ಆದಿವಾಸಿ ಸಮುದಾಯದ ವಿದ್ಯಾವಂತರಿಗೆ ನೇಮಕಾತಿ ಜಾರಿಗೆ ಆಗ್ರಹಿಸಿ ಮನವಿ

Jun 1, 2026 - 09:16
Jun 1, 2026 - 09:16
 0  334
ಆದಿವಾಸಿ ಸಮುದಾಯದ ವಿದ್ಯಾವಂತರಿಗೆ ನೇಮಕಾತಿ ಜಾರಿಗೆ ಆಗ್ರಹಿಸಿ ಮನವಿ

ಮಡಿಕೇರಿ:-ಕರ್ನಾಟಕ ಸರ್ಕಾರವು 2025-26ನೇ ಸಾಲಿನ ಬಜೆಟ್‌ನಲ್ಲಿ ರಾಜ್ಯದ 13 ಆದಿವಾಸಿ ಸಮುದಾಯಗಳ ವಿದ್ಯಾವಂತರಿಗೆ ನೇರ ನೇಮಕಾತಿ ಮಾಡುವುದಾಗಿ ಘೋಷಿಸಿದ್ದರೂ, ಇದುವರೆಗೂ ಯೋಜನೆ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಆರೋಪಿಸಿ, ಕೊಡಗು ಆದಿವಾಸಿ ಎಜುಕೇಷನ್ ಯೂತ್ ಫೌಂಡೇಶನ್ ವತಿಯಿಂದ ಮಾನ್ಯ ಅಪರ ಜಿಲ್ಲಾಧಿಕಾರಿ ಡಾ.ಸಹನಾ ಎಸ್ ಅವರಿಗೆ ಶುಕ್ರವಾರ ಮನವಿ ಪತ್ರ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಯಾರವ ಸಮಾಜದ ಅಧ್ಯಕ್ಷ ಸಿದ್ದಪ್ಪ ಪಿ.ಕೆ. ಸರ್ಕಾರ ಘೋಷಿಸಿದ ಯೋಜನೆ ಶೀಘ್ರ ಜಾರಿಗೆ ಬಂದು, ಆದಿವಾಸಿ ಸಮುದಾಯದ ವಿದ್ಯಾವಂತ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಅಲ್ಲದೆ, ಸಮುದಾಯದ ಯುವಕರು ಶಿಕ್ಷಣ ಪಡೆದಿದ್ದರೂ ಉದ್ಯೋಗಾವಕಾಶಗಳ ಕೊರತೆಯಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.

ಮನವಿ ಸಲ್ಲಿಸುವ ವೇಳೆ ವಕೀಲರು ತುಳಸಿ ಜೆ.ಆರ್., ಪುಷ್ಪಜಾ ವೈ.ಆರ್. (ಸಂಯೋಜಕರು, ಕೊಡಗು ಆದಿವಾಸಿ ಎಜುಕೇಷನ್ ಯೂತ್ ಫೌಂಡೇಶನ್), ಗಿರಿಜನ ಮುಖಂಡ ಭೋಜಪ್ಪ, ನೇತ್ರ ಹಾಗೂ ಬೋಪಿತ್ ಪಿ.ಬಿ. ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0