ಕ್ರೀಡೆಗೆ ಸದೃಢ ಆರೋಗ್ಯ ಮುಖ್ಯ: ಸಮಾಜ ಸೇವಕಿ ಕಾಣತಂಡ ಬೀನಾ ಜಗದೀಶ್
ವಿರಾಜಪೇಟೆ:ಕ್ರೀಡಾಪಟುಗಳು ಭಾಗವಹಿಸುವ ಯಾವುದೇ ಕ್ರೀಡೆಗಳಲ್ಲಿ ಸದೃಢತೆ, ಸಂಯಮ, ಶಿಸ್ತು ಮತ್ತು ಬದ್ಧತೆ ಅಳವಡಿಸಿಕೊಂಡಲ್ಲಿ ಮಾತ್ರ ಗುರಿ ಸಾಧಿಸಲು ಸಾಧ್ಯ ಎಂದು ಸಮಾಜ ಸೇವಕಿ ಕಾಣತಂಡ ಬೀನಾ ಜಗದೀಶ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಕೂರ್ಗ್ ಪುಟ್ಬಾಲ್ ಮಾಸ್ಟರ್ಸ್ ಕಪ್ ವಿರಾಜಪೇಟೆ ವತಿಯಿಂದ ಸಂಸ್ಥೆಯ ಎರಡನೇ ವರ್ಷದ ನಿಗದಿತ ತಂಡಗಳ ನಡುವಿಣ 50 ವರ್ಷ ವಯೋಮಾನದ ಮೇಲ್ಪಟ್ಟವರ , 5+2 ಹೊನಲು ಬಳಕಿನ ಕಾಲ್ಚೆಂಡು ಪಂದ್ಯಾವಾಳಿ ನಗರದ ತಾಲೂಕು ಮೈದಾನದಲ್ಲಿ ನಡೆಯಿತು.
ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಸಮಾಜ ಸೇವಕಿ ಬೀನಾ ಜಗದೀಶ್ ಅವರು, ಭಾಗವಹಿಸುವ ಎಲ್ಲಾ ಕ್ರೀಡೆಗಳಲ್ಲಿ ವಯಸ್ಸಿನ ಮಿತಿಯಿದೆ.ಆದರೆ ನಿವೃತ್ತಿ ಎಂಬುದು ಇಲ್ಲ. ಇಲ್ಲಿ ಆರೋಗ್ಯದಾಯಕ ಸದೃಢತೆಯ ದೇಹಸಿರಿಯನ್ನು ಕ್ರೀಡೆಯ ಮೂಲಕ ಪ್ರದರ್ಶನ ಮಾಡುವುದಾಗಿದೆ. ಇಂತಹ ಕ್ರೀಡೆಗಳ ಅಯೋಜನೆಯಿಂದಾಗಿ ಬಾಲ್ಯ ಮತ್ತು ಯೌವನದಲ್ಲಿ ಕಲಿತ ಕ್ರೀಡೆ ಮುಪ್ಪಿನಲ್ಲಿಯು ಪ್ರದರ್ಶನದ ಮೂಲಕ ಕಾಣಬಹುದಾಗಿದೆ.
ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಆರೋಗ್ಯದ ಸಮಸ್ಯೆಯಿರಲಾಗದು ಮುಂದೆಯು ಕಾಲ್ಚೆಂಡು ಪಂದ್ಯಾಟವು ಮುಂದುವರೆಯಬೇಕು ಅಭಿಪ್ರಾಯ ವ್ಯಕ್ತಪಡಿಸಿದರು.
ನಿವೃತ್ತ ಕಸ್ಟಂಸ್ಸ್ ಅಧಿಕಾರಿ ಕೆ.ಬಿ. ಲಿಂಗರಾಜು ಮಾತನಾಡಿ, ಕ್ರೀಡೆಯಿಂದ ಮಾತ್ರ ಪರಸ್ಪರ ಸ್ನೇಹಮಿಲನ ಸಾಧ್ಯ.ಯೌವ್ವನದಲ್ಲಿ ಚಿರ ಯುವಕರಾಗಿ ಪ್ರತಿಯೊಂದು ಆಟದಲ್ಲಿ ಭಾಗಿಗಳಾಗುತ್ತೇವೆ.ಆದರೆ ಗುರಿಸಾಧಿಸಲು ಒಂದನ್ನು ಆಯ್ಕೆಗೊಳಿಸುತ್ತೇವೆ. ಆಯ್ಕೆ ಮಾಡಿಕೊಂಡ ಕ್ರೀಡೆಯಲ್ಲಿ ಪರಿಣಿತಿಹೊಂದಬೇಕು ಮತ್ತು ಸಾಧಕರಾಗಬೇಕು 50+ ಕಾಲ್ಚೆಂಡು ಪಂದ್ಯಾಟವು ಮುಂದುವರೆಯಬೇಕು. ಆಯೋಜಕರು ಹೊಸ, ಹೊಸ ಪ್ರಯತ್ನಕ್ಕೆ ಮುಂದಾಗಬೇಕು ಎಂದು ಹೇಳಿದರು.
ಉದ್ಯಮಿ ಸಿ.ಎ.ನಾಸಿರ್, ಹಿಂದೂ ಮಲಯಾಳಿ ಅಸೋಸಿಯೇಷನ್ ಅಧ್ಯಕ್ಷರಾದ ವಿನೂಪ್ ಎ. ಶ್ರೀ ಮುತ್ತಪ್ಪ ಮಲಯಾಳಿ ಸಮಾಜ ಅದ್ಯಕ್ಷರಾದ ಸುಮೇಶ್, ಅನೀಲ್ ಸಿನಪ್ಪ ಅವರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಕೂರ್ಗ್ ಪುಟ್ಬಾಲ್ ಮಾಸ್ಟರ್ಸ್ ಕಪ್ ಆಯೋಜಕ ಸಂಸ್ಥೆಯ ಅಧ್ಯಕ್ಷರಾದ ಎಲ್.ಜಿ. ಭಾಸ್ಕರ್ ಅವರು ಕಾರ್ಯಕ್ರಮದ ಅದ್ಯಕ್ಷತೆ ವಹಿಸಿ ಮಾತನಾಡಿ, ಸತತ ಎರಡು ವರ್ಷಗಳಿಂದ 50 ವರ್ಷ ಮೇಲ್ಪಟ್ಟ ನಗರ ಮತ್ತು 5 ಕಿ.ಮಿ ವ್ಯಾಪ್ತಿಯ ಗ್ರಾಮಾಂತರ ಪ್ರದೇಶಗಳ ಕ್ರೀಡಾ ಪಟುಗಳಿಗೆ ಕಾಲ್ಚೆಂಡು ಪಂದ್ಯಾಟ ಅಯೋಜಿಸಿಕೊಂಡು ಬರಲಾಗುತಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಮುಂದೆ ತಾಲೂಕು ಮಟ್ಟದ ಕಾಲ್ಚೆಂಡು ಪಂದ್ಯಾಟವನ್ನು ಆಯೋಜಿಸಲು ಪ್ರೇರೆಪಿತರಾಗಿದ್ದು. ಆಯೋಜಕ ಸಂಸ್ಥೆಯ ಸದಸ್ಯರೊಂದಿಗೆ ಚರ್ಚಿಸಿ ನಿರ್ಧರಿಸಲಾಗುವುದು. ಪಂದ್ಯಾಟಕ್ಕೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕರಿಸಿದ ದಾನಿಗಳಿಗೆ ಅಯೋಜಕ ಸಂಸ್ಥೆಯ ಪರವಾಗಿ ಧನ್ಯವಾದ ಸಲ್ಲಿಸಿದರು.
ವರದಿ:ಕಿಶೋರ್ ಕುಮಾರ್ ಶೆಟ್ಟಿ