ಕುಶಾಲನಗರದಲ್ಲಿ ಕಾರು ಇಂಜಿನ್‌ಗೆ ಆಕಸ್ಮಿಕ ಬೆಂಕಿ

Jul 4, 2026 - 14:35
 0  515
ಕುಶಾಲನಗರದಲ್ಲಿ ಕಾರು ಇಂಜಿನ್‌ಗೆ ಆಕಸ್ಮಿಕ ಬೆಂಕಿ

ಕುಶಾಲನಗರ: ಮೈಸೂರಿನಿಂದ ಕುಶಾಲನಗರಕ್ಕೆ ಬರುತ್ತಿದ್ದ ಕಾರಿನ ಇಂಜಿನ್ ಭಾಗದಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ಶನಿವಾರ ನಡೆದಿದೆ.

ಕುಶಾಲನಗರದ ಖಾಸಗಿ ಆಸ್ಪತ್ರೆಯಲ್ಲಿ ಕಾರ್ಡಿಯಾಲಜಿಸ್ಟ್ ವಿಭಾಗದ ವಿಸಿಟಿಂಗ್ ವೈದ್ಯರಾದ ಡಾ. ಹರ್ಷ ಅವರ ಕಾರು ಇದಾಗಿದೆ. ಮುಂಜಾನೆ ಮೈಸೂರಿನಿಂದ ಬರುತ್ತಿದ್ದ ವೇಳೆ ಕೊಪ್ಪ ಸಮೀಪ ಬಾನೆಟ್‌ನಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ಡಾ. ಹರ್ಷ ಅವರು ಕಾರನ್ನು ನಿಲ್ಲಿಸಿ ಕೆಳಗಿಳಿದಿದ್ದಾರೆ.

ನಂತರ ಕಾರು ಚಲಾಯಿಸಿಕೊಂಡು ಕುಶಾಲನಗರದ ಮುಖ್ಯ ವೃತ್ತದ ಬಳಿ ಬರುವಷ್ಟರಲ್ಲಿ ಇಂಜಿನ್‌ನಿಂದ ಬೆಂಕಿ ಹೊತ್ತಿಕೊಂಡಿದೆ. ಸ್ಥಳೀಯರ ಸಹಾಯದಿಂದ ಬೆಂಕಿಯನ್ನು ನಂದಿಸಲಾಯಿತು. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಅಥವಾ ಗಾಯಗಳಾಗಿಲ್ಲ. ಕಾರಿನ ಇಂಜಿನ್ ಭಾಗ ಮಾತ್ರ ಸುಟ್ಟು ಹಾನಿಯಾಗಿದೆ ಎಂದು ತಿಳಿದುಬಂದಿದೆ.

What's Your Reaction?

Like Like 0
Dislike Dislike 0
Love Love 1
Funny Funny 0
Angry Angry 0
Sad Sad 0
Wow Wow 0