ಸಿದ್ದಾಪುರ;ಸಂತ ಅನ್ನಮ್ಮ ಕನ್ನಡ ಮಾಧ್ಯಮ ಶಾಲೆಯಲ್ಲಿ ವಾರ್ಷಿಕ ಪ್ರಶಸ್ತಿ ಪ್ರದಾನ

Feb 12, 2026 - 12:34
Feb 12, 2026 - 12:34
 0  189
ಸಿದ್ದಾಪುರ;ಸಂತ ಅನ್ನಮ್ಮ ಕನ್ನಡ ಮಾಧ್ಯಮ ಶಾಲೆಯಲ್ಲಿ  ವಾರ್ಷಿಕ ಪ್ರಶಸ್ತಿ ಪ್ರದಾನ

ಸಿದ್ದಾಪುರ :- ಸಂತ ಅನ್ನಮ್ಮ ಕನ್ನಡ ಮಾಧ್ಯಮ ಶಾಲೆಯ ವಾರ್ಷಿಕ ಪ್ರಶಸ್ತಿ ಪ್ರದಾನವು ಶಾಲಾ ಸಭಾಂಗಣದಲ್ಲಿ ಅದ್ಧೂರಿಯಾಗಿ ನಡೆಯಿತು. ಕನ್ನಡ ಮಾಧ್ಯಮದಲ್ಲಿ ಮಕ್ಕಳ ಸಾಧನೆ ಕಂಡು ಅತಿಥಿಗಳು ಮುಕ್ತ ಕಂಠದಿಂದ ಶ್ಲಾಘಿಸಿ ಶುಭಕೋರಿದರು.

ಮುಖ್ಯ ಅತಿಥಿಗಳಾದ ವಿರಾಜಪೇಟೆ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರಾಜೇಶ್ ಕೆ. ಆರ್. ಮಾತನಾಡಿ, ಸರಕಾರಿ ಶಾಲೆ ಮಾತ್ರವಲ್ಲದೆ ಖಾಸಾಗಿ ಅನುದಾನಿತ ಶಾಲೆಯಲ್ಲೂ ಸರಕಾರದ ಸೌಲಭ್ಯ ಸಿಗುತ್ತಿದ್ದು ಪೋಷಕರು ತಮ್ಮಮಕ್ಕಳನ್ನು ಕನ್ನಡ ಮಾಧ್ಯಮದಲ್ಲಿ ಸೇರಿಸುವಂತೆ ಸಲಹೆ ನೀಡಿದ ಅವರು, ಮಾತೃಭಾಷೆಯಲ್ಲಿ ವಿದ್ಯಾಭ್ಯಾಸ ಗೈದರೆ ಹೆಚ್ಚಿನ ಅಂಕಗಳಿಸಲು ಸಾಧ್ಯಾವಾಗುತ್ತದೆ ಎಂದರು.

 ಹಳೆ ವಿದ್ಯಾರ್ಥಿ ಹಾಗೂ ಇಂಜಿನಿಯರ್ ಆಂಟೋನಿ ಜೋಸೆಫ್ ಮಾತನಾಡಿ, ಮಕ್ಕಳು ಕನಡ ಮಾಧ್ಯಮದಲ್ಲಿ ಶಿಕ್ಷಣ ಪಡೆಯುವುದರಿಂದ ಹೆಚ್ಚಿನ ಅಂಕಗಳಿಸಲು ಸಾಧ್ಯವಿದ್ದು, ಆಟೋಟದೊಂದಿಗೆ ಕಲಿಯಲ್ಲೂ ಆಸಕ್ತಿವಹಿಸಿ ಮುಖ್ಯವಾಹಿನಿಗೆ ಬರಬೇಕು ಎಂದು ಕರೆ‌ ನೀಡಿದರು

. ಶಾಲಾ ಶಿಕ್ಷಕಿ ಸುಜಾತಾ ಮಾತನಾಡಿ, ಸಂತ ಅನ್ನಮ್ಮ ಕನ್ನಡ ಮಾಧ್ಯಮ ಹಿರಿಯ ಪ್ರಾರ್ಥಮಿಕ ಶಾಲೆಯ ವಿದ್ಯಾರ್ಥಿಗಳು ವಲಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಪ್ರಶಸ್ತಿಗಳಿಸುವುದರೊಂದಿಗೆ, ಕ್ಲಸ್ಟರ್ ಮಟ್ಟದ ಪ್ರತಿಭಾಕಾರಂಜಿಯಲ್ಲಿ ತಮ್ಮ ಪ್ರತಿಭೆ ಅನಾವರಣಗೊಳಿಸಿ ತಾಲೂಕು ಹಾಗೂ ಜಿಲ್ಲಾ ಮಟ್ಟದವಲ್ಲಿ ಸಾಧನೆಮಾಡಿ ಶಾಲೆಗೆ ಕೀರ್ತಿ ತಂದಿದ್ದಾರೆ ಎಂದರು.

ಈ ಸಂಧರ್ಭ ಶಾಲಾ ವ್ಯವಸ್ಥಾಪಕಿ ಸಿಸ್ಟ ರ್ಮಾರ್ಜರಿ, ಸಿಬಿಎಸ್ಸಿ ವಿಭಾಗ ದ ಮುಖ್ಯ ಶಿಕ್ಷಕಿ ಲಿನೆಟ್, ಕನ್ನಡ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಅರ್ಪಿತಾ, ಪದವಿ ಪೂರ್ವ ಕಾಲೇಜು ಪ್ರಾಂಶುಪಾಲೆ ಮೇರಿ ರೆಜೀನ ಥೋಮಸ್ ಹಾಜರಿದ್ದರು.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0