ಅಮೃತ್ ನಗರೋತ್ಥಾನ ಕಾರ್ಯಕ್ರಮ:ಫಲಾನುಭವಿಗಳಿಗೆ ಸಹಾಯಧನ
ವಿರಾಜಪೇಟೆ:ಅಮೃತ್ ನಗರೋತ್ಥಾನ ಕಾರ್ಯಕ್ರಮದ ಹಂತ-04 ರ ಅಡಿಯಲ್ಲಿ, ವೈಯುಕ್ತಿಕ ಫಲಾನುಭವಿಗಳಿಗೆ ಸಹಾಯಧನ ನೀಡುವ ಕಾರ್ಯಕ್ರಮ ಇಂದು ವಿರಾಜಪೇಟೆಯಲ್ಲಿ ನೆರವೇರಿತು. ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಕಾರ್ಯಕ್ರಮದಲ್ಲಿ ಭಾಗವಹಿಸಿ, ಆಯ್ದ ಫಲಾನುಭವಿಗಳಿಗೆ ಸಹಾಯಧನವನ್ನು ವಿತರಿಸಿದರು.
ಈ ಯೋಜನೆ ಅಡಿಯಲ್ಲಿ ಅರ್ಹ ಪರಿಶಿಷ್ಟ ಪಂಗಡ ಹಾಗೂ ಅಂಗವಿಕಲ ಫಲಾನುಭವಿಗಳಿಗೆ, ಮನೆ ದುರಸ್ತಿಗೆ, ಕೃತಕ ಕಾಲು ಜೋಡಣೆಗೆ ಸಹಾಯಧನವನ್ನು ವಿತರಿಸಲಾಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶಾಸಕರು, ಸರಕಾರ ಸಮಾಜದಲ್ಲಿ ಅಗತ್ಯ ಇರುವವರಿಗೆ ಅನುಕೂಲ ಆಗಲಿ ಎಂದು ಹಲವಾರು ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅರ್ಹ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಸಹಾಯ ಮಾಡುವುದರಿಂದ ಸಮಾಜವು ಉತ್ತಮ ದಿಕ್ಕಿನಲ್ಲಿ ಸಾಗಲು ಸಹಕಾರಿಯಾಗಲಿದೆ ಎಂದು ಬಣ್ಣಿಸಿದರು. ಈ ಯೋಜನೆ ಅಡಿಯಲ್ಲಿ ಆಯ್ದ ಫಲಾನುಭವಿಗಳು ಇದರ ಲಾಭವನ್ನು ಪಡೆದುಕೊಂಡರು. ಯೋಜನೆಯ ಪರಿಶಿಷ್ಟ ಪಂಗಡ ಹಾಗೂ ದಿವ್ಯಾಂಗರಿಗೆ ಹೆಚ್ಚಿನ ಸಹಾಯ ನೀಡಲಿದ್ದು, ಈ ಸಹಾಯಧನವನ್ನು ಪಡೆದುಕೊಂಡವರು ಇದರ ಸದ್ಬಳಕೆಯನ್ನು ಮಾಡಿ ತಮ್ಮ ಜೀವನವನ್ನು ಸುಸ್ಥಿತಿಯೆಡೆಗೆ ಕೊಂಡೊಯ್ಯಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಪುರಸಭೆ ಮುಖ್ಯಅಧಿಕಾರಿ ನಾಚಪ್ಪ, ಅಧ್ಯಕ್ಷೆ ದೇಚಮ್ಮ ಕಾಳಪ್ಪ, ಉಪಾಧ್ಯಕ್ಷೆ ಫಸಿಯಾ ತಬ್ಸುಂ, ಸದಸ್ಯರಾದ ಮತೀನ್, ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದರು.