಾಸಭೆಯಲ್ಲಿ ಸಂಘದ ಉಪಾಧ್ಯಕ್ಷ ಕುಮಾರ್ ನಾಯಕ್, ನಿರ್ದೇಶಕರಾದ ಜಿ.ಜಿ.ಪರಮೇಶ್, ಎಚ್.ವಿ.ಮಹಾಂತಪ್ಪ, ದೀಪಕ್, ಮಂಜುನಾಥ್, ಗಿರಿಜಾ ಕರುಣಾಕರ್, ದೇವಾಂಬಿಕ ಮಹೇಶ್, ಜಿ.ಬಿ.ಪರಮೇಶ್, ರಾಮಯ್ಯ, ಸಾಗರ್, ಸಂಘದ ಸಿಬ್ಬಂದಿ ಹಾಜರಿದ್ದರು. ಈ ಸಂದರ್ಭ ಹತ್ತನೇ ತರಗತಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆದ ಸಂಘದ ಸದಸ್ಯರ ಮಕ್ಕಳನ್ನು ಸಂಘದ ವತಿಯಿಂದ ಪ್ರೋತ್ಸಾಹಿಸಲಾಯಿತು.