Kodagu

ಕೊಡಗು ಜಿಲ್ಲಾ ಬಿಜೆಪಿ ಸಂಘಟನೆಯನ್ನು ಮತ್ತಷ್ಟು ಶಕ್ತಿದಾಯಕವಾಗಿ ಬೆಳೆಸುವಂತೆ ಪಕ್ಷದ ಕಾರ್ಯಕರ್ತರಿಗೆ ಬಿ.ವೈ ವಿಜಯೇಂದ್ರ ಕರೆ

admincoorgdaily

ಕೊಡಗು ಜಿಲ್ಲಾ ಬಿಜೆಪಿ ಸಂಘಟನೆಯನ್ನು ಮತ್ತಷ್ಟು ಶಕ್ತಿದಾಯಕವಾಗಿ ಬೆಳೆಸುವಂತೆ ಪಕ್ಷದ ಕಾರ್ಯಕರ್ತರಿಗೆ ಬಿ.ವೈ ವಿಜಯೇಂದ್ರ ಕರೆ

ಶನಿವಾರಸಂತೆ;ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಶನಿವಾರ ಸಮೀಪದ ಖಾಸಗಿ ರೆಸಾರ್ಟ್ ನಲ್ಲಿ ನಡೆದ ಬಿಜೆಪಿ ಕೊಡಗು ಜಿಲ್ಲಾ ಕಾರ್ಯಕಾರಣಿ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ದೊಡ್ಡ ಭ್ರಷ್ಟಾಚಾರಿಯಾದ ಡಿ.ಕೆ.ಶಿವಕುಮಾರ್ ಅವರ ಬಾಯಿಯಲ್ಲಿ ರೌಡಿಗಳನ್ನು ಮಟ್ಟ ಹಾಕುವಂತೆ ಹೇಳಿರುವುದು ಅಚ್ಚರಿ ತಂದಿದೆ.ಕಾಂಗ್ರಸ್ ಸರಕಾರ ಯಾವಾಗಾಲದರೂ ಬೀಳಬಹುದು. ಸರಕಾರದಲ್ಲಿ ಮೂರನೇ ಮಖ್ಯಮಂತ್ರಿ ಆದರೂ ಅಚ್ಚರಿ ಇಲ್ಲ.ಕಾಂಗ್ರೆಸ್ ಸರಕಾರದಲ್ಲಿ ಸಚಿವ ಸ್ಥಾನ ಪಡೆಯಲು ಪೇಮೆಂಟ್ ಕೋಟ ಮತ್ತು ಮ್ಯಾನೇಜ್‌ಮೆಂಟ್ ಕೋಟ ಎಂದು ಕಾಂಗ್ರೆಸ್ ವಿಂಗಡಣೆ ಮಾಡಿದೆ.ಅದರಂತೆ ಸಚಿವರಾಗುತ್ತಾರೆ ಎಂದ ಅವರು, ಈಗಾಗಲೇ ಅನೇಕ ಶಾಸಕರು ದೆಹಲಿಯಲ್ಲಿ ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸುತ್ತಿದ್ದಾರೆ.ಕಾಂಗ್ರೆಸ್ ಸರಕಾರದಿಂದ ಅಭಿವೃದ್ದಿ ಕಾಣಲು ಸಾಧ್ಯವಿಲ್ಲ.ಬಿಜೆಪಿ ಸಂಘಟನೆಯಲ್ಲಿ ಕೊಡಗು ಜಿಲ್ಲೆ ರಾಜ್ಯಕ್ಕೆ ಮಾದರಿಯಾಗಿದೆ ಈ ಹಿಂದೆ ಸಣ್ಣ ತಪ್ಪಿನಿಂದ ಎರಡು ಕ್ಷೇತ್ರವನ್ನು ನಾವು ಕಳೆದುಕೊಂಡಿದ್ದೇವೆ ಮುಂದೆ ಈ ಆಗದಂತೆ ನೋಡಿಕೊಳ್ಳಬೇಕು ಈ ನಿಟ್ಟಿನಲ್ಲಿ ಕೊಡಗು ಜಿಲ್ಲೆ ಬಿಜೆಪಿ ಸಂಘಟನೆಯನ್ನು ಮತ್ತಷ್ಟು ಶಕ್ತಿದಾಯಕವಾಗಿ ಬೆಳೆಸುವಂತೆ ಪಕ್ಷದ ಕಾರ್ಯಕರ್ತರಿಗೆ ಮನವಿ ಮಾಡಿದರು.

ಕೊಡಗು-ಮೈಸೂರು ಸಂಸದ ಯದುವೇರ್ ಕೃಷ್ಣದತ್ತ ಒಡೆಯರ್ ಮಾತನಾಡಿ,ಜಿಲ್ಲೆಯಲ್ಲಿ ವನ್ಯಜೀವಿ ಮಾನವ ಸಂಘರ್ಷ ಸೇರಿದಂತೆ ಅನೇಕ ಸಮಸ್ಯೆಗಳಿವೆ.ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುವಲ್ಲಿ ಕಾಂಗ್ರೆಸ್ ಸರಕಾರ ವಿಫಲವಾಗಿದೆ.ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸರಕಾರದ ವಿರುದ್ದ ವ್ಯವಸ್ಥಿತ ಹೋರಾಟಕ್ಕೆ ರೂಪರೇಶ ಸಿದ್ದ ಪಡಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಮುಂದಿನ ಎಲ್ಲಾ ಚುನಾವಣೆಗಳಲ್ಲೂ ಬಿಜೆಪಿ ಹೆಚ್ಚು ಸ್ಥಾನ ಪಡೆಯಲು ಎಲ್ಲಾರೂ ಪ್ರಾಮಾಣಿಕವಾಗಿ ಕಲಸ ಮಾಡೋಣ ಎಂದು ಹೇಳಿದರು.

ವೇದಿಕೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ರವಿ ಕಾಳಪ್ಪ, ಮಾಜಿ ಶಾಸಕರಾದ ಕೆ.ಜಿ.ಬೋಪಯ್ಯ, ಎಂ.ಪಿ.ಅಪ್ಪಚ್ಚು ರಂಜನ್, ಎಂಎಲ್‌ಸಿ ಸುಜಾ ಕುಶಾಲಪ್ಪ ಪಕ್ಷದ ಪ್ರಮುಖರಾದ ಡಾ.ನವೀನ್ ಕುಮಾರ್, ಎಸ್.ಜೆ.ಮೇದಪ್ಪ, ಬಿ.ಬಿ.ಭಾರತೀಶ್, ರೀನಾ ಪ್ರಕಾಶ್, ಲೋಕೇಶ್ ಮುಂತಾದವರಿದ್ದರು.