ಆಕಸ್ಮಿಕ‌ ಬೆಂಕಿ: ಕಾರು ಬೆಂಕಿಗಾಹುತಿ

ಆಕಸ್ಮಿಕ‌ ಬೆಂಕಿ: ಕಾರು ಬೆಂಕಿಗಾಹುತಿ

ಕುಶಾಲನಗರ, ನ 02: ಮನೆ ಮುಂದೆ ನಿಲ್ಲಿಸಿದ ಕಾರಿಗೆ ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣವಾಗಿ ಸುಟ್ಟು ಕರಕಲಾದ ಘಟನೆ ಕುಶಾಲನಗರದ ಗೊಂದಿಬಸವನಹಳ್ಳಿಯಲ್ಲಿ ನಡೆದಿದೆ. ರಕ್ಷಿತ್ ಎಂಬವರಿಗೆ ಸೇರಿದ ರಿಟ್ಜ್ ಕಾರು ಸಂಪೂರ್ಣ ಬೆಂಕಿಗಾಹುತಿಯಾಗಿದೆ. ವಿಚಾರ ತಿಳಿದ ಕುಶಾಲನಗರ ಅಗ್ನಿಶಾಮಕ ದಳದವರು ಬೆಂಕಿ‌ ನಂದಿಸಿ‌ ಹೆಚ್ಚಿನ‌ ಅನಾಹುತ ತಪ್ಪಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳದ ಕಾರ್ಯಚಾರಣೆಯಲ್ಲಿ ಲತೇಶ್ ಕುಮಾರ್, ಪ್ರೇಮಾನಂದ ಸಂದೀಪ್, ಶಿವಾನಂದ,ಆನಂದ್ ಪ್ರವೀಣ್ ಇದ್ದರು.