ಎ.ಎಸ್.ಪೊನ್ನಣ್ಣ ಅವರನ್ನು ನಿಂದನೆ ಮಾಡಿದ್ದ ವ್ಯಕ್ತಿಯ ಬಂಧನ

Feb 23, 2026 - 20:56
 0  2.2k
ಎ.ಎಸ್.ಪೊನ್ನಣ್ಣ ಅವರನ್ನು ನಿಂದನೆ ಮಾಡಿದ್ದ ವ್ಯಕ್ತಿಯ ಬಂಧನ

ಮಡಿಕೇರಿ; ಸಾಮಾಜಿಕ ಜಾಲತಾಣದಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ನವರ ಕುರಿತು ಅವಹೇಳನಕಾರಿ ಪದ ಬಳಕೆ ಮಾಡಿ ಅಜ್ಜಿಕುಟ್ಟಿರ ಕುಟುಂಬಸ್ಥರ ಮೇಲೆ ಅವಾಚ್ಯ ಪದ ಬಳಕೆ ಮಾಡಿ ನಿಂದಿಸಿದ ಆರೋಪಿಯನ್ನು ಕೊಡಗು ಪೋಲೀಸರು ಬಂಧಿಸಿದ್ದಾರೆ.

 ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯನ್ನು ಶಿಷ್ಟಾಚಾರ ಬದಿಗಿರಿಸಿ ಚಿಕಿತ್ಸೆ ಗೆ ಸಹಕಾರ ನೀಡಿ ಮಾನವೀಯತೆ ಮೆರದ ಎ.ಎಸ್.ಪೊನ್ನಣ್ಣ ನವರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ಸಂದೇಶ ಹರಿದಾಡಿತ್ತು.ಈ ಸಂದೇಶವನ್ನು ಉದ್ದೇಶಿಸಿ ಪತ್ರಕರ್ತ ಎಂದು ಬಿಂಬಿಸಿಕೊಂಡ ನಂದೀಶ್ ಎಂಬ ವ್ಯಕ್ತಿ ಎ.ಎಸ್.ಪೊನ್ನಣ್ಣ ಹಾಗೂ ಅಜ್ಜಿಕುಟ್ಟಿರ ಕುಟುಂಬಸ್ಥರ ಬಗ್ಗೆ ಅತ್ಯಂತ ಕೀಳುಮಟ್ಟದ ಪದ ಬಳಕೆ ಮಾಡಿ ಸಂದೇಶ ಹರಿಯಬಿಟ್ಟು ಕಿಡಿಗೇಡಿತನ ಮಾಡಿದ್ದ.

 ಜಿಲ್ಲೆಯಾದ್ಯಂತ ಸಾರ್ವಜನಿಕರು ಈ ಕೃತ್ಯವನ್ನು ತೀವ್ರವಾಗಿ ಖಂಡಸಿದ್ದರು.ಅನೇಕ ಕಡೆಗಳಲ್ಲಿ ದೂರು ದಾಖಲಾಗಿತ್ತು. ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದ ಕೊಡಗು ಪೋಲೀಸರು ಕಿಡಿಗೇಡಿಯನ್ನು ಬಂಧಿಸಿ ತರುವಲ್ಲಿ ಯಶಸ್ವಿಯಾಗಿದ್ದಾರೆ. ಕೊಡಗು ಪೋಲೀಸರ ಕಾರ್ಯಕ್ಷಮತೆಗೆ ಜಿಲ್ಲೆಯ ನಾಗರೀಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

What's Your Reaction?

Like Like 5
Dislike Dislike 0
Love Love 2
Funny Funny 2
Angry Angry 1
Sad Sad 0
Wow Wow 1