ಚಿಕ್ಕ ಅಳುವಾರದಲ್ಲಿ ಸ್ವಾತಂತ್ರ್ಯ ದಿನಾಚರಣೆ
ಕುಶಾಲನಗರ:ತಾಲೂಕಿನ ಚಿಕ್ಕ ಅಳುವಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. 79ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ವಿಎಸ್ಎಸ್ಎನ್ ನಿರ್ದೇಶಕರಾದ ಗೌರಮಣಿ ನೆರವೇರಿಸಿದರು. ಪುಟ್ಟ ಮಕ್ಕಳ ಸ್ವಾತಂತ್ರ್ಯ ಪ್ರದರ್ಶನ ನಡಿಗೆ ಖಾಸಗಿ ಶಾಲೆಗಳಿಗೂ ನಾಚಿಸುವಂತಿತ್ತು. ತೆರೆದ ಮೈದಾನದಲ್ಲಿ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್. ಡಿ. ಎಂ .ಸಿ ಅಧ್ಯಕ್ಷರಾದ ಧರ್ಮವಹಿಸಿದ್ದರು. ಮಕ್ಕಳಿಂದ ಭಾಷಣ, ದೇಶಭಕ್ತಿ ಯನ್ನು ಉಕ್ಕಿಸುವಂತಿತ್ತು.
ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶೋಭಾ ಪ್ರಕಾಶ್, ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರಾದ ಕೆ.ಬಿ ದೇವರಾಜು, ಶ್ರೀ ಅಳುವಾರದಮ್ಮ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ರಮೇಶ್, ವಿ.ಎಸ್.ಎಸ್ಎನ್ ನಿರ್ದೇಶಕರಾದ ಮೂರ್ತಿ, ಲ್ಯಾಂಡ್ ಸಮಿತಿ ಸದಸ್ಯರಾದ ಸಂಜೀವಯ್ಯ, ಅಂಬೇಡ್ಕರ್ ಯುವಕ ಸಂಘದ ಅರ್ಜುನ್,ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಅಕ್ಷಯ್, ರಾಜೇಶ್,ಮಂಜು ನಂಜುಂಡಯ್ಯ ಸೋಮಶೇಖರ್ ,ಹಾರ್ವಯ್ಯ,ಶ್ರೀಮತಿ ಇಂದಿರಾ, ಗಿರಿಜಾ,ಸುಮಲತಾ ರೂಪ,ಕುಮಾರಿ ತುಳಸಿ .ಮುಂತಾದ ಹಳೆಯ ವಿದ್ಯಾರ್ಥಿಗಳು,ವಿವಿಧ ಸಂಘಟನೆಗಳ ಸದಸ್ಯರು ಹಾಜರಿದ್ದರು.
ಸರ್ಕಾರಿ ಶಾಲೆಗಳು ಮುಚ್ಚುತ್ತಿರುವ ಈ ಸಮಯದಲ್ಲಿ ನಮ್ಮ ಶಾಲೆಯನ್ನು ಉಳಿಸಿ ಬೆಳೆಸಲು ಸರ್ವರೂ ಶ್ರಮವಹಿಸಬೇಕೆಂದು ತೀರ್ಮಾನಿಸಲಾಯಿತು. ಈ ಒಂದು ಸಂದರ್ಭದಲ್ಲಿ ಜಿಲ್ಲಾ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀಯುತ ಪ್ರಸನ್ನ ರವರು ಕಾರ್ಯಕ್ರಮವನ್ನು ನಿರೂಪಿಸಿದರು ಹಾಗೂ ಮುಖ್ಯ ಶಿಕ್ಷಕರಾದವಿಜಯಲಕ್ಷ್ಮಿ , ಸುಮಲತಾ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.