Kodagu

ಅಖಿಲ ಕೊಡವ ಸಮಾಜದ ವತಿಯಿಂದ ಶಾಸಕ ಎಎಸ್ ಪೊನ್ನಣ್ಣ ಅವರಿಗೆ ಸನ್ಮಾನ

admincoorgdaily

ಅಖಿಲ ಕೊಡವ ಸಮಾಜದ ವತಿಯಿಂದ ಶಾಸಕ ಎಎಸ್ ಪೊನ್ನಣ್ಣ ಅವರಿಗೆ ಸನ್ಮಾನ

ವಿರಾಜಪೇಟೆ; ಅಖಿಲ ಕೊಡವ ಸಮಾಜದ ನೂತನ ಕಾರ್ಯಕಾರಿಣಿ ವತಿಯಿಂದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್‌ ಪೊನ್ನಣ್ಣ ಅವರ ನಿವಾಸದ ಕಚೇರಿಯಲ್ಲಿ ಭೇಟಿ ಹಾಗೂ ಶಾಸಕರನ್ನು ಸನ್ಮಾನಿಸಿ ನೆನಪಿನ ಕಾಣಿಕೆ ನೀಡಲಾಯಿತು.

 ಕೊಡವ ಅಭಿವೃದ್ಧಿ ನಿಗಮದ ಸ್ಥಾಪನೆಗೆ ಹಾಗೂ ಅನುಷ್ಠಾನಗೊಳಿಸುವಲ್ಲಿ ಶಾಸಕರ ಪ್ರಯತ್ನ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಲಾಯಿತು.

ಅಖಿಲ ಕೊಡವ ಸಮಾಜದ ಮುಂದಿನ ಕಾರ್ಯಕ್ರಮಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಯಿತು. ಈಸಂದರ್ಭ ಅಖಿಲ ಕೊಡವ ಸಮಾಜದ ಅಧ್ಯಕ್ಷರಾದ ಪರದಂಡ ಸುಬ್ರಮಣಿ ಕಾವೇರಪ್ಪ, ಗೌರವ ಕಾರ್ಯದರ್ಶಿ ಚೊಟ್ಟಂಡ ಪ್ರಭು ಸೋಮಯ್ಯ, ಜಂಟಿ ಕಾರ್ಯದರ್ಶಿಗಳಾದ ಚೇಂದ್ರಿಮಾಡ ಪೃಥ್ವಿ ,ಮನ್ನೇರ ಸರಸ್ವತಿ ರಮೇಶ್‌,ಖಜಾಂಜಿ ಕಾಯಪಂಡ ಸುನೀಲ್‌ ಮತ್ತು ಅಖಿಲ ಕೊಡವ ಸಮಾಜದ ಕಾನೂನು ಸಲಹೆಗಾರದ ಕುಟ್ಟಂಡ ವಿಜಯ್‌ ಉತ್ತಪ್ಪ ಇದ್ದರು.