ದಶಮಂಟಪಗಳ ಶೋಭಯಾತ್ರೆ ಫಲಿತಾಂಶವನ್ನು ಪಾರದರ್ಶಕವಾಗಿ ನಡೆಸಲು ಎಲ್ಲಾ ರೀತಿಯ ತಯಾರಿ ಮಾಡಲಾಗಿದೆ: ದಶಮಂಟಪ ಸಮಿತಿ ಗೌರವ ಅಧ್ಯಕ್ಷ ಬಿ.ಎಂ ರಾಜೇಶ್
admincoorgdaily
ಮಡಿಕೇರಿ: ಈ ಬಾರಿ ದಶಮಂಟಪಗಳ ಶೋಭಯಾತ್ರೆ ಫಲಿತಾಂಶವನ್ನು ಪಾರದರ್ಶಕವಾಗಿ ನಡೆಸಲು ಕೋಟೆಗಣಪತಿ ದಸರಾ ದಶಮಂಟಪ ಸಮಿತಿ ಕ್ರಮ ಕೈಗೊಂಡಿದ್ದು, ಅಂಕಗಳನ್ನು ಗೌಪ್ಯವಾಗಿಡಲು ೧೦ ಮಂಟಪಗಳ ಹೆಸರಿರುವ ಮತ್ತು ೧೦ ಲಾಕರ್ ಇರುವ ಪೆಟ್ಟಿಗೆ ಮಾದರಿಯನ್ನು ತಯಾರಿ ಮಾಡಲಾಗಿದೆ ಎಂದು ಕೋಟೆಗಣಪತಿ ದಸರಾ ದಶಮಂಟಪ ಸಮಿತಿ ಗೌರವ ಅಧ್ಯಕ್ಷ ಬಿ.ಎಂ.ರಾಜೇಶ್ ಮಾಹಿತಿ ನೀಡಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸಕ್ತ ಸಾಲಿನಲ್ಲಿ ಕಥಾಸಾರಂಶ ಮತ್ತು ಧ್ವನಿಮುದ್ರಣ ೨೫ ಅಂಕ, ಕಲಾಕೃತಿ ಮತ್ತು ಟ್ರ್ಯಾಕ್ಟರ್ ಸೆಟ್ಟಿಂಗ್ಸ್‌ಗೆ ೨೫ ಅಂಕ, ಪ್ರಭಾವಳಿ ಮತ್ತು ಸ್ಟುಡಿಯೋ ೨೫ ಅಂಕ, ನಿಗದಿತ ಸ್ಥಳ, ಶುಚಿತ್ವ ಮತ್ತು ಸಮಯ ಪಾಲನೆ ೨೫ ಅಂಕ ನಿಗದಿ ಪಡಿಸಲಾಗಿದೆ. ತೀರ್ಪುಗಾರರು ಇರಲಿದ್ದಾರೆ.
ಮಂಪಟಗಳು ಸರಿಯಾದ ಸಮಯಕ್ಕೆ ನಿಗದಿಪಡಿಸಿದ ಸ್ಥಳಕ್ಕೆ ಆಗಮಿಸದೇ ತಡಮಾಡಿದ್ದಲ್ಲಿ ಅಂಕಗಳನ್ನು ಕಡಿತ ಮಾಡಲಾಗುವುದು ಎಂದು ತಿಳಿಸಿದ್ದಾರೆ. ನಮ್ಮ ದೇವಿಯ ಆಚರಣೆಯನ್ನು ಶೋಕಾಚರಣೆಯಿಂದ ಆಚರಣೆ ಮಾಡಲಾಗುವುದಿಲ್ಲ. ಮತ್ತು ಮಾಡುವುದಿಲ್ಲ. ಪೊಲೀಸ್ ಇಲಾಖೆಗಳ ನಿಯಮವನ್ನು ಪಾಲಿಸಲಾಗುವುದು.
ಆದರೆ, ಇಲಾಖೆಗಳು ಇಲ್ಲದ ಒತ್ತಡ ಹೇರದೇ ಅದ್ಧೂರಿ ಆಚರಣೆಗೆ ಕೈಜೋಡಿಸುಬೇಕು ಎಂದರು. ಸುದ್ದಿಗೋಷ್ಠಿಯಲ್ಲಿ ಕೋಟೆಗಣಪತಿ ದಸರಾ ದಶಮಂಟಪ ಸಮಿತಿ ಅಧ್ಯಕ್ಷ ಹರೀಶ್ ಅಣ್ವೇಕರ್, ಕಾರ್ಯದರ್ಶಿ ರಂಜಿತ್, ಪ್ರಧಾನ ಕಾರ್ಯದರ್ಶಿ ಸತೀಶ್, ಸದಸ್ಯರಾದ ಪುನಿತ್ ಉಪಸ್ಥಿತರಿದ್ದರು.