ಅಮ್ಮತ್ತಿ: ಎನ್.ಎಸ್.ಎಸ್ ವಾರ್ಷಿಕ ಶಿಬಿರ ಸಮಾರೋಪ ಸಮಾರಂಭ ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಿಸಲು ಯುವ ಜನತೆಗೆ ಗಣ್ಯರ ಕರೆ
ವಿರಾಜಪೇಟೆ: ಯುವ ಪ್ರಾಯದಲ್ಲಿ ಆರೋಗ್ಯ ಮತ್ತು ಸಮಾಜಕ್ಕೆ ವಿರೋಧವಾದ ಹವ್ಯಾಸಗಳು ಜೀವನಕ್ಕೆ ಮತ್ತು ಸಮಾಜಕ್ಕೆ ಮಾರಾಕವಾಗಿ ಪರಿಗಣಿಸಬಹುದು. ಹವ್ಯಾಸಕ್ಕೆ ಬಲಿಯಾಗುವ ಮೊದಲೇ ತ್ಯಜಿಸುವ ಹಂತಕ್ಕೆ ಬರುವಂತಾಗಬೇಕು ಎಂದು ಕಾವೇರಿ ವಿದ್ಯಾ ಸಂಸ್ಥೆಗಳ ಗೋಣಿಕೊಪ್ಪಲು ಅಧ್ಯಕ್ಷರು ಮತ್ತು ಅಮ್ಮತ್ತಿ ಪ್ರೌಢಶಾಲೆಯ ನಿರ್ದೇಶಕರಾದ ಮಂಡೇಪಂಡ ಸುಗುಣ ಮುತ್ತಣ್ಣ ಅವರು ಅಭಿಪ್ರಾಯಪಟ್ಟರು.
ಕಾವೇರಿ ಪದವಿ ಪೂರ್ವ ಕಾಲೇಜು ವಿರಾಜಪೇಟೆ ಎನ್.ಎಸ್.ಎಸ್. ಘಟಕ ವತಿಯಿಂದ ವಾರ್ಷಿಕ ಶಿಬಿರದ ಅಂಗವಾಗಿ "ನಶಾ ಮುಕ್ತ ಭಾರತ ಅಭಿಯಾನ" ಶೀರ್ಷಿಕೆ ಅಡಿಯಲ್ಲಿ ಸಮಾರೋಪ ಸಮಾರಂಭ ಸರ್ಕಾರಿ ಪ್ರೌಢಶಾಲೆ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಸುಗುಣ ಮುತ್ತಣ್ಣ ಅವರು, ಪ್ರಸ್ತುತ ಯುವ ಸಮುದಾಯವು ಮಾದಕ ವಸ್ತುಗಳ ದಾಸರಾಗಿ ಜೀವನವನ್ನು ಕೊನೆಯಾಗಿಸುವ ಹಂತಕ್ಕೆ ತಲುಪಿರುವುದು ವಿಷಾದಕರ. ಪತ್ರಿಕೆ ಮತ್ತು ಮಾಧ್ಯಮಗಳಲ್ಲಿ ದೇಶದ ಹಲವು ಭಾಗಗಳಲ್ಲಿ ಮಾದಕ ವಸ್ತುಗಳ ಬಳಕೆಯಿಂದಾಗಿ ಸಾವು, ಕಳ್ಳತನ, ದರೋಡೆ ಹೀಗೆ ಹಲವು ಕೃತ್ಯಗಳಲ್ಲಿ ಭಾಗಿ ಎಂದು ಪ್ರಸಾರ ಮಾಡುತ್ತಿದೆ. ಮಾದಕ ವಸ್ತುಗಳ ಬಳಕೆಯಿಂದಾಗಿ ಆರೋಗ್ಯದ ಮೇಲೆ ದುಷ್ಪಪರಿಣಾಮಗಳ ಬಗ್ಗೆ ಸರ್ಕಾರಗಳು, ಸಾಮಾಜಿಕ ಕಳಕಳಿಯ ಮೂಲಕ ಜಾಹಿರಾತು ಪ್ರಸಾರ ಮಾಡಿದರು ನಿಲ್ಲಿಸಲು ಸಾಧ್ಯವಾಗಗಲಿಲ್ಲ.
ಆದರೆ ಕುಟುಂಬ, ಸಮಾಜ ಮತ್ತು ದೇಶದ ಮೇಲೆ ಅಪರಿಮಿತ ಪ್ರೀತಿ ಹೊಂದಿರುವ ಸರ್ವ ಯುವ ಜನತೆಯು ಮಾದಕ ವಸ್ತುಗಳಗಳ ವಿರುದ್ದ ಹೋರಾಟ ಮಾಡುವಂತಾಗಬೇಕು. ಅಲ್ಲದೆ ನಾಶ ಮುಕ್ತ ಭಾರತದ ಸಂಕಲ್ಪ ನಮ್ಮದಾಗಬೇಕು ಎಂದು ತಮ್ಮ ಭಾಷಣದಲ್ಲಿ ಹೇಳಿದರು.
ಅಮ್ಮತ್ತಿ ಪ್ರೌಢಶಾಲೆಯ ಅಧ್ಯಕ್ಷರಾದ ಕಾವಾಡಿಚಂಡ ಗಣಪತಿ ಅವರು ಮಾತನಾಡಿ, ಸಮಾಜದಲ್ಲಿ ಉತ್ತಮ ನಾಯಕನಾಗಲು ಎನ್.ಎಸ್.ಎಸ್. ಶಿಬಿರಗಳು ಸಹಕಾರಿ. ಉತ್ತಮ ನಾಯಕತ್ವದಿಂದ ಹೊರಹೊಮ್ಮಿದ ವ್ಯಕ್ತಿ ಉತ್ತಮ ಸಮಾಜ ರೂಪಿಸುವ ಸಾಮರ್ಥ್ಯ ಹೊಂದುತ್ತಾನೆ. ಸಮಾಜಕ್ಕೆ ಮಾರಾಕವಾಗುವ ವಿಷಯಗಳಿಗೆ ಕಿವಿಗೊಡದೆ ಆತ್ಮಬಲದಿಂದ ಉತ್ತಮ ಸಾಧನೆ ಮಾಡಲು ಹವ್ಯಾಸ ರೂಡಿಸಿಕೊಳ್ಳಿ ಎಂದು ಹೇಳಿದರು.
ಕಾರ್ಯಕ್ರಮ ಉದ್ದೇಶಿಸಿ ಪಟ್ಟಡ ಧನು ಉತ್ತಯ್ಯ, ಕಾವೇರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಎನ್.ಎಂ. ನಾಣಯ್ಯ, ಐನಂಡ ಪ್ರಕಾಶ್ ಗಣಪತಿ, ಕುಶಾಲಪ್ಪ ಬೊಮ್ಮಂಡ ನಾಚಪ್ಪ, ಮಾಚಿಮಂಡ ನಾಣಯ್ಯ, ಬಲ್ಟಿಕಾಳಂಡ ನಳಿನಿ ಕೇಂಚಂಡ ಅವರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದ ಅದ್ಯಕ್ಷತೆ ವಹಿಸಿ ಮಾತನಾಡಿದ ಅಕ್ಕಮ್ಮ ಅವರು, ಸಾಮಾಜಿಕ ಮೌಲ್ಯಗಳಿಗೆ ಗೌರವ ಸೂಚಿಸಿ, ಗುರು ಭೋಧನೆ, ಪೋಷಕರ ಹಿತನುಡಿಗಳು ಹಿರಿಯರ ಸಾರ್ಥಕ ಬದುಕಿನ ಸಾಧನೆಗಳ ಬಗ್ಗೆ ಯುವ ಸಮೂದಾಯವ ಮನನ ಮಾಡುವುದನ್ನು ಮನದಲ್ಲಿಟ್ಟರೆ ಜೀವನದಲ್ಲಿಉತ್ತಮ ಪರಿಸರ ನಿರ್ಮಾಣ ಮಾಡಬಹುದಾಗಿದೆ ಎಂದು ಹೇಳಿದರು.
ಯೋಜನಾಧಿಕಾರಿಗಳಾದ ಅನುಪಮ ಸಿ.ಪಿ ಅವರು ಶಿಬಿರ ವರದಿ ವಾಚಿಸಿದರು. ಶಿಬಿರಾರ್ಥಿಗಳಿಗೆ ಶಿಬಿರದಲ್ಲಿ ರಂಗೋಲಿ ಸ್ಪರ್ಧೆ, ರಸಪ್ರಶ್ನೆ, ಆಶುಭಾಷಣ ಸ್ಪರ್ಧೆ, ನೃತ್ಯ ಸ್ಪರ್ಧೆ ಏರ್ಪಡಿಸಲಾಗಿತ್ತು, ಸ್ಪರ್ಧಾ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಉಪನ್ಯಾಸಕರಾದ ಸಿ.ಪಿ. ಅನುಪಮ ಅವರು ಸ್ವಾಗತಿಸಿದರು. ವಿದ್ಯಾರ್ಥಿ ಕ್ಷೇಮಾಭಿವೃದ್ದಿ ಸಂಘದ ಸಂಚಾಲಕಿ ಗಾಯತ್ರಿ, ವಿದ್ಯಾರ್ತಿಗಳಾದ ಡೋನಾ, ಮತ್ತು ವೀಣಾ ಕಾರ್ಯಕ್ರಮ ನಿರೂಪಿಸಿ. ವಂದಿಸಿದರು. ಕಾರ್ಯಕ್ರಮದಲ್ಲಿ ಕಾವೇರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರು, ಪ್ರೌಢ ಶಾಲೆಯ ಶಿಕ್ಷಕರುಗಳು, ಗ್ರಾಮಸ್ಥರು, ಶಿಬಿರಾರ್ಥಿಗಳು ಹಾಜರಿದ್ದರು. ಕಿಶೋರ್ ಕುಮಾರ್ ಶೆಟ್ಟಿ