Kodagu

ಅಕ್ರಮವಾಗಿ ಬೀಟೆ ಮರ ಕಡಿದು ಸಾಗಾಟಕ್ಕೆ ಯತ್ನ

admincoorgdaily

ಅಕ್ರಮವಾಗಿ ಬೀಟೆ ಮರ ಕಡಿದು ಸಾಗಾಟಕ್ಕೆ ಯತ್ನ

ನಾಪೋಕ್ಲು: ಸಮೀಪದ ಕೋಕೇರಿ ಗ್ರಾಮದ ತೋಟ ಒಂದರಲ್ಲಿ ಅಕ್ರಮವಾಗಿ ಬೀಟೆ ಮರಗಳನ್ನು ಕಡಿದು ಸಾಗಾಟಕ್ಕೆ ಯತ್ನಿಸಿರು ವ ಪ್ರಕರಣ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ 33 ನಾ ಟಾಗಳನ್ನು ವಶಪಡಿಸಿಕೊಂಡಿದ್ದು ಆರೋಪಿಗಳು ಪರಾರಿಯಾಗಿದ್ದಾರೆ.

 ಕೋಕೇರಿ ಗ್ರಾಮದ ಬಿಳಿಯಂಡ್ರ ಕುಟುಂಬಕ್ಕೆ ಸೇರಿದ ತೋಟದಿಂದ ಅಕ್ರಮವಾಗಿ ಬೀಟೆ ಮರಗಳನ್ನು ಕಡಿದು ಸಾಗಾಟ ಮಾಡಲು ಎತ್ತಿಸಿರುವ ಕುರಿತು ಬಿ. ಯು. ರಾಮಯ್ಯ ಎಂಬವರು ನೀಡಿದ ದೂರಿನ ಅನ್ವಯ ಅರಣ್ಯ ಇಲಾಖೆ ಕಾರ್ಯಾಚರಣೆ ವಶಪಡಿಸಿಕೊಂಡಿದ್ದಾರೆ ಇಲಾಖೆಯಿಂದ ಯಾವುದೇ ಅನುಮತಿ ಇಲ್ಲದೆ ಅಕ್ರಮವಾಗಿ ಬೀಟೆ ಮರಗಳನ್ನು ಕಡಿದು ಸಾಗಾಟಕ್ಕೆ ಯತ್ನಿಸಿರುವ ಆರೋಪಿಗಳ ವಿರುದ್ಧ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿಕೊಂಡಿದ್ದು ತಲೆಮರಿಸಿಕೊಂಡಿರುವ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಮುಂದುವರೆದಿದೆ ಕಾರ್ಯಾಚರಣೆಯಲ್ಲಿ ಆರ್ಎಫ್ಒ ಶಿವರಾಮ್ ಡಿಆರ್ಎಫ್ ಶ್ರೀನಿವಾಸ್, ಲೋಕೇಶ್, ಬೀಟ್ ಫಾರೆಸ್ಟರ್ ನಂದೀಶ್, ಅಣ್ಣ ಸಾಗಡೆ ,ಆರ್ ಆರ್ ಟಿ ಸಿಬ್ಬಂದಿಗಳು ಪಾಲ್ಗೊಂಡಿದ್ದರು.