ಕುಶಾಲನಗರ: ನಿಸರ್ಗಧಾಮ ಟೂರಿಸ್ಟ್ ಸೆಂಟರ್ ವರ್ತಕನ ಮೇಲೆ ಮತಾಂತರ ಆರೋಪ: ಅಂಗಡಿಗೆ ಬೀಗ ಜಡಿದ ಎನ್.ಟಿಸಿ

Jun 17, 2026 - 21:32
Jun 17, 2026 - 21:33
 0  1.9k
ಕುಶಾಲನಗರ: ನಿಸರ್ಗಧಾಮ ಟೂರಿಸ್ಟ್ ಸೆಂಟರ್ ವರ್ತಕನ ಮೇಲೆ ಮತಾಂತರ ಆರೋಪ:  ಅಂಗಡಿಗೆ ಬೀಗ ಜಡಿದ ಎನ್.ಟಿಸಿ
ಅಂಗಡಿಗೆ ಬೀಗ

ಕುಶಾಲನಗರ, ಜೂ 17: ದಿನಾಂಕ 16-06-2026ರಂದು ನಡೆದ ಪ್ರೆಸ್ ಮೀಟ್ ನಲ್ಲಿ ಹಿಂದೂ ಹಿತಾ ರಕ್ಷಣಾ ವೇದಿಕೆಯ ಸದಸ್ಯರು ನಿಸರ್ಗಧಾಮ ಟೂರಿಸ್ಟ್ ಸೆಂಟರ್ (ಎನ್‌ಟಿಸಿ) ಯಲ್ಲಿ ಕೋಮು ಸಾಮರಸ್ಯಕ್ಕೆ ದಕ್ಕೆ ಬರುತ್ತಿರುವ ಬಗ್ಗೆ ವಿಷಯ ಪ್ರಸ್ತಾಪಿಸಿರುವ ಕುರಿತು ಎನ್‌.ಟಿ.ಸಿ ಮಾಲೀಕರ ಸ್ಪಷ್ಟನೆ ನೀಡಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ನಿಸರ್ಗಧಾನ ಟೂರಿಸ್ಟ್ ವಿಲೇಜ್ ಮಾಲೀಕ ಅಬ್ದುಲ್ ಸಲಾಂ ರಾವುತ‌ರ್ ಅವರು, ಕೋಮು ಸಾಮರಸ್ಯಕ್ಕೆ ಧಕ್ಕೆ ಬರುವ ರೀತಿಯಲ್ಲಿ ಮಹಿಳೆ ಹಾಗೂ ಪುತ್ರನನ್ನು ಮತಾಂತರ ಮಾಡಿರುವುದು ಅಕ್ಷಮ್ಯ ಅಪರಾಧವಾಗಿರುತ್ತದೆ. ಈ ತರ ಕೃತ್ಯ ಮಾಡುವವರಿಗೆ ನಿಸರ್ಗಧಾಮ ಟೂರಿಸ್ಟ್ ಸೆಂಟ‌ರ್ (ಎನ್‌ಟಿಸಿ) ವ್ಯಾಪ್ತಿಯಲ್ಲಿ ನಾವು ಬೆಂಬಲಿಸುವುದಿಲ್ಲ. ಅವರ ಮೇಲೆ ಎನ್‌ಟಿಸಿ ವತಿಯಿಂದ ಕ್ರಮ ತೆಗೆದುಕೊಂಡಿದ್ದೇವೆ. ಇದು ಖಂಡನಿಯ ಇದಕ್ಕೆ ಎನ್‌ಟಿಸಿ ಹಾಗೂ ಆರ್‌ಎ ವಸನ ವತಿಯಿಂದ ವಿರೋಧ ವ್ಯಕ್ತಪಡಿಸುತ್ತಿದ್ದೇವೆ.

ಆರೋಪಿ ಸಲೀಂ ಎಂಬುವವನು ಕಳೆದ ಹತ್ತು ವರ್ಷದಿಂದ ಎನ್‌ಟಿಸಿಯಲ್ಲಿ ಬಾಡಿಗೆ ಒಪ್ಪಂದ ಕರಾರು ಪತ್ರದ ಪ್ರಕಾರ ಪಂಚಾಯತ್ ಪರವಾನಿಗೆಯಲ್ಲಿ ತಮ್ಮ ಮಳಿಗೆಯನ್ನು ನಡೆಸುತ್ತಿದ್ದಾರೆ. ಅದೇ ಮಳಿಗೆಯಲ್ಲಿ ಕೆಲಸ ಮಾಡುವ ಮಹಿಳೆಯನ್ನು ಇವನು ಈ ಕೃತ್ಯಕ್ಕೆ ಬಳಸುತ್ತಿರುವುದು ಎನ್‌ಟಿಸಿಯ ಆಡಳಿತ ಮಂಡಳಿಗೆ ತಿಳಿದಿರುವುದಿಲ್ಲ.

ದಿನಾಂಕ 28-03 2026 ರಿಂದ ಈ ಮಹಿಳೆ ಎನ್‌ಟಿಸಿಯ ಯಾವುದೇ ಮಳಿಗೆಗೆ ಬರುತ್ತಿಲ್ಲ ಮತ್ತು ಕೆಲಸ ಮಾಡುತ್ತಿಲ್ಲವೆಂದು ಎನ್‌ಟಿಸಿಯ ಸಿಸಿಟಿವಿ ಮುಖಾಂತರ ವ್ಯಕ್ತವಾಗುತ್ತಿದೆ.

ಇವರು ಈ ಕೃತ್ಯಕ್ಕೆ ಬಳಸಿರುವ ಜಾಗ ಎನ್ ಟಿ ಸಿಯ ಮುಂದೆ ಇರುವ ಒಂದು ಖಾಸಗಿ ರೆಸಾರ್ಟ್ ಆಗಿರುತ್ತದೆ. ಈ ರೆಸಾರ್ಟ್ ನ ಮಾಲಿಕ ಆರೋಪಿ ಸಲೀಂರವರೇ ಆಗಿರುತ್ತಾರೆ. ಆದ ಕಾರಣ ಅಲ್ಲಿ ಮತಾಂತರ ಚಟುವಟಿಕೆಗಳು ನಡೆದಿರುವ ಬಗ್ಗೆ ನನಗೆ ಮಾಹಿತಿ ಲಭ್ಯವಾಗಿರುತ್ತದೆ.

ಎನ್ ಟಿ ಸಿ ಹಾಗೂ ಆರ್ ಎ ವಸನ ವ್ಯಾಪ್ತಿಯಲ್ಲಿ ಇರುವ 70ಕ್ಕೂ ಹೆಚ್ಚು ಪಂಚಾಯತ್ ಪರವಾನಿಗೆ ಇರುವ ಮಳಿಗೆಗಳಲ್ಲಿ ಇವನ ಮಳಿಗೆ ಕೂಡ ಒಂದು.ಆದ ಕಾರಣ ಎನ್ ಟಿ ಸಿ ಹಾಗೂ ಆರ್ ಎ ವಸನದಲ್ಲಿ 400ಕ್ಕೂ ಹೆಚ್ಚು ವರ್ತಕರು ಹಾಗೂ ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದು, ತಮ್ಮ ತಮ್ಮ ಬದುಕು ಕಟ್ಟಿಕೊಂಡಿರುತ್ತಾರೆ.

ಕೆಲವರು ಮಾಡುವ ಇಂಥಹ ಕೃತ್ಯದಿಂದ ಸಮಾಜದ ಸಾಮರಸ್ಯಕ್ಕೆ ಧಕ್ಕೆ ಬಂದಿರುವ ಕಾರಣ ಮಳಿಗೆಯ ಮಾಲೀಕ ಆರೋಪಿ ಸಲೀಂ ಮಳಿಗೆಯನ್ನು ದಿನಾಂಕ 14/06/2026 ರಿಂದ ಮುಚ್ಚಲು ನೋಟಿಸ್‌ ನೀಡಿ ಮಳಿಗೆಯನ್ನು ಮುಚ್ಚಿಸಲಾಗಿದೆ.

ಎನ್‌ಟಿಸಿ ಹಾಗೂ ಆರ್‌ಎ ವಸನದ ವ್ಯಾಪ್ತಿಯಲ್ಲಿ ಮತಾಂತರದ ಚಟುವಟಿಕೆಗಳಿಗೆ ಬೆಂಬಲ ನೀಡುವ ಮಳಿಗೆಗಳನ್ನು ಮುಚ್ಚುವುದು ಹಾಗೂ ಅಂತವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ, ಎನ್‌ಟಿಸಿಗೆ ಅಂತವರ ಪ್ರವೇಶ ನಿಷೇಧಿಸಲಾಗಿದೆ ಎಂದು ಈ ಮೂಲಕ ತಿಳಿಸುತ್ತಿದ್ದೇವೆ.

ದಿನಾಂಕ 16-06-2026 ರಂದು ಎನ್‌ಟಿಸಿಯಲ್ಲಿ ನಡೆದ ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಎನ್‌ಟಿಸಿ ಯ ಮಹಿಳಾ ವರ್ತಕರು ಹಾಗೂ ಮಹಿಳಾ ಸಿಬ್ಬಂದಿಗಳ ಜೊತೆ ಮತಾಂತರ ಚಟುವಟಿಕೆಗಳ ವಿಷಯದಲ್ಲಿ ಸಭೆಯಲ್ಲಿ ಮುಕ್ತವಾಗಿ ಚರ್ಚೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಪೊಲೀಸ ಇಲಾಖೆ ಹಾಗೂ ಎನ್‌ಟಿಸಿ ಎಲ್ಲಾ ಮಳಿಗೆಯ ಮಾಲೀಕರು ಉಪಸ್ಥಿತರಿದ್ದರು. ಇನ್ನು ಮುಂದೆ ಇಂತಹ ಚಟುವಟಿಕೆಗಳಿಗೆ ಕಾನೂನಿನ ಅಡಿಯಲ್ಲಿ ಬರುವ ಶಿಕ್ಷೆಯ ವಿವರಣೆ ಪೊಲೀಸ್ ಇಲಾಖೆಯ ವತಿಯಿಂದ ನೀಡಿರುತ್ತಾರೆ ಹಾಗೂ ಎನ್‌ಟಿಸಿ ಮಾಲೀಕರು ಅಂತಹ ಮಳಿಗೆಗಳನ್ನು ಮುಚ್ಚಿಸುವುದಾಗಿಯೂ ಎಚ್ಚರಿಕೆ ನೀಡಿರುವುದಾಗಿ ಪ್ರಕಟಣೆ ಮೂಲಕ ಸ್ಪಷ್ಟನೆ ನೀಡಿದ್ದಾರೆ.

What's Your Reaction?

Like Like 2
Dislike Dislike 0
Love Love 2
Funny Funny 3
Angry Angry 0
Sad Sad 1
Wow Wow 1